Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ

BBK8: ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಹಾಗೆ ಮಾತನಾಡಿದ್ದರಿಂದಲೇ ಈ ವರ್ಷ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುವಂತಾಯಿತು ಎಂದು ಟ್ರೋಲ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ
ನಿಧಿ ಸುಬ್ಬಯ್ಯ - ದಿವ್ಯಾ ಸುರೇಶ್​ - ಮಂಜು ಪಾವಗಡ

Updated on: May 09, 2021 | 11:40 AM

ಸತತ 70 ದಿನ ನಡೆದುಕೊಂಡು ಬಂದ ಕನ್ನಡ ಬಿಗ್​ ಬಾಸ್​ ಕೊನೆಗೊಳ್ಳುವ ಸಮಯ ಬಂದಿದೆ. ಕೊರೊನಾ ವೈರಸ್​ ನಿಯಂತ್ರಿಸುವ ಸಲುವಾಗಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿರುವುದರಿಂದ ಎಲ್ಲ ರಿಯಾಲಿಟಿ ಶೋ, ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್​ ಬಂದ್​ ಆಗುತ್ತಿದೆ. ಮೇ 24ರವರೆಗೆ ಯಾರೂ ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ. ಬಿಗ್​ ಬಾಸ್​ ಅಂತ್ಯವಾಗಲು ಕೂಡ ಇದೇ ಕಾರಣ. ಆದರೆ ಟ್ರೋಲ್​ ಮಂದಿ ಲೆಕ್ಕಾಚಾರವೇ ಬೇರೆ. ಅವರು ಬೇರೆ ಕಾರಣವನ್ನು ಹುಡುಕಿ ತೆಗೆದಿದ್ದಾರೆ.

ದಿವ್ಯಾ ಸುರೇಶ್​ಗೂ ಇದಕ್ಕೂ ಏನ್​ ಸಂಬಂಧ?

ಬಿಗ್​ ಬಾಸ್​ ಗ್ರ್ಯಾಂಡ್​ ಓಪನಿಂಗ್​ ದಿನ ನಟಿ ದಿವ್ಯಾ ಸುರೇಶ್​ ಅವರು ವೇದಿಕೆ ಮೇಲೆ ಮಾತನಾಡಿದ್ದರು. ಕಿಚ್ಚ ಸುದೀಪ್​ ಜೊತೆ ತಮ್ಮ ಬದುಕಿನ ಕೆಲವು ವಿವರಗಳನ್ನು ಹಂಚಿಕೊಂಡಿದ್ದರು. ‘ನಾನು ಒಂದು ಸೀರಿಯಲ್​ ಮಾಡಿದೆ. ಆದರೆ ಆ ಸೀರಿಯಲ್​ ಅರ್ಧಕ್ಕೆ ನಿಲ್ಲಿಸಿದರು. ಒಂದು ಸಿನಿಮಾ ಮಾಡಿದೆ. ಆ ಸಿನಿಮಾ ರಿಲೀಸ್​ ಆಗಲೇ ಇಲ್ಲ. ನಾನು ಏನೇ ಮಾಡಿದರೂ ಅದು ಅರ್ಧಕ್ಕೆ ನಿಂತು ಹೋಗುತ್ತಿತ್ತು’ ಎಂದು ದಿವ್ಯಾ ಸುರೇಶ್​ ಹೇಳಿದ್ದರು. ಅದೇ ಮಾತನ್ನು ನೆಟ್ಟಿಗರು ಈಗ ಮತ್ತೆ ನೆನಪಿಸಿಕೊಂಡಿದ್ದಾರೆ. ಆ ದೃಶ್ಯ ತುಣುಕು ಇಟ್ಟುಕೊಂಡು ಟ್ರೋಲ್​ ಮಾಡಲಾಗುತ್ತಿದೆ.

ಈ ಸಲ ಕಪ್​ ನಮ್ದೇ ಎಂದಿದ್ದ ಮಂಜು!

ಪ್ರತಿ ಬಾರಿ ಐಪಿಎಲ್​ ಶುರುವಾದಾಗ ಆರ್​ಸಿಬಿ ಅಭಿಮಾನಿಗಳು ‘ಈ ಸಲ ಕಪ್​ ನಮ್ದೇ’ ಎಂದು ಕೂಗುತ್ತಾರೆ. ಆದರೆ ಒಂದು ಬಾರಿಯೂ ಅವರ ಕೈಗೆ ಕಪ್ ಸಿಕ್ಕಿಲ್ಲ. ಅಚ್ಚರಿ ಎಂದರೆ, ಬಿಗ್​ ಬಾಸ್​ ಮನೆಯ ಒಳಗೂ ಈ ಸಲ ಕಪ್​ ನಮ್ದೇ ಎಂದು ಮಂಜು ಹೇಳಿದ್ದರು. ಬಿಗ್​ ಬಾಸ್​ನಲ್ಲಿ ಗಾಜಿನ ಲೋಟ ಒಡೆದುಹಾಕಿದ್ದಕ್ಕಾಗಿ ಮಂಜುಗೆ ಶಿಕ್ಷೆಯ ರೂಪದಲ್ಲಿ ಚಿಕ್ಕ ಕಪ್​ ನೀಡಲಾಗಿತ್ತು. ಬಿಗ್​ ಬಾಸ್​ ಮುಂದಿನ ಆದೇಶ ನೀಡುವವರೆಗೆ ಅದೇ ಕಪ್​ನಲ್ಲಿ ನೀರು ಕುಡಿಯಬೇಕು ಎಂದು ಸೂಚಿಸಲಾಗಿತ್ತು. ಆ ಸಂದರ್ಭದಲ್ಲಿ ‘ಈ ಸಲ ಕಪ್​ ನಮ್ದೇ’ ಎಂದು ಮಂಜು ಹೇಳಿದ್ದರು.

ಮಂಜು ಹಾಗೆ ಹೇಳಿದ್ದರಿಂದಲೇ ಐಪಿಎಲ್​ ರೀತಿಯೇ ಬಿಗ್​ ಬಾಸ್​ ಕೂಡ ಅರ್ಧಕ್ಕೆ ನಿಲ್ಲುವಂತಾಯಿತು ಎಂದು ಟ್ರೋಲ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇಂದು ಬಿಗ್​ ಬಾಸ್ ಸೀಸನ್​ 8ರ​ ಕೊನೇ ಸಂಚಿಕೆ ಪ್ರಸಾರ ಆಗಲಿದೆ. ಒಟ್ಟಿನಲ್ಲಿ ಐಪಿಎಲ್​ ಮತ್ತು ಬಿಗ್​ ಬಾಸ್​ ರದ್ದಾಗಿರುವುದರಿಂದ ಟಿವಿ ಮುಂದೆ ಕೂರುತಿದ್ದ ಜನರಿಗೆ ಮನರಂಜನೆ ಇಲ್ಲದಂತಾಗಿದೆ. ಟಿವಿ ಸೀರಿಯಲ್​ ಚಿತ್ರೀಕರಣ ನಿಂತಿರುವುದರಿಂದ ಹಳೇ ಎಪಿಸೋಡ್​ಗಳನ್ನು ಮರುಪ್ರಸಾರ ಮಾಡುವುದು ಅನಿವಾರ್ಯ ಆಗಿದೆ.

ಇದನ್ನೂ ಓದಿ:

Bigg Boss Kannada: ಬಿಗ್​ ಬಾಸ್​ ರದ್ದು; ವಿನ್ನರ್​ ಯಾರು ಎಂದು ತೀರ್ಮಾನ ಮಾಡಿದ ಪ್ರೇಕ್ಷಕರು

Bigg Boss Kannada: ಮನಸ್ಸು ಭಾರವಾಗಿದೆ, ಬಿಗ್​ ಬಾಸ್​ ನಿಲ್ಲುತ್ತಿದೆ; ನೋವು ಹೊರಹಾಕಿದ ಪರಮೇಶ್ವರ್​ ಗುಂಡ್ಕಲ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us