AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡಿ ದಾಳಿ ಬಳಿಕ ‘ಬೆಳವಣಿಗೆ’ ಬಗ್ಗೆ ಮಾರ್ಮಿಕವಾಗಿ ಪೋಸ್ಟ್​ ಮಾಡಿದ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ

‘ನಿಮಗೆ ಅಗೌರವ ಆಗುತ್ತಿದೆ ಎಂಬುದು ತಿಳಿದಾಗಲೂ ಶಾಂತವಾಗಿ ಇರುವುದನ್ನು ಕಲಿಯುವುದು ಒಂದು ಬೇರೆ ರೀತಿಯ ಬೆಳವಣಿಗೆ’ ಎಂದು ಉದ್ಯಮಿ ರಾಜ್​ ಕುಂದ್ರಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇಡಿ ಅಧಿಕಾರಿಗಳು ದಾಳಿ ಮಾಡಿದ ನಂತರ ರಾಜ್​ ಕುಂದ್ರಾ ಕಡೆಯಿಂದ ಬಂದ ಮೊದಲ ಪ್ರತಿಕ್ರಿಯೆ ಇದು. ಇಡಿ ದಾಳಿಯ ಬಗ್ಗೆಯೇ ಅವರು ಈ ರೀತಿಯಾಗಿ ಪೋಸ್ಟ್​ ಮಾಡಿದ್ದಾರೆ ಎಂದು ನೆಟ್ಟಿಗರು ಊಹಿಸಿದ್ದಾರೆ.

ಇಡಿ ದಾಳಿ ಬಳಿಕ ‘ಬೆಳವಣಿಗೆ’ ಬಗ್ಗೆ ಮಾರ್ಮಿಕವಾಗಿ ಪೋಸ್ಟ್​ ಮಾಡಿದ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ
ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ
ಮದನ್​ ಕುಮಾರ್​
|

Updated on: Apr 19, 2024 | 5:54 PM

Share

ಉದ್ಯಮಿ, ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್​ ಕುಂದ್ರಾಗೆ ಕಾನೂನಿನ ತೊಡಕು ಉಂಟಾಗಿದೆ. ಮುಂಬೈ ಮತ್ತು ಪುಣೆಯಲ್ಲಿ ಇರುವ ಅವರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ (ED Raid) ಮಾಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದೆ. ರಾಜ್​ ಕುಂದ್ರಾ ಅವರು ಪತ್ನಿ ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ನೋಂದಾಯಿಸಿದ ಸುಮಾರು 97 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯ ಬಳಿಕ ರಾಜ್​ ಕುಂದ್ರಾ (Raj Kundra) ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.

‘ನಿಮಗೆ ಅಗೌರವ ತೋರುತ್ತಿರುವಾಗಲೂ ಶಾಂತವಾಗಿ ಇರುವುದನ್ನು ಕಲಿಯುವುದು ಒಂದು ಬೇರೆ ರೀತಿಯ ಬೆಳವಣಿಗೆ’ ಎಂದು ರಾಜ್​ ಕುಂದ್ರಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇಡಿ ದಾಳಿ ಮಾಡಿದ ಬಳಿಕ ಅವರ ಕಡೆಯಿಂದ ಬಂದಿರುವ ಮೊದಲ ಪ್ರತಿಕ್ರಿಯೆ ಇದು. ಇಡಿ ದಾಳಿಗೆ ಸಂಬಂಧಿಸಿದಂತೆಯೇ ಅವರು ಈ ರೀತಿ ಪೋಸ್ಟ್​ ಮಾಡಿದ್ದಾರೆ ಎಂದು ನೆಟ್ಟಿಗರು ಊಹಿಸಿದ್ದಾರೆ.

ಈ ಹಿಂದೆ ರಾಜ್​ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದಲ್ಲಿ ಜೈಲು ಸೇರಿದ್ದರು. ಆ ಘಟನೆ ನಡೆದ ತಕ್ಷಣ ಅವರು ಸೋಶಿಯಲ್ ಮೀಡಿಯಾದಿಂದ ಮಾಯವಾಗಿದ್ದರು. ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು ನಿಷ್ಕ್ರಿಯಗೊಳಿದ್ದರು. ಅಷ್ಟೇ ಅಲ್ಲದೇ ಪೂರ್ತಿ ಮುಖ ಮುಚ್ಚಿಕೊಂಡು ತಿರುಗಾಡುತ್ತಿದ್ದರು. ಆದರೆ ಈ ಬಾರಿ ಅವರು ಆ ರೀತಿ ಕಣ್ತಪ್ಪಿಸಿಕೊಂಡು ಓಡಾಡುವುದಾಗಲಿ, ಸೋಶಿಯಲ್​ ಮೀಡಿಯಾದಿಂದ ಕಣ್ಮರೆ ಆಗುವುದಾಗಲಿ ಮಾಡುವುದಿಲ್ಲ ಎನಿಸುತ್ತದೆ. ಆ ಉದ್ದೇಶದಿಂದಲೇ ಮಾರ್ಮಿಕವಾಗಿ ಪೋಸ್ಟ್​ ಮಾಡಿದಂತಿದೆ.

ಇದನ್ನೂ ಓದಿ: ಇಡಿ ದಾಳಿ ಬಳಿಕ ಸಲ್ಮಾನ್​ ಖಾನ್​ ಮನೆಗೆ ಓಡೋಡಿ ಬಂದ ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ ಅವರು ಕೂಡ ಇಡಿ ದಾಳಿಯಿಂದ ಹೆಚ್ಚೇನೂ ತಲೆ ಕೆಡಿಸಿಕೊಂಡಂತಿಲ್ಲ. ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ತಮ್ಮ ಆಸ್ತಿಯನ್ನು ವಶಪಡಿಸಿಕೊಂಡ ಬಳಿಕ ಶಿಲ್ಪಾ ಶೆಟ್ಟಿ ಅವರು ಸಲ್ಮಾನ್​ ಖಾನ್​ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದ ವಿಡಿಯೋ ವೈರಲ್​ ಆಗಿತ್ತು. ಶಿಲ್ಪಾ ಶೆಟ್ಟಿ ಜೊತೆ ಅವರ ತಾಯಿ ಸುನಂದಾ ಶೆಟ್ಟಿ ಕೂಡ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More