KL Rahul: ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಕೆಎಲ್ ರಾಹುಲ್-ಆಥಿಯಾ ಜೋಡಿ
TV9kannada Web Team | Edited By: Zahir PY
Updated on: Jul 19, 2022 | 12:56 PM
KL Rahul Athiya Shetty wedding: ಕಳೆದ ಕೆಲ ವರ್ಷಗಳಿಂದ ಕೆಎಲ್ ರಾಹುಲ್ ಪ್ರೇಯಸಿಯಾಗಿ ಗುರುತಿಸಿಕೊಂಡಿರುವ ಆಥಿಯಾ ಶೆಟ್ಟಿ ಸೆಲೆಬ್ರಿಟಿ ಕಾಲಂಗಳಲ್ಲಿ ರಾರಾಜಿಸುತ್ತಿದ್ದಾರೆ. ಇದೀಗ ಈ ಕ್ಯೂಟ್ ಜೋಡಿ ಹಸೆಮಣೆ ಏರಲು ನಿರ್ಧರಿಸಿದ್ದು, ಇದರ ಮೊದಲ
Jul 19, 2022 | 12:56 PM
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ನಡುವಣ ಮದುವೆಯ ವದಂತಿಗಳು ಕೆಲ ದಿನಗಳ ಹಿಂದೆಯಷ್ಟೇ ಹರಿದಾಡಿತ್ತು. ಅಲ್ಲದೆ ಶೀಘ್ರದಲ್ಲೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಆದರೆ ಶೀಘ್ರದಲ್ಲೇ ಮದುವೆ ವಿಚಾರವನ್ನು ಆಥಿಯಾ ಶೆಟ್ಟಿ ತಳ್ಳಿಹಾಕಿದ್ದರು.
1 / 7
ಇದಾಗ್ಯೂ ಇಬ್ಬರು ಹಸೆಮಣೆ ಏರಲು ಮುಂದಾಗಿರುವುದು ಖಚಿತವಾಗಿದೆ. ಆದರೆ ಈ ವರ್ಷವಲ್ಲ ಎಂಬುದಷ್ಟೇ ವ್ಯತ್ಯಾಸ. ಅಂದರೆ ಮುಂದಿನ ವರ್ಷ ಕೆಎಲ್ ರಾಹುಲ್-ಆಥಿಯಾ ಜೋಡಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಎರಡು ಕುಟುಂಬಗಳು ಈ ಬಗ್ಗೆ ಮಾತುಕತೆ ನಡೆಸಿದ್ದು, ಅದರಂತೆ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ವಿವಾಹ ನಡೆಸಲು ನಿರ್ಧರಿಸಲಾಗಿದೆ.
2 / 7
ಏಕೆಂದರೆ ಟೀಮ್ ಇಂಡಿಯಾ ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ಆಡಲಿದ್ದು, ಈ ಟೂರ್ನಿಯು ಕೆಎಲ್ ರಾಹುಲ್ ಪಾಲಿಗೆ ಬಹಳ ಮಹತ್ವದ್ದು. ಇನ್ನು ಟಿ20 ವಿಶ್ವಕಪ್ ಮುಗಿಯೋದು ನವೆಂಬರ್ ನಲ್ಲಿ. ಹೀಗಾಗಿ ಜನವರಿ ಅಥವಾ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಕೆಎಲ್ ರಾಹುಲ್ ನಿರ್ಧರಿಸಿದ್ದಾರೆ.
3 / 7
ಅದರಂತೆ ಕೆಎಲ್ ರಾಹುಲ್-ಆಥಿಯಾ ಜೋಡಿ ಮುಂದಿನ ವರ್ಷ ಹೊಸ ಇನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಸದ್ಯ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗಾಗಿ ಸಜ್ಜಾಗುತ್ತಿರುವ ಕೆಎಲ್ ರಾಹುಲ್ ಜೊತೆ ಆಥಿಯಾ ಕೂಡ ವಿಂಡೀಸ್ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ.
4 / 7
ಏಕೆಂದರೆ ಸೌತ್ ಆಫ್ರಿಕಾ ವಿರುದ್ದದ ಸರಣಿಯ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು. ಈ ವೇಳೆ ರಾಹುಲ್ ಜೊತೆ ಆಥಿಯಾ ಕೂಡ ಜರ್ಮನಿಗೆ ಹೋಗಿದ್ದರು. ಇದೀಗ ಎರಡೂ ಕುಟುಂಬಗಳಿಂದ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಹಾಗಾಗಿ ಮುಂದಿನ ವರ್ಷ ವರ-ವಧುವಾಗಿ ಕಾಣಿಸಿಕೊಳ್ಳಲು ತಾರಾ ಜೋಡಿ ನಿರ್ಧರಿಸಿದ್ದಾರೆ.
5 / 7
ಅಂದಹಾಗೆ ಆಥಿಯಾ ಶೆಟ್ಟಿ ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಮಗಳು ಎಂಬುದು ವಿಶೇಷ. ಅಲ್ಲದೆ ಸಲ್ಮಾನ್ ಖಾನ್ ಅವರ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಹೀರೋ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಮುಬಾರಕನ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ಅಭಿನೇತ್ರಿಯಾಗಿ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದರು.
6 / 7
ಕಳೆದ ಕೆಲ ವರ್ಷಗಳಿಂದ ಕೆಎಲ್ ರಾಹುಲ್ ಪ್ರೇಯಸಿಯಾಗಿ ಗುರುತಿಸಿಕೊಂಡಿರುವ ಆಥಿಯಾ ಶೆಟ್ಟಿ ಸೆಲೆಬ್ರಿಟಿ ಕಾಲಂಗಳಲ್ಲಿ ರಾರಾಜಿಸುತ್ತಿದ್ದಾರೆ. ಇದೀಗ ಈ ಕ್ಯೂಟ್ ಜೋಡಿ ಹಸೆಮಣೆ ಏರಲು ನಿರ್ಧರಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಮುಂಬೈ ಪ್ರತಿಷ್ಠಿತ ಅಪಾರ್ಟ್ಮೆಂಟ್ನಲ್ಲಿ ಮನೆಯೊಂದನ್ನು ಕೂಡ ಬಾಡಿಗೆಗೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.