‘ನನ್ನನ್ನು ಪ್ರತಾಪ್ ತಂದೆ ಎಂದು ಗುರುತಿಸುತ್ತಾರೆ, ಸೆಲ್ಫಿ ಕೇಳ್ತಾರೆ’; ಹೆಮ್ಮೆಯಿಂದ ಹೇಳಿಕೊಂಡ ಪ್ರತಾಪ್ ತಂದೆ
‘ಬಿಗ್ ಬಾಸ್’ಗೆ ಬರುವುದಕ್ಕೂ ಮೊದಲು ಪ್ರತಾಪ್ ಎಂದರೆ ಸುಳ್ಳು ಹೇಳುವ ವ್ಯಕ್ತಿ ಎಂದೇ ಎಲ್ಲರೂ ಗುರುತಿಸುತ್ತಿದ್ದರು. ಆದರೆ, ಈಗ ಅವರ ಮೇಲೆ ಇದ್ದ ಅಭಿಪ್ರಾಯ ಅನೇಕರಿಗೆ ಬದಲಾಗಿದೆ. ಹೊರ ಜಗತ್ತಿನಲ್ಲಿ ಪ್ರತಾಪ್ ತಂದೆ ತಾಯಿಯನ್ನು ನೋಡುವ ರೀತಿ ಕೂಡ ಬದಲಾಗಿದೆ.
ಬಿಗ್ ಬಾಸ್ ಮನೆಗೆ ಡ್ರೋನ್ ಪ್ರತಾಪ್ (Drone Prathap) ಅವರ ತಂದೆ ತಾಯಿಯ ಆಗಮನ ಆಗಿತ್ತು. ಅವರು ಬಂದು ಪ್ರತಾಪ್ಗೆ ಧೈರ್ಯ ತುಂಬಿದ್ದಾರೆ. ಈ ಕ್ಷಣವನ್ನು ಕಣ್ತುಂಬಿಕೊಂಡು ವೀಕ್ಷಕರು ಖುಷಿಪಟ್ಟಿದ್ದಾರೆ. ಬಿಗ್ ಬಾಸ್ ನಮ್ಮನ್ನು ಒಂದು ಮಾಡಿದೆ ಎಂದು ಪ್ರತಾಪ್ ಅವರ ತಂದೆ ಮರಿ ಮಾದಯ್ಯ ಹೇಳಿಕೊಂಡಿದ್ದಾರೆ. ಅವರು ಬಿಗ್ ಬಾಸ್ ಹಾಗೂ ಸುದೀಪ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಈ ಮಧ್ಯೆ ಹೊರ ಜಗತ್ತಿನಲ್ಲಿ ತಮ್ಮನ್ನು ಜನರು ಯಾವ ರೀತಿಯಲ್ಲಿ ಗುರುತಿಸುತ್ತಿದ್ದಾರೆ ಎಂಬುದನ್ನು ಮರಿ ಮಾದಯ್ಯ ವಿವರಿಸಿದ್ದಾರೆ.
‘ಬಿಗ್ ಬಾಸ್’ಗೆ ಬರುವುದಕ್ಕೂ ಮೊದಲು ಪ್ರತಾಪ್ ಎಂದರೆ ಸುಳ್ಳು ಹೇಳುವ ವ್ಯಕ್ತಿ ಎಂದೇ ಎಲ್ಲರೂ ಗುರುತಿಸುತ್ತಿದ್ದರು. ಆದರೆ, ಈಗ ಅವರ ಮೇಲೆ ಇದ್ದ ಅಭಿಪ್ರಾಯ ಅನೇಕರಿಗೆ ಬದಲಾಗಿದೆ. ಮುಗ್ಧ, ತಂತ್ರಗಾರಿಕೆ ಹೊಂದಿರುವ ವ್ಯಕ್ತಿ ಎಂದು ಎಲ್ಲರೂ ಕರೆಯುತ್ತಿದ್ದಾರೆ. ಹೊರ ಜಗತ್ತಿನಲ್ಲಿ ಪ್ರತಾಪ್ ತಂದೆ ತಾಯಿಯನ್ನು ನೋಡುವ ರೀತಿ ಕೂಡ ಬದಲಾಗಿದೆ. ಈ ಬಗ್ಗೆ ಅವರ ತಂದೆ ಮಾತನಾಡಿದ್ದಾರೆ.
ಈ ಮೊದಲು ಪ್ರತಾಪ್ ಅವರು ಬಿಗ್ ಬಾಸ್ನಲ್ಲಿ ತಮ್ಮ ಕಷ್ಟದ ಬಗ್ಗೆ ಹೇಳಿಕೊಂಡಿದ್ದರು. ‘ನನಗೆ ವಿಷ ಹಾಕಿ ಸಾಯಿಸುವಂತೆ ಅಮ್ಮನಿಗೆ ನೆಂಟರೇ ಹೇಳಿದ್ದರು’ ಎಂದು ಕಣ್ಣೀರು ಹಾಕಿದ್ದರು ಪ್ರತಾಪ್. ಈ ರೀತಿ ಮಾತನಾಡಿದವರೇ ಬಂದು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ‘ನಾನು ಕಾರ್ಯಕ್ರಮಕ್ಕೆ ಹೋಗಲಿ ಅಥವಾ ಬಸ್ನಲ್ಲಿ ಹೋಗಲಿ ಎಲ್ಲರೂ ಬಂದು ನನ್ನ ಗುರುತಿಸುತ್ತಾರೆ. ನೀವು ಪ್ರತಾಪ್ ತಂದೆ ಅಲ್ಲವೇ ಎಂದು ಕೇಳುತ್ತಾರೆ. ಆಗ ಖುಷಿ ಹಾಗೂ ಹೆಮ್ಮೆ ಆಗುತ್ತದೆ. ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ. ಪರಮೇಶ್ವರ ಧರೆಗೆ ಇಳಿದಂತೆ ಆಯ್ತು’ ಎಂದಿದ್ದಾರೆ ಮರಿ ಮಾದಯ್ಯ.
ಇದನ್ನೂ ಓದಿ: ಪ್ರತಾಪ್ಗೆ ಬುದ್ಧಿ ಹೇಳುವ ಸಂಗೀತಾ ಪ್ರಯತ್ನ ವ್ಯರ್ಥ: ಮನೆಯಲ್ಲಿ ಏನಿದು ಹೊಸ ಚರ್ಚೆ?
ಪ್ರತಾಪ್ ಅವರ ಆಟದ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ಕುಟುಂಬ ಒಂದಾಗಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಉಚಿತವಾಗಿ ಎಪಿಸೋಡ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ