ಪ್ರತಾಪ್​ಗೆ ಬುದ್ಧಿ ಹೇಳುವ ಸಂಗೀತಾ ಪ್ರಯತ್ನ ವ್ಯರ್ಥ: ಮನೆಯಲ್ಲಿ ಏನಿದು ಹೊಸ ಚರ್ಚೆ?

ಪ್ರತಾಪ್​ಗೆ ಬುದ್ಧಿ ಹೇಳುವ ಸಂಗೀತಾ ಪ್ರಯತ್ನ ವ್ಯರ್ಥ: ಮನೆಯಲ್ಲಿ ಏನಿದು ಹೊಸ ಚರ್ಚೆ?

ಮಂಜುನಾಥ ಸಿ.
|

Updated on: Dec 29, 2023 | 9:33 PM

Prathap-Sangeetha: ಮನೊರಂಜನಾ ಕ್ಷೇತ್ರದಿಂದ ಬಂದವರು ಹಾಗೂ ಅದರ ಹೊರತಾದ ಕ್ಷೇತ್ರದಿಂದ ಬಂದವರೂ ಎಂಬ ವಿಷಯದ ಮೇಲೆ ಚರ್ಚೆ ಆಗುವಂತೆ ಮಾಡಿದೆ ಡ್ರೋನ್ ಪ್ರತಾಪ್​ರ ಮಾತು. ಬಿಗ್​ಬಾಸ್ ಮನೆಯಲ್ಲಿ ಎಲ್ಲ ಕ್ಷೇತ್ರದವರೂ ಒಂದೇ ಎಂದು ಡ್ರೋನ್ ಪ್ರತಾಪ್​ಗೆ ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ವಿಫಲರಾಗಿದ್ದಾರೆ.

ಬಿಗ್​ಬಾಸ್ (BiggBoss) ಮನೆಯಲ್ಲಿ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ (Drone Prathqap) ಅವರಿಬ್ಬರದ್ದೂ ಪ್ರತ್ಯೇಕ ಗುಂಪಾಗಿದೆ. ಇಬ್ಬರೂ ಕಣ್ಣಿಗೆ ಏಟು ಮಾಡಿಕೊಂಡು ಹೊರಗೆ ಹೋದ ಬಳಿಕ ಅವರ ನಡುವಿನ ಬಂಧ ಗಟ್ಟಿಯಾಗಿದೆ. ಆದರೆ ಈ ಇಬ್ಬರೂ ಸಹ ಆಗಾಗ್ಗೆ ಪರಸ್ಪರ ಸಣ್ಣ-ಪುಟ್ಟ ಜಗಳ ಮಾಡಿಕೊಳ್ಳುವುದುಂಟು. ಮನೊರಂಜನಾ ಕ್ಷೇತ್ರದಿಂದ ಬಂದವರು ಹಾಗೂ ಅದರ ಹೊರತಾದ ಕ್ಷೇತ್ರದಿಂದ ಬಂದವರೂ ಎಂಬ ಟಾಪಿಕ್​ ಮೇಲೆ ಚರ್ಚೆ ಏರ್ಪಡುವಂತೆ ಮಾತನಾಡಿದ್ದಾರೆ. ಸಂಗೀತಾ, ಹಾಗೆಲ್ಲ ಭಿನ್ನ ಎಂದಿಲ್ಲ ಈ ಮನೆಯಲ್ಲಿ ಎಲ್ಲ ಕ್ಷೇತ್ರದವರೂ ಒಂದೇ ಎಂದು ಡ್ರೋನ್ ಪ್ರತಾಪ್​ಗೆ ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ವಿಫಲರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ