ಸೂಪರ್ ಹಿಟ್ ಧಾರಾವಾಹಿಗಳ ಟಿಆರ್​ಪಿಗೂ ಸೆಡ್ಡು ಹೊಡೆದ ಬಿಗ್ ಬಾಸ್; ತಗ್ಗೋ ಮಾತೇ ಇಲ್ಲ

|

Updated on: Dec 05, 2024 | 2:23 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಹಲವು ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಸುದೀಪ್ ಇಲ್ಲದ ವಾರ ಹೊರತುಪಡಿಸಿ ಉಳಿದೆಲ್ಲಾ ಎಪಿಸೋಡ್​ಗಳಿಗೂ ಸಖತ್ ಟಿಆರ್​ಪಿ ಸಿಗುತ್ತಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಕೂಡ ಕಾರಣ. ಯಾವಾ ಸೂಪರ್ ಹಿಟ್ ಧಾರಾವಾಹಿಗಳಿಗೂ ಸಿಗದಷ್ಟು ಟಿಆರ್​ಪಿ ಈ ಶೋಗೆ ಸಿಗುತ್ತಿದೆ.

ಸೂಪರ್ ಹಿಟ್ ಧಾರಾವಾಹಿಗಳ ಟಿಆರ್​ಪಿಗೂ ಸೆಡ್ಡು ಹೊಡೆದ ಬಿಗ್ ಬಾಸ್; ತಗ್ಗೋ ಮಾತೇ ಇಲ್ಲ
Follow us on

‘ಬಿಗ್ ಬಾಸ್ ಕನ್ನಡ’ ಇನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸ್ಪರ್ಧಿಗಳ ಉತ್ತಮ ಆಟ ಹಾಗೂ ಸುದೀಪ್ ಅವರ ಖಡಕ್ ನಿರೂಪಣೆಯಿಂದ ಬಿಗ್ ಬಾಸ್ ಟಿಆರ್​ಪಿ ಕುಗ್ಗುತ್ತಿಲ್ಲ. ಸೂಪರ್ ಹಿಟ್ ಧಾರಾವಾಹಿಗಳ ಟಿಆರ್​ಪಿಗೂ ಸೆಡ್ಡು ಹೊಡೆಯುವಂತೆ ರೇಟಿಂಗ್ ಪಡೆಯುತ್ತಿದೆ ಈ ಶೋ. ಹಾಗಾದರೆ, ಬಿಗ್ ಬಾಸ್​ಗೆ ಸಿಕ್ಕ ಟಿಆರ್​ಪಿ ಎಷ್ಟು? ಧಾರಾವಾಹಿಗಳಿಗೆ ಸಿಕ್ಕ ಟಿಆರ್​ಪಿ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ಹಲವು ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಸುದೀಪ್ ಇಲ್ಲದ ವಾರ ಹೊರತುಪಡಿಸಿ ಉಳಿದೆಲ್ಲಾ ಎಪಿಸೋಡ್​ಗಳಿಗೂ ಸಖತ್ ಟಿಆರ್​ಪಿ ಸಿಗುತ್ತಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಕೂಡ ಕಾರಣ. ಯಾವಾ ಸೂಪರ್ ಹಿಟ್ ಧಾರಾವಾಹಿಗಳಿಗೂ ಸಿಗದಷ್ಟು ಟಿಆರ್​ಪಿ ಈ ಶೋಗೆ ಸಿಗುತ್ತಿದೆ. ವಾರದ ದಿನಗಳಲ್ಲಿ ನಗರ ಭಾಗದಲ್ಲಿ 8.2 ಟಿಆರ್​ಪಿ ಸಿಕ್ಕರೆ, ಶನಿವಾರ ಬರೋಬ್ಬರಿ 9.9 ಟಿಆರ್​ಪಿ ದೊರೆತಿದೆ. ಭಾನುವಾರ 10.3 ಟಿಆರ್​ಪಿ ದೊರೆತಿದೆ. ರಜತ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿ ಪಾಠ ಹೇಳಿಸಿಕೊಂಡ ವಾರದ ಟಿಆರ್​ಪಿ ಇದಾಗಿದೆ.

ಧಾರಾವಾಹಿಗಳ ಟಿಆರ್​ಪಿ ವಿಚಾರಕ್ಕೆ ಬಂದರೆ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿಗೆ ಬಿಗ್ ಬಾಸ್​ ಟಿಆರ್​ಪಿ ರೀಚ್ ಆಗುವಷ್ಟು ಟಿಆರ್​ಪಿ ಸಿಕ್ಕಿಲ್ಲ. ಎರಡನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಸ್ನೇಹಾ ಸಾವಿನ ನಂತರದಲ್ಲಿ ಟಿಆರ್​ಪಿ ಕೊಂಚ ತಗ್ಗಿದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’, ‘ಅಣ್ಣಯ್ಯ’ ಧಾರಾವಾಹಿಗಳು ಇವೆ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಹೇಗಿದೆ ನೋಡಿ ರಜತ್ ಹೊಸ ಲುಕ್; ಫೋಟೋ ವೈರಲ್

ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ಧಾರಾವಾಹಿಗಳ ಮಧ್ಯೆ ಸಮಾನ ಸ್ಪರ್ಧೆ ಏರ್ಪಟ್ಟಿದೆ. ಅಕ್ಕ-ತಂಗಿ ಧಾರಾವಾಹಿಗಳಾದ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗಳು ಇವೆ. ಐದನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.