ಬಿಗ್ ಬಾಸ್ ಮನೆಯಲ್ಲಿ ಏನು ಮಿಸ್ ಆಗುತ್ತದೆಯೋ ಗೊತ್ತಿಲ್ಲ. ಆದರೆ, ಎಲಿಮಿನೇಷನ್ ಮಾತ್ರ ನಡೆದೇ ನಡೆಯುತ್ತದೆ. ವೀಕ್ಷಕರಲ್ಲಿ ಕುತೂಹಲ ಹುಟ್ಟಿಸುವ ಉದ್ದೇಶದಿಂದ ಕೆಲ ವಾರ ಬಿಗ್ ಬಾಸ್ ಎಲಿಮಿನೇಷನ್ಗೆ ಟ್ವಿಸ್ಟ್ ಕೊಡಲಾಗುತ್ತದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಇದೇ ಸೂತ್ರ ಅನುಸರಿಸಲಾಗಿದೆ. ಈ ವಾರದ ಎಲಿಮಿನೇಷನ್ಗೆ ನಡೆದ ನಾಮಿನೇಷನ್ ಪ್ರಕ್ರಿಯೆ ಭಿನ್ನವಾಗಿತ್ತು. ಹೀಗಾಗಿ, ಕೆಲವರು ಸೇಫ್ ಆದರೆ, ಇನ್ನೂ ಕೆಲ ಪ್ರಮುಖ ಸ್ಪರ್ಧಿಗಳು ಡೇಂಜರ್ ಜೋನ್ನಲ್ಲಿದ್ದಾರೆ.
ಪ್ರತಿವಾರ ಸ್ಪರ್ಧಿಗಳಿಗೆ ನಾಮಿನೇಷನ್ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಯಾರಿಗೆ ಯಾವ ಸ್ಪರ್ಧಿ ಇಷ್ಟವಿಲ್ಲವೋ ಅವರನ್ನು ನಾಮಿನೇಟ್ ಮಾಡುತ್ತಾರೆ. ಆದರೆ, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಆ ರೀತಿ ಇರಲಿಲ್ಲ. ಸೋಮವಾರ ಕ್ಯಾಪ್ಟನ್ ಅರವಿಂದ್ ಹಾಗೂ ರಘು ಗೌಡ ಸೇವ್ ಮಾಡಿದ ಶಮಂತ್ ಬ್ರೋ ಗೌಡ ಹೊರತುಪಡಿಸಿ ಉಳಿದ ಎಲ್ಲಾ 8 ಸದಸ್ಯರು ನಾಮಿನೇಟ್ ಆಗಿದ್ದರು. ಈ ಎಂಟು ಸ್ಪರ್ಧಿಗಳಿಗೆ ನಾಮಿನೇಷನ್ನಿಂದ ತಪ್ಪಿಸಿಕೊಳ್ಳೋಕೆ ಅವಕಾಶ ನೀಡಲಾಗಿತ್ತು.
ಬಿಗ್ ಬಾಸ್ ಮನೆಯಲ್ಲಿ ‘ವಿಜಯ ಯಾತ್ರೆ’ ಹಾಗೂ ‘ನಿಂಗ್ ಐತೆ’ ಹೆಸರಿನ ಎರಡು ತಂಡಗಳನ್ನು ಮಾಡಲಾಯಿತು. ವಿಜಯ ಯಾತ್ರೆ ತಂಡಕ್ಕೆ ಅರವಿಂದ್ ಕ್ಯಾಪ್ಟನ್ ಆದರೆ, ನಿಂಗ್ ಐತೆ ತಂಡಕ್ಕೆ ಮಂಜು ಪಾವಗಡ ನಾಯಕತ್ವ ವಹಿಸಿಕೊಂಡರು. ನಾಲ್ಕು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಒಟ್ಟೂ 10 ಟಾಸ್ಕ್ಗಳು ನಡೆದವು. ಈ ಟಾಸ್ಕ್ನಲ್ಲಿ ಗೆದ್ದು ಯಾರು ಹೆಚ್ಚು ದಂಡಗಳನ್ನು ಸಂಗ್ರಹಿಸುತ್ತಾರೋ ಅವರು ಗೆದ್ದಂತೆ.
ಈ ಟಾಸ್ಕ್ನಲ್ಲಿ ನಿಂಗ್ ಐತೆ ತಂಡ ಗೆದ್ದಿದೆ. ಈ ಮೂಲಕ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗಿದ್ದು ಮಾತ್ರವಲ್ಲ ನಾಮಿನೇಷನ್ನಿಂದ ಬಚಾವ್ ಆಗಿದೆ. ಮಂಜು ತಂಡದಲ್ಲಿದ್ದ ದಿವ್ಯಾ ಉರುಡುಗ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ನಾಮಿನೇಟ್ನಿಂದ ಬಚಾವ್ ಆದರು. ಅರವಿಂದ್ ತಂಡದ ಪ್ರಶಾಂತ್ ಸಂಬರಗಿ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ, ಶುಭಾ ಪೂಂಜಾ ನಾಮಿನೇಟ್ ಆದರು.
ಟಾಸ್ಕ್ನಲ್ಲಿ ಸೋತ ಬೆನ್ನಲ್ಲೇ ಶುಭಾ ಪೂಂಜಾ ಅತ್ತರು. ಪ್ರಶಾಂತ್ ಸಂಬರಗಿ ಬೇಸರ ಮಾಡಿಕೊಂಡರು. ಈ ನಾಲ್ವರಲ್ಲಿ ಒಬ್ಬರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಒಂದಾದ ಹಾವು-ಮುಂಗುಸಿ; ಮಂಜುಗೆ ಪ್ರೀತಿಯಿಂದ ಕೈ ತುತ್ತು ತಿನ್ನಿಸಿದ ಪ್ರಶಾಂತ್
Bigg Boss Kannada: ಮಂಜು ಪಾವಗಡ ಜಾತಕದಲ್ಲಿದ್ದ ವಿಚಾರ ಬಿಗ್ ಬಾಸ್ ಮನೆಯಲ್ಲಿ ನಿಜವಾಯ್ತು