
ಸೆಲೆಬ್ರಿಟಿಗಳ ದುನಿಯಾದಲ್ಲಿ ಡೇಟಿಂಗ್ ತುಂಬ ಕಾಮನ್. ಆದರೆ ಯಾರು ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸತ್ಯ ಅಷ್ಟು ಸುಲಭಕ್ಕೆ ಹೊರಬರುವುದಿಲ್ಲ. ಈಗ ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ (Prabhas) ಅವರ ಲವ್ ಲೈಫ್ ಬಗ್ಗೆ ಬಾಲಿವುಡ್ ನಟ ವರುಣ್ ಧವನ್ ಬಾಯಿ ಬಿಟ್ಟಿದ್ದಾರೆ. ಈ ವಿಚಾರವನ್ನು ಒಂದು ಒಗಟಿನ ರೀತಿಯಲ್ಲಿ ಅವರು ಹೇಳಿದ್ದಾರೆ. ಅವರ ಪ್ರಕಾರ, ಕೃತಿ ಸನೋನ್ ಮತ್ತು ಪ್ರಭಾಸ್ ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ಮಾತು ಕೇಳಿ ಕೃತಿ ಸನೋನ್ (Kriti Sanon) ಅವರ ಮುಖ ಅರಳಿದೆ. ರಿಯಾಲಿಟಿ ಶೋವೊಂದರ ವೇದಿಕೆಯಲ್ಲಿ ವರುಣ್ ಧವನ್ (Varun Dhawan) ಅವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ರಿಯಾಲಿಟಿ ಶೋವೊಂದರಲ್ಲಿ ವರುಣ್ ಧವನ್ ಅವರು ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಕೃತಿ ಸನೋನ್ ಕೂಡ ಇದ್ದರು. ಕರಣ್ ಜೋಹರ್ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವಾಗ ನಾಯಕಿಯರ ಪಟ್ಟಿ ಮಾಡಿದ ವರುಣ್ ಧವನ್ ಅವರು ಕೃತಿ ಸನೋನ್ ಹೆಸರನ್ನು ಕೈ ಬಿಟ್ಟಿದ್ದಾರೆ. ಯಾಕೆ ಎಂದು ಪ್ರಶ್ನಿಸಿದಾಗ ವರುಣ್ ಧವನ್ ಅಸಲಿ ವಿಷಯ ಬಾಯ್ಬಿಟ್ಟಿದ್ದಾರೆ.
‘ಈ ಪಟ್ಟಿಯಲ್ಲಿ ಕೃತಿ ಸನೋನ್ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ಈಗ ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ’ ಎಂದು ವರುಣ್ ಧವನ್ ಹೇಳಿದ್ದಾರೆ. ‘ಪ್ರಾಜೆಕ್ಟ್ ಕೆ’ ಸಿನಿಮಾಗಾಗಿ ಪ್ರಭಾಸ್ ಅವರು ದೀಪಿಕಾ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ವರುಣ್ ಧವನ್ ಹೇಳಿದ್ದು ಪ್ರಭಾಸ್ ಬಗ್ಗೆಯೇ ಎಂದು ಎಲ್ಲರೂ ಊಹಿಸುತ್ತಿದ್ದಾರೆ.
‘ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಮತ್ತು ಕೃತಿ ಸನೋನ್ ಅವರು ಜೊತೆಯಾಗಿ ನಟಿಸುತ್ತಿದ್ದಾರೆ. ಪ್ರಭಾಸ್ ಅವರು ರಾಮನ ಪಾತ್ರ ಮಾಡುತ್ತಿದ್ದರೆ, ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಇಬ್ಬರ ನಡುವೆ ಆಪ್ತತೆ ಬೆಳೆದಿದೆ ಎನ್ನಲಾಗಿದೆ. ಅದರ ಪರಿಣಾಮವಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಹಬ್ಬಿದೆ.
ಪ್ರಭಾಸ್ ಅವರ ಮದುವೆ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಖ್ಯಾತ ನಟಿ ಅನುಷ್ಕಾ ಶೆಟ್ಟಿ ಜೊತೆ ಅವರು ಸಪ್ತಪದಿ ತುಳಿಯಬಹುದು ಎಂದು ಅನೇಕ ಬಾರಿ ಸುದ್ದಿ ಆಗಿತ್ತು. ಆದರೆ ಅದು ನಿಜವಾಗಲಿಲ್ಲ. ಈಗ ಕೃತಿ ಸನೋನ್ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿದೆ. ಈ ಬಗ್ಗೆ ಪ್ರಭಾಸ್ ಕಡೆಯಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.