Bigg Boss Kannada: ರಘುಗೆ ವೋಟ್​ ಹಾಕಿ ಅಂತಿದ್ದಾರಾ ದ್ರಾವಿಡ್​, ಶಿವಣ್ಣ, ಪುನೀತ್​, ಡಾಲಿ? ಇದಪ್ಪಾ ಕ್ರಿಯೇಟಿವಿಟಿ ಅಂದ್ರೆ!

BBK8: ಬಿಗ್​ ಬಾಸ್​ ಮನೆಯೊಳಗೆ ಕೀಳರಿಮೆ ಕಾಡುತ್ತಿದೆ ಎಂದು ಹೇಳಿದ್ದ ರಘು ಪರವಾಗಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮಾತನಾಡುತ್ತಿರುವ ರೀತಿಯ ಒಂದು ವಿಡಿಯೋ ವೈರಲ್​ ಆಗಿದೆ. ಇದರ ಹಿಂದಿನ ಗುಟ್ಟೇನು?

Bigg Boss Kannada: ರಘುಗೆ ವೋಟ್​ ಹಾಕಿ ಅಂತಿದ್ದಾರಾ ದ್ರಾವಿಡ್​, ಶಿವಣ್ಣ, ಪುನೀತ್​, ಡಾಲಿ? ಇದಪ್ಪಾ ಕ್ರಿಯೇಟಿವಿಟಿ ಅಂದ್ರೆ!
ರಘು - ಬಿಗ್​ ಬಾಸ್​ ಕನ್ನಡ ಸೀಸನ್​ 8

Updated on: Mar 18, 2021 | 1:20 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ವಾತಾವರಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸ್ಪರ್ಧಿಗಳ ನಡುವಿನ ಪೈಪೋಟಿಯೂ ಜೋರಾಗಿದೆ. ಮನೆಯೊಳಗೆ ಒಂದು ಹಣಾಹಣಿ ನಡೆದಿದ್ದರೆ, ಮನೆಯ ಹೊರಗೂ ಕೂಡ ಬೇರೊಂದು ರೀತಿಯ ಜಟಾಪಟಿ ಏರ್ಪಟ್ಟಿದೆ. ಅದರಲ್ಲಿ ರಘು ಒಂದು ಹೆಜ್ಜೆ ಮುಂದೆ ಇದ್ದಾರೆ!

ಹೌದು, ಬಿಗ್​ ಬಾಸ್​ ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ವೋಟ್​ ಮಾಡಿ ಎಂದು ಸೋಶಿಯಲ್​ ಮೀಡಿಯಾದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಸ್ಪರ್ಧಿಗಳ ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ಟ್ವಿಟರ್​ ಖಾತೆಗಳನ್ನು ಅವರ ಆಪ್ತರು ಹ್ಯಾಂಡಲ್​ ಮಾಡುತ್ತಿದ್ದು, ಅವುಗಳ ಮೂಲಕ ವೋಟ್​ ಮಾಡುವಂತೆ ಜನರ ಮನವೊಲಿಸಲಾಗುತ್ತಿದೆ. ಅಚ್ಚರಿ ಎಂದರೆ ರಘು ಪರವಾಗಿ ಕರುನಾಡಿನ ಘಟಾನುಘಟಿ ಸೆಲೆಬ್ರಿಟಿಗಳೆಲ್ಲ ಮಾತನಾಡಿದಂತಿರುವ ಒಂದು ವಿಡಿಯೋ ಸಖತ್​ ವೈರಲ್​ ಆಗಿದೆ!

ಈ ವಿಡಿಯೋನಲ್ಲಿ ಶಿವರಾಜ್​ಕುಮಾರ್​, ರಮೇಶ್​ ಅರವಿಂದ್​, ಮಾಜಿ ಕ್ರಿಕೆಟರ್​ ರಾಹುಲ್​ ದ್ರಾವಿಡ್​, ಡಾಲಿ ಧನಂಜಯ, ಮಾಸ್ಟರ್​ ಆನಂದ್, ಚಂದನ್​ ಶೆಟ್ಟಿ, ಪುನೀತ್​ ರಾಜ್​ಕುಮಾರ್​, ರವಿಶಂಕರ್​, ರವಿಚಂದ್ರನ್​ ಮುಂತಾದವರು ವೋಟ್​ ಮಾಡಿ ಎಂದು ಹೇಳಿದ್ದಾರೆ! ಈ ವಿಡಿಯೋವನ್ನು ರಘು ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಹಾಗಂತ ನಿಜಕ್ಕೂ ಅವರೆಲ್ಲರು ರಘುಗೆ ಓಟ್​ ಮಾಡಿ ಎಂದು ಕೇಳಿಕೊಂಡಿದ್ದಾರಾ? ಖಂಡಿತಾ ಇಲ್ಲ. ಅದರ ಅಸಲಿಯತ್ತು ಬೇರೆಯೇ ಇದೆ.

ಈ ಹಿಂದಿನ ಸಾರ್ವತ್ರಿಕ ಚುನಾವಣೆಗಳ ಸಮಯದಲ್ಲಿ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದರು. ಮತದಾನದ ಮಹತ್ವವನ್ನು ಜನರಿಗೆ ತಿಳಿಸಿ, ನೀವೂ ಕೂಡ ವೋಟ್​ ಮಾಡಿ ಎಂದು ವಿಡಿಯೋ ಮೂಲಕ ಸಂದೇಶ ನೀಡಿದ್ದರು. ಆ ವಿಡಿಯೋಗಳಲ್ಲಿ ಸೆಲೆಬ್ರಿಟಿಗಳು ಹೇಳಿದ ‘ತಪ್ಪದೇ ವೋಟ್​ ಮಾಡಿ..’ ಎಂಬ ತುಣುಕನ್ನು ಮಾತ್ರ ಇಟ್ಟುಕೊಂಡು, ರಘು ಪರವಾಗಿ ವೋಟ್​ ಮಾಡಿ ಎಂದು ಅರ್ಥ ಬರುವ ರೀತಿಯಲ್ಲಿ ಎಡಿಟ್​ ಮಾಡಲಾಗಿದೆ. ಆ ವಿಡಿಯೋ ಈಗ ರಘು ಅವರು ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಆಗಿದ್ದು, ಸಖತ್​ ವೈರಲ್​ ಆಗುತ್ತಿದೆ.

ಸದ್ಯ 15 ಜನರ ನಡುವೆ ಬಿಗ್​ ಬಾಸ್​ ಆಟ ಮುಂದುವರಿದಿದೆ. ಈ ವಾರ ರಾಜೀವ್​ ಕ್ಯಾಪ್ಟನ್​ ಆಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ವಾರ ಶಮಂತ್​ ಬ್ರೋ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್​, ರಘು, ಅರವಿಂದ್, ವಿಶ್ವನಾಥ್​, ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಹಾಗೂ ಪ್ರಶಾಂತ್​ ಸಂಬರಗಿ ನಾಮಿನೇಟ್​ ಆಗಿದ್ದಾರೆ. ಹೇಗಾದರೂ ಮಾಡಿ ವೀಕ್ಷಕರಿಂದ ಹೆಚ್ಚಿನ ವೋಟ್​ ಪಡೆಯಬೇಕೆಂದು ಎಲ್ಲಿಲ್ಲದ ಕಸರತ್ತು ಮಾಡುತ್ತಿದ್ದಾರೆ.

ಇದನ್ನೂ ಓದಿ: ದಿವ್ಯಾ ಉರುಡುಗ ಮದುವೆ ಆಗುವ ಹುಡುಗ ಹೇಗಿರಬೇಕು​? ಬಿಗ್​ ಬಾಸ್​ನಲ್ಲಿ ಸತ್ಯ ಬಾಯ್ಬಿಟ್ಟ ಮಲೆನಾಡ ಹುಡುಗಿ!

ರಹಸ್ಯವಾಗಿ ಮೊಬೈಲ್​ ಬಳಸ್ತಿದ್ದಾರಾ ಬಿಗ್​ ಬಾಸ್​ ಸ್ಪರ್ಧಿಗಳು? ಜನರ ಅನುಮಾನಕ್ಕೆ ಇಲ್ಲಿದೆ ಉತ್ತರ!

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us