Bigg Boss Kannada: ದೊಡ್ಡವರು ಅಂತ ಸುಮ್ನೆ ಬಿಟ್ಟೀದೀನಿ ಮಗನೆ; ಪ್ರಶಾಂತ್​ಗೆ ಬ್ರೋ ಗೌಡ ಆವಾಜ್​!

| Updated By: Digi Tech Desk

Updated on: Mar 09, 2021 | 6:56 PM

ಆಟದಲ್ಲಿ ಪ್ರಶಾಂತ್​ ಸಂಬರಗಿ ತುಂಬಾನೇ ವೈಲೆಂಟ್​ ಆಗಿ ನಡೆದುಕೊಂಡಂತೆ ಕಾಣುತ್ತದೆ. ಆಟ ಆಡುವ ಭರದಲ್ಲಿ ಕೆಲವರಿಗೆ ಗಾಯ ಮಾಡಿದಂತೆಯೂ ಕಾಣುತ್ತಿದೆ.

Bigg Boss Kannada: ದೊಡ್ಡವರು ಅಂತ ಸುಮ್ನೆ ಬಿಟ್ಟೀದೀನಿ ಮಗನೆ; ಪ್ರಶಾಂತ್​ಗೆ ಬ್ರೋ ಗೌಡ ಆವಾಜ್​!
ಬ್ರೋ ಗೌಡ-ಪ್ರಶಾಂತ್​
Follow us on

ಬಿಗ್​ ಬಾಸ್​ ಮನೆ ಸೇರಿದವರಿಗೆ ಸ್ವಾರ್ಥ ಸ್ವಲ್ಪ ಹೆಚ್ಚೇ ಇರುತ್ತದೆ. ನಾನು ಗೆಲ್ಲಬೇಕು ಎನ್ನುವುದನ್ನು ತಲೆಯಲ್ಲಿ ತುಂಬಿಕೊಂಡು ಸ್ಪರ್ಧಿಗಳು ಆಟವಾಡುತ್ತಾರೆ. ಈಗ ಕನ್ನಡ ಬಿಗ್​ ಬಾಸ್​ ಸೀಸನ್​ 8 ಆರಂಭವಾಗಿ ವಾರ ಕಳೆದಿದೆ. ಸ್ಪರ್ಧಿಗಳ ನಡುವೆ ನಿಧಾನವಾಗಿ ತಿಕ್ಕಾಟ ಆರಂಭವಾಗುತ್ತಿದೆ. ಎಲ್ಲರ ಸ್ವಾರ್ಥದ ಮುಖ ಅನಾವರಣಗೊಳ್ಳುತ್ತಿದೆ. ಇತ್ತೀಚೆಗೆ ಪ್ರಶಾಂತ್ ಸಂಬರಗಿ​-ಬ್ರೋ ಗೌಡ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಈಗ ಅಂಥದ್ದೇ ಘಟನೆ ಮರುಕಳಿಸಿದೆ. ದೊಡ್ಡವರು ಅಂತ ಸುಮ್ನೆ ಬಿಟ್ಟೀದಿನಿ ಮಗನೆ ಎಂದು ಪ್ರಶಾಂತ್​ಗೆ ಬ್ರೋ ಗೌಡ ಆವಾಜ್​ ಹಾಕಿದ್ದಾರೆ.

‘ಕಲರ್ಸ್​ ಕನ್ನಡ’ ವಾಹಿನಿಯು ತನ್ನ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಸ್ಪರ್ಧಿಗಳ ನಡುವೆ ನಡೆದ ಕಿತ್ತಾಟದ ಅನಾವರಣ ಆಗಿದೆ. ಇಂದು ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಅನುಸಾರ ಒಂದು ಟೀಂ ವೈರಸ್​ ಆದರೆ, ಮತ್ತೊಬ್ಬರು ಮನುಷ್ಯರು. ವೈರಸ್​​ನಿಂದ ಮನುಷ್ಯರು ತಪ್ಪಿಸಿಕೊಳ್ಳಬೇಕು.

ಈ ಆಟದಲ್ಲಿ ಪ್ರಶಾಂತ್​ ಸಂಬರಗಿ ತುಂಬಾನೇ ವೈಲೆಂಟ್​ ಆಗಿ ನಡೆದುಕೊಂಡಂತೆ ಕಾಣುತ್ತದೆ. ಆಟ ಆಡುವ ಭರದಲ್ಲಿ ಕೆಲವರಿಗೆ ಗಾಯ ಮಾಡಿದಂತೆಯೂ ಕಾಣುತ್ತಿದೆ. ಇದೇ ವಿಚಾರ ಬ್ರೋ ಗೌಡ ಅವರನ್ನು ಕೆರಳಿಸಿದೆ. ನೀನು ಮನುಷ್ಯನೋ ಅಥವಾ ಮೃಗವೋ? ಕತ್ತನ್ನು ಹಿಚಕುತ್ತೀಯಾ. ದೊಡ್ಡವನು ಎಂದು ಸುಮ್ನೆ ಬಿಟ್ಟಿದೀನಿ ಮಗನೆ ಎಂದು ಆವಾಜ್​ ಹಾಕಿದ್ದಾರೆ. ಆದರೆ, ಪ್ರಶಾಂತ್​ ಮಾತ್ರ ಇದಕ್ಕೆ ತಲೆ ಕೆಡಿಸಿಕೊಂಡಂತೆ ಕಂಡಿಲ್ಲ. ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಅವರು ಕೂತಿದ್ದರು. ಅಷ್ಟಕ್ಕೂ ಕೊನೆಗೆ ಆಟ ಯಾವ ಗತಿ ಪಡೆದುಕೊಂಡಿತು, ಮನೆಯಲ್ಲಿ ಏನೆಲ್ಲ ಆಯಿತು ಎಂಬುದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್​? ನಿರ್ಮಲಾ ಚೆನ್ನಪ್ಪ ಅಸ್ವಸ್ಥ

Published On - 6:11 pm, Tue, 9 March 21