
2020ರಲ್ಲಿ ಪ್ರಸಾರ ಕಂಡಿದ್ದ ‘ಅಸುರ್’ (Asur) ವೆಬ್ ಸೀರಿಸ್ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ ನೋಡಿದ ಅನೇಕರು ಮೆಚ್ಚಿಕೊಂಡಿದ್ದರು. ಅಪರಾಧಗಳ ಜೊತೆಗೆ ಪುರಾಣದ ವಿಚಾರಗಳನ್ನು ಸೇರಿಸಲಾಗಿತ್ತು. ಮೊದಲ ಸೀಸನ್ನಲ್ಲಿ ‘ಅಸುರ’ನ ಹುಡುಕಾಟ ನಡೆದಿತ್ತು. ಎರಡನೇ ಪಾರ್ಟ್ನಲ್ಲೂ ಅದು ಮುಂದುವರಿದಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ‘ಅಸುರ್ 2’ (Asur 2) ಸರಣಿ ಜೂನ್ 1ರಿಂದ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ. ಈ ವಿಚಾರ ಕೇಳಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ.
‘ಅಸುರ್’ ಚಿತ್ರದಲ್ಲಿ ಅರ್ಷದ್ ವರ್ಸಿ, ಬರುಣ್ ಸೋಬ್ತಿ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಸರಣಿ ಕೊಲೆಗಳು ನಡೆಯುತ್ತಿರುತ್ತವೆ. ಇದೆಲ್ಲವನ್ನೂ ಮಾಡುತ್ತಿರುವುದು ಅಸುರ ಅನ್ನೋದು ಗೊತ್ತಾಗುತ್ತದೆ. ಈ ಅಸುರ ಯಾರು ಎಂಬುದನ್ನು ಹುಡುಕಿ ಹೊರಡುತ್ತಾನೆ ನಿಖಿಲ್ ನಾಯರ್ (ಬರುಣ್ ಸೋಬ್ತಿ). ಆತ ಫಾರೆನ್ಸಿಕ್ ಎಕ್ಸಪರ್ಟ್. ನಿಖಿಲ್ಗೆ ಧನಂಜಯ್ ರಜಪೂತ್ (ಅರ್ಷದ್) ಸಹಕಾರವೂ ಸಿಗುತ್ತದೆ. ಆದರೆ, ಅಸುರ ಸಿಗುವುದಿಲ್ಲ. ಎರಡನೇ ಪಾರ್ಟ್ನಲ್ಲೂ ಅಸುರನ ಹುಡುಕಾಟ ಮುಂದುವರಿದಿದೆ.
‘ಅಸುರ್ 2’ ಟ್ರೇಲರ್ ಸಾಕಷ್ಟು ಸಸ್ಪೆನ್ಸ್ನಿಂದ ಕೂಡಿದೆ. ಕಥೆಯಲ್ಲಿ ಪುರಾಣ ಸೇರಿಸಲಾಗಿದೆ. ಈಗಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ವೆಬ್ ಸೀರಿಸ್ ಮಾಡಲಾಗಿದೆ. ಇಲ್ಲಿಯೂ ಡಿಜಿಟಲ್ ವಾರ್ ಇದೆ. ಈ ಸರಣಿ ನೋಡಲು ಸಿನಿಪ್ರಿಯರು ಕಾದಿದ್ದಾರೆ. ಅಸುರ ಯಾರು ಎಂಬುದು ತಿಳಿಯಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇದನ್ನೂ ಓದಿ: ಚಿರಂಜೀವಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ, ಕನ್ನಡದಲ್ಲೂ ಸಿನಿಮಾ ಮಾಡಿದ್ದ ನಿರ್ದೇಶಕ ಕೆ. ವಾಸು ನಿಧನ
ಕಳೆದ ಬಾರಿ ‘ಅಸುರ್’ ವೂಟ್ನಲ್ಲಿ ಲಭ್ಯವಿತ್ತು. ಈ ಬಾರಿ ‘ಜಿಯೋ ಸಿನಿಮಾಸ್’ ಮೂಲಕ ಪ್ರಸಾರ ಕಾಣಲಿದೆ. ಇಷ್ಟು ದಿನ ಜನರು ಐಪಿಎಲ್ನಲ್ಲಿ ಬ್ಯುಸಿ ಇದ್ದರು. ಈ ಕಾರಣಕ್ಕೆ ಐಪಿಎಲ್ ಮುಗಿದ ಬಳಿಕ ‘ಅಸುರ್ 2’ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ