20 ಕೋಟಿ ಕೊಟ್ಟು ಪ್ರೇಯಸಿ ಮಲೈಕಾ ಅರೋರಾ ಮನೆ ಸಮೀಪವೇ ಸ್ಕೈ ವಿಲ್ಲಾ ಖರೀದಿಸಿದ ಅರ್ಜುನ್​ ಕಪೂರ್​

 ಟಾಪ್​ ಐಟಂ ಡ್ಯಾನ್ಸರ್​ ಆಗಿದ್ದ ಮಲೈಕಾ ಅರೋರಾ ಅವರಿಗೆ ಈಗ 47 ವರ್ಷ ವಯಸ್ಸು. ಅವರನ್ನು ಪ್ರೀತಿಸುತ್ತಿರುವ ನಟ ಅರ್ಜುನ್​ ಕಪೂರ್​ಗೆ 35ರ ಪ್ರಾಯ.

20 ಕೋಟಿ ಕೊಟ್ಟು ಪ್ರೇಯಸಿ ಮಲೈಕಾ ಅರೋರಾ ಮನೆ ಸಮೀಪವೇ ಸ್ಕೈ ವಿಲ್ಲಾ ಖರೀದಿಸಿದ ಅರ್ಜುನ್​ ಕಪೂರ್​
ಮಲೈಕಾ ಅರೋರಾ-ಅರ್ಜುನ್​ ಕಪೂರ್

Updated on: May 30, 2021 | 6:13 PM

ಬಾಲಿವುಡ್​ ನಟ ಅರ್ಜುನ್​ ಕಪೂರ್​ ಮತ್ತು ನಟಿ ಮಲೈಕಾ ಅರೋರಾ ಪರಸ್ಪರ ಪ್ರೀತಿಸುತ್ತಿದ್ದಾರೆ. ವಯಸ್ಸಿನಲ್ಲಿ ಮಲೈಕಾಗಿಂತ ಅರ್ಜುನ್​ 12 ವರ್ಷ ಚಿಕ್ಕವನಾದರೂ ಇದು ಅವರ ಪ್ರೀತಿಗೆ ಯಾವುದೇ ಅಡ್ಡಿ ಉಂಟು ಮಾಡಿಲ್ಲ. ಈಗ ಮಲೈಕಾ ಮನೆ ಸಮೀಪವೇ ದುಬಾರಿ ಬೆಲೆಯ ವಿಲ್ಲಾ ಒಂದನ್ನು ಅರ್ಜುನ್​ ಕಪೂರ್​ ಖರೀದಿಸಿದ್ದಾರೆ. ಈ ಮೂಲಕ ಇಬ್ಬರೂ ನೆರೆಹೊರೆಯವರಾಗಿದ್ದಾರೆ.

 ಟಾಪ್​ ಐಟಂ ಡ್ಯಾನ್ಸರ್​ ಆಗಿದ್ದ ಮಲೈಕಾ ಅರೋರಾ ಅವರಿಗೆ ಈಗ 47 ವರ್ಷ ವಯಸ್ಸು. ಅವರನ್ನು ಪ್ರೀತಿಸುತ್ತಿರುವ ನಟ ಅರ್ಜುನ್​ ಕಪೂರ್​ಗೆ 35ರ ಪ್ರಾಯ. ಮಲೈಕಾಗೆ ಮದುವೆ ಆಗಿ ಒಂದು ಮಗು ಕೂಡ ಇದೆ. ನಟ, ನಿರ್ಮಾಪಕ ಅರ್ಬಾಜ್​ ಖಾನ್​​ ಜೊತೆ ಮದುವೆ ಆಗಿದ್ದ ಮಲೈಕಾ ನಂತರ ವಿಚ್ಛೇದನ ಪಡೆದಿದ್ದರು. ಈಗ ಮಲೈಕಾ ಮತ್ತು ಅರ್ಜುನ್​ ಹಾಯಾಗಿ ಸುತ್ತಾಟ ನಡೆಸುತ್ತಿದ್ದಾರೆ. ಓಡಾಟಕ್ಕೆ ಹತ್ತಿರವಾಗಲಿ ಎನ್ನುವ ಕಾರಣಕ್ಕೆ ಅರ್ಜುನ್​ 20 ಕೋಟಿ ಮೌಲ್ಯದ ಐಷಾರಾಮಿ ಸ್ಕೈ ವಿಲ್ಲಾ ಕೂಡ ಖರೀದಿಸಿದ್ದಾರೆ.

ಬಾಂದ್ರಾ ಸಮೀಪದಲ್ಲೇ ಅರ್ಜುನ್​ ಕಪೂರ್​ ವಿಲ್ಲಾ ಖರೀದಿ ಮಾಡಿದ್ದಾರೆ. ಇದು ಮಲೈಕಾ ಅರೋರ ಅವರ ಲಕ್ಸುರಿ ಮನೆ ಸಮೀಪವೇ ಇದೆ. ಈ ವಿಲ್ಲಾವನ್ನು ಮಲೈಕಾ ತುಂಬಾನೇ ಇಷ್ಟಪಟ್ಟಿದ್ದರು ಎನ್ನಲಾಗಿದೆ. ಶಾರುಖ್​ ಖಾನ್​, ಸಲ್ಮಾನ್​ ಖಾನ್​, ಕರೀನಾ ಕಪೂರ್​, ರಣಬೀರ್​ ಕಪೂರ್​ ಮನೆ ಕೂಡ ಇದೇ ಭಾಗದಲ್ಲಿದೆ.

ಜೂನ್​ 26 ಅರ್ಜುನ್​ ಕಪೂರ್​ ಬರ್ತ್​ಡೇ. ಇದಕ್ಕೂ ಮೊದಲೇ ಅವರು ತಮಗೆ ತಾವೇ ಗಿಫ್ಟ್​ ಒಂದನ್ನು ಕೊಟ್ಟುಕೊಂಡಿದ್ದರು. ದುಬಾರಿ ಬೆಲೆಯ ಲ್ಯಾಂಡ್​ ರೋವರ್​ ಎಸ್​ಯುವಿ ಖರೀದಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿತ್ತು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅರ್ಜುನ್​ ಕಪೂರ್​ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ‘ನನ್ನ ಖಾಸಗಿ ಜೀವನದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಯಾಕೆಂದರೆ ನಾವು ನಮ್ಮ ಸಂಗಾತಿಯನ್ನು ಗೌರವಿಸಬೇಕು’ಎಂದು ಅರ್ಜುನ್​ ಕಪೂರ್​ ಹೇಳಿದ್ದರು.

ಇದನ್ನೂ ಓದಿ: 12 ವರ್ಷ ಹಿರಿಯ ಮಹಿಳೆ ಜತೆಗಿನ ಪ್ರೀತಿ ಬಗ್ಗೆ ಬಾಯಿ ಬಿಟ್ಟ ಅರ್ಜುನ್​ ಕಪೂರ್​; ಬೇರೆ ಕಾರಣಕ್ಕೆ ತಂದೆ ಬೋನಿ ಕಪೂರ್​ ಕಣ್ಣೀರು

Published On - 6:06 pm, Sun, 30 May 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us