‘ದರ್ಶನ್ ಜತೆ ಸಿನಿಮಾ ಸಿಕ್ಕಾಗ ಇವಳು ನಿದ್ರೆಯೇ ಮಾಡಲಿಲ್ಲ’: ಮಗಳ ಬಗ್ಗೆ ಮಾಲಾಶ್ರಿ ಮಾತು
ಮಗಳು ಆರಾಧನಾಗೆ ‘ಕಾಟೇರ’ ಸಿನಿಮಾದ ಚಾನ್ಸ್ ಹೇಗೆ ಸಿಕ್ತು ಎಂಬುದನ್ನು ಮಾಲಾಶ್ರೀ ಅವರು ವಿವರಿಸಿದ್ದಾರೆ. ‘ಮೊದಲ ಸಿನಿಮಾದಲ್ಲೇ ಅಂಥ ದೊಡ್ಡ ಸ್ಟಾರ್ ಜೊತೆ ನಿಂತು ಚಾಲೆಂಜಿಂಗ್ ಆದಂತಹ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಇವಳು ತುಂಬ ಲಕ್ಕಿ’ ಎಂದು ಮಾಲಾಶ್ರೀ ಹೇಳಿದ್ದಾರೆ.
ಹೊಸ ನಟಿ ಆರಾಧನಾ ರಾಮ್ (Aradhana Ram) ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮಾಲಾಶ್ರಿ-ರಾಮು ದಂಪತಿಯ ಪುತ್ರಿ ಆಗಿರುವ ಆರಾಧನಾ ಅವರು ಮೊದಲ ಸಿನಿಮಾದಲ್ಲೇ ದರ್ಶನ್ (Darshan) ಜೊತೆ ನಟಿಸಿದ್ದಾರೆ. ಇಂದು (ಡಿ.29) ಬಿಡುಗಡೆ ಆಗಿರುವ ‘ಕಾಟೇರ’ ಸಿನಿಮಾದಲ್ಲಿ ಅವರ ನಟನೆಗೆ ಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾ ಆಫರ್ ಬಂದಾಗ ಆರಾಧನಾ ನಿದ್ರೆಯೇ ಮಾಡಲಿಲ್ಲ ಎಂದು ಮಾಲಾಶ್ರೀ ಹೇಳಿದ್ದಾರೆ. ಮಗಳಿಗೆ ಹೇಗೆ ಚಾನ್ಸ್ ಸಿಕ್ತು ಎಂಬುದನ್ನು ಅವರು ವಿವರಿಸಿದ್ದಾರೆ. ‘ಮೊದಲ ಸಿನಿಮಾದಲ್ಲೇ ಅಂಥ ದೊಡ್ಡ ಸ್ಟಾರ್ ಜೊತೆ ನಿಂತು ಚಾಲೆಂಜಿಂಗ್ ಆದಂತಹ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಇವಳು ತುಂಬ ಲಕ್ಕಿ’ ಎಂದು ಮಾಲಾಶ್ರೀ (Malashree) ಹೇಳಿದ್ದಾರೆ. ‘ಟಿವಿ 9 ಕನ್ನಡ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಎಂಎಲ್ಎ ಗೆಸ್ಟ್ಹೌಸ್ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ

ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್ಜೆಡಿಯಿಂದ ರೈಲು ತಡೆ

ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ

ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
