ಸಂಜು ವೆಡ್ಸ್ ಗೀತಾ 2: ಅರುಣ್ ಸಾಗರ್ ಹಾಡಿದ ಚೈನೀಸ್ ಹಾಡು ಕೇಳಿ
Arun Sagar Chinees Song: ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಅರುಣ್ ಸಾಗರ್ ಹಾಡಿದ ಚೈನೀಸ್ ಹಾಡು ಸಖತ್ ಗಮನ ಸೆಳೆಯಿತು. ನೀವೂ ಕೇಳಿ...
ಶ್ರೀನಗರ ಕಿಟ್ಟಿ (Sri Nagara Kitty), ರಮ್ಯಾ ನಟಿಸಿದ್ದ ‘ಸಂಜು ವೆಡ್ಸ್ ಗೀತಾ’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾದ ಹಾಡುಗಳಂತೂ ಭಾರಿ ಜನಪ್ರಿಯಗೊಂಡಿದ್ದವು. ಹಲವು ವರ್ಷಗಳ ಬಳಿಕ ಈಗ ಮತ್ತು ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಎರಡನೇ ಭಾಗ ಬರುತ್ತಿದೆ. ಮೊದಲ ಸಿನಿಮಾದ ಕತೆಯ ಮುಂದಿನ ಭಾಗ ಇದಲ್ಲ, ಬದಲಿಗೆ ಇದೇ ಹೊಸ ಕತೆ. ‘ಸಂಜು ವೆಡ್ಸ್ ಗೀತಾ’ ನಿರ್ದೇಶಿಸಿದ್ದ ನಾಗಶೇಖರ್ ಅವರೇ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ಶ್ರೀನಗರ ಕಿಟ್ಟಿ ಅವರೇ ಇದ್ದಾರೆ, ನಾಯಕಿಯಾಗಿ ರಮ್ಯಾ ಬದಲಿಗೆ ರಚಿತಾ ರಾಮ್ ಬಂದಿದ್ದಾರೆ. ಆ ಸಿನಿಮಾದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದ ಅರುಣ್ ಸಾಗರ್ ಈ ಸಿನಿಮಾದಲ್ಲಿಯೂ ಇದ್ದಾರೆ. ಸಿನಿಮಾದ ಟೀಸರ್ ಲಾಂಚ್ ಇವೆಂಟ್ ಇಂದು (ಡಿಸೆಂಬರ್ 29) ನಡೆದಿದ್ದು, ಕಾರ್ಯಕ್ರಮದಲ್ಲಿ ಅರುಣ್ ಸಾಗರ್ ಹಾಡಿದ ಚೈನೀಸ್ ಹಾಡು ಸಖತ್ ಗಮನ ಸೆಳೆದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ