
ಬಿಗ್ ಬಾಸ್ (Bigg boss) ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಎಂಟು ಸ್ಪರ್ಧಿಗಳಿದ್ದು ಈ ವಾರ ಎಲ್ಲ ವೈಯಕ್ತಿಕ ಟಾಸ್ಕ್ಗಳನ್ನೇ ನೀಡಲಾಗಿದೆ. ಅತಿ ಹೆಚ್ಚು ಅಂಕ ಪಡೆದವರು ನೇರವಾಗಿ ಫಿನಾಲೆಗೆ ಟಿಕೆಟ್ ಪಡೆಯುತ್ತಾರೆ. ಈ ಟಿಕೆಟ್ನ ಪಡೆಯೋದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಯಾವ ಸ್ಪರ್ಧಿಗಳ ಪಾಯಿಂಟ್ಸ್ ಎಷ್ಟಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ. ಕಲರ್ಸ್ ಕನ್ನಡ ಹೊಸ ಪ್ರೋಮೋ ಹಂಚಿಕೊಂಡಿದೆ. ಇದರಲ್ಲಿ ಅಂಕಪಟ್ಟಿ ಗಮನ ಸೆಳೆದಿದೆ.
ಈ ಬಾರಿ ವೈಯಕ್ತಿಕ ಟಾಸ್ಕ್ಗಳನ್ನು ನೀಡಲಾಗಿದೆ. ಪ್ರತಿ ಸ್ಪರ್ಧಿಯ ಸರದಿ ಬಂದಾಗ ಅವರು ಆಡಬೇಕು. ಆಡುವ ಸ್ಪರ್ಧಿ ಎದುರಾಳಿಯಾಗಿ ಮೂವರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಇರುತ್ತದೆ. ಇದೇ ರೀತಿ ಟಾಸ್ಕ್ ಮುಂದುವರಿದಿದೆ. ಏಳು ಟಾಸ್ಕ್ನ ರಿಸಲ್ಟ್ ಸಿಕ್ಕಿದೆ. ಇದರ ಪ್ರಕಾರ ಯಾವ ಸ್ಪರ್ಧಿಗಳ ಅಂಕ ಎಷ್ಟಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..
ತುಕಾಲಿ ಸಂತೋಷ್: 110
ನಮ್ರತಾ ಗೌಡ: 210
ಕಾರ್ತಿಕ್ ಗೌಡ: 170
ವರ್ತೂರು ಸಂತೋಷ್: 200
ತನಿಷಾ ಕುಪ್ಪಂಡ: 140
ವಿನಯ್ ಗೌಡ: 130
ಪ್ರತಾಪ್: 280
ಸಂಗೀತಾ: 260
ಕೊನೆಯಲ್ಲಿ ಒಂದು ಟಾಸ್ಕ್ ಉಳಿದುಕೊಂಡಿದೆ. ಈ ಆಟದಲ್ಲಿ ಸಂಗೀತಾನ ಪ್ರತಾಪ್ ಹೊರಗೆ ಇಟ್ಟಿದ್ದಾರೆ. ಈ ಮೂಲಕ ಪ್ರಮುಖರನ್ನೇ ರೇಸ್ನಿಂದ ತೆಗೆದಿದ್ದಾರೆ. ಅಂತಿಮವಾಗಿ ಯಾರಿಗೆ ಫಿನಾಲೆ ಟಿಕೆಟ್ ಸಿಕ್ಕಿದೆ ಎಂದು ತಿಳಿದುಕೊಳ್ಳುವ ಕುತೂಹಲ ಮೂಡಿದೆ. ಕಲರ್ಸ್ ಕನ್ನಡದಲ್ಲಿ ಇಂದು (ಜನವರಿ 12) ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 am, Fri, 12 January 24