ಸುನೀಲ್ ಶೆಟ್ಟಿ ಮನೆಯಲ್ಲೇ ನಡೆಯಲಿದೆ ಆಥಿಯಾ ಮದುವೆ; ಡಿಸೆಂಬರ್ ಅಂತ್ಯಕ್ಕೆ ರಾಹುಲ್ ಜತೆ ವಿವಾಹ?

ಸುನೀಲ್ ಶೆಟ್ಟಿ ಅವರ ಖಾಂಡಾಲಾದಲ್ಲಿ ‘ಜಹಾನ್’ ಬಂಗಲೆಯಲ್ಲಿ ಆಥಿಯಾ ಹಾಗೂ ರಾಹುಲ್ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಆಥಿಯಾ ಹಾಗೂ ರಾಹುಲ್ ಫ್ಯಾನ್ಸ್ ಖುಷಿಯಾಗಿದ್ದಾರೆ.

ಸುನೀಲ್ ಶೆಟ್ಟಿ ಮನೆಯಲ್ಲೇ ನಡೆಯಲಿದೆ ಆಥಿಯಾ ಮದುವೆ; ಡಿಸೆಂಬರ್ ಅಂತ್ಯಕ್ಕೆ ರಾಹುಲ್ ಜತೆ ವಿವಾಹ?
ರಾಹುಲ್-ಆಥಿಯಾ
Edited By:

Updated on: Sep 06, 2022 | 6:55 PM

ನಟಿ ಆಥಿಯಾ ಶೆಟ್ಟಿ (Athiya Shetty) ಹಾಗೂ ಟೀಂ ಇಂಡಿಯಾ ಆಟಗಾರ ಕೆ.ಎಲ್​. ರಾಹುಲ್ (KL Rahul) ವಿವಾಹದ ವಿಚಾರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗೆ ಬರುತ್ತಿದೆ. ಮದುವೆ ವಿಚಾರವನ್ನು ಈ ಜೋಡಿ ಅಲ್ಲಗಳೆಯುತ್ತಲೇ ಬಂದಿದೆ. ಈಗ ಮತ್ತೆ ಈ ಸುದ್ದಿ ಹರಿದಾಡೋಕೆ ಶುರುವಾಗಿದೆ. ಮದುವೆ ನಡೆಯುವ ಸ್ಥಳ ಹಾಗೂ ಸಮಯದ ಬಗ್ಗೆ ಹೊಸ ಮಾಹಿತಿ ಹೊರ ಬಿದ್ದಿದೆ. ಕೆಲವರು ಇದನ್ನು ವದಂತಿ ಎಂದು ಪ್ರಬಲವಾಗಿ ವಾದಿಸಿದರೆ ಇನ್ನೂ ಕೆಲವರು ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬ ವಾದವನ್ನು ಮುಂದಿಡುತ್ತಿದ್ದಾರೆ.

ರಾಹುಲ್ ಹಾಗೂ ಆಥಿಯಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಅನೇಕ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಆದರೆ, ಎಲ್ಲಿಯೂ ಈ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಆಥಿಯಾ ತಂದೆ ಸುನೀಲ್ ಶೆಟ್ಟಿ ಕೂಡ ಅನೇಕ ಬಾರಿ ರಾಹುಲ್ ಹಾಗೂ ಆಥಿಯಾ ಬಗ್ಗೆ ಮಾತನಾಡಿದ್ದಿದೆ. ಈ ಮೊದಲು ಮದುವೆ ವಿಚಾರದ ವದಂತಿ ಹುಟ್ಟಿಕೊಂಡಾಗ ಅವರು ಅಲ್ಲಗಳೆದಿದ್ದರು. ಈಗ ಮತ್ತೆ ಇದೇ ರೀತಿಯ ಸುದ್ದಿ ಹರಿದಾಡುತ್ತಿದೆ.

ಇಟೈಮ್ಸ್ ವರದಿ ಮಾಡಿರುವ ಪ್ರಕಾರ ಸುನೀಲ್ ಶೆಟ್ಟಿ ಅವರ ಖಾಂಡಾಲಾದಲ್ಲಿ ‘ಜಹಾನ್’ ಬಂಗಲೆಯಲ್ಲಿ ಆಥಿಯಾ ಹಾಗೂ ರಾಹುಲ್ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಆಥಿಯಾ ಹಾಗೂ ರಾಹುಲ್ ಫ್ಯಾನ್ಸ್ ಖುಷಿಯಾಗಿದ್ದಾರೆ.

ಅಕ್ಟೋಬರ್​ನಲ್ಲಿ ಟಿ20 ವಿಶ್ವಕಪ್ ಇದೆ. ಅದಾದ ಬಳಿಕ ಹಲವು ಸರಣಿಗಳಿವೆ. ಏಪ್ರಿಲ್ ವೇಳೆಗೆ ಐಪಿಎಲ್ ಆರಂಭ ಆಗುತ್ತದೆ. ಈ ಎಲ್ಲಾ ಕಾರಣದಿಂದ ಡಿಸೆಂಬರ್ ಅಂತ್ಯಕ್ಕೆ ಮದುವೆ ನಡೆಸಲು ಈ ಜೋಡಿ ನಿರ್ಧರಿಸಿದೆ. ಸುನೀಲ್ ಶೆಟ್ಟಿ ಕೂಡ ಇದಕ್ಕೆ ಖುಷಿಯಿಂದ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಇವರ ಫ್ರೆಂಡ್ಸ್​ಗೆ ಸಂದೇಶ ರವಾನೆ ಆಗಿರುವ ಬಗ್ಗೆ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಕೆಎಲ್‌ ರಾಹುಲ್‌-ಆಥಿಯಾ ಜೋಡಿ

ಈ ಮದುವೆ ಅದ್ದೂರಿಯಾಗಿ ನಡೆಯಲಿದೆ. ಕೇವಲ ಆಪ್ತರಿಗಷ್ಟೇ ಆಮಂತ್ರಣ ನೀಡಲು ನಿರ್ಧರಿಸಲಾಗಿದೆ. ಮದುವೆ ಬಳಿಕ ನಡೆಯುವ ಆರತಕ್ಷತೆಗೆ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಟೀಂ ಇಂಡಿಯಾ ಆಟಗಾರರಿಗೆ ಆಮಂತ್ರಣ ನೀಡುವ ಆಲೋಚನೆಯಲ್ಲಿ ಅವರಿದ್ದಾರೆ ಎನ್ನಲಾಗಿದೆ.

TV9 Web

TV9 Kannada

Read More
Loading...
Unable to load recommendations.
Follow Us