ಕನ್ನಡ ಬಿಗ್ ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್ನ ಮೂರನೇ ಎಲಿಮಿನೇಷನ್ ಈ ವಾರ ನಡೆಯುತ್ತಿದೆ. ನಾಲ್ಕು ಸ್ಪರ್ಧಿಗಳು ಈ ವಾರದ ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರ ಹೋಗಲಿದ್ದಾರೆ. ಈ ಮೂಲಕ ಮನೆಯ ಸ್ಪರ್ಧಿಗಳ ಸಂಖ್ಯೆ ಒಂಭತ್ತಕ್ಕೆ ಇಳಿಕೆ ಆಗಲಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗುತ್ತಾರೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಈ ವಾರ ಬಿಗ್ ಬಾಸ್ ನಾಮಿನೇಷನ್ಗೆ ಬೇರೆ ರೀತಿಯ ಮಾರ್ಗ ಅನುಸರಿಸಲಾಗಿತ್ತು. ಪ್ರತಿವಾರ ಸ್ಪರ್ಧಿಗಳಿಗೆ ನಾಮಿನೇಷನ್ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಯಾರಿಗೆ ಯಾವ ಸ್ಪರ್ಧಿ ಇಷ್ಟವಿಲ್ಲವೋ ಅವರನ್ನು ನಾಮಿನೇಟ್ ಮಾಡುತ್ತಾರೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಆ ರೀತಿ ಇರಲಿಲ್ಲ. ಮನೆಯಲ್ಲಿ ಎರಡು ಟೀಂ ಮಾಡಿ 10 ಟಾಸ್ಕ್ಗಳನ್ನು ನೀಡಲಾಗಿತ್ತು. 4 ದಿನಗಳ ಕಾಲ ನಡೆದ ಟಾಸ್ಕ್ನಲ್ಲಿ ಸೋತ ತಂಡದ ಸದಸ್ಯರು ನಾಮಿನೇಟ್ ಆಗಿದ್ದಾರೆ.
ಈ ಬಾರಿ ಸೋತ ತಂಡದಲ್ಲಿದ್ದ ಪ್ರಶಾಂತ್ ಸಂಬರಗಿ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ ಗೌಡ, ಶುಭಾ ಪೂಂಜಾ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ. ಈ ನಾಲ್ವರು ಕ್ಯಾಂಡಿಡೇಟ್ಗಳು ಬಿಗ್ ಬಾಸ್ ಮನೆಯಲ್ಲಿ ಪ್ರಮುಖರು ಎನಿಸಿಕೊಂಡಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಔಟ್ ಆಗುತ್ತಿದ್ದಾರೆ.
ವೈಷ್ಣವಿ ಗೌಡ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಟಾಪ್ 5 ಲಿಸ್ಟ್ನಲ್ಲಿ ಅವರನ್ನು ನೋಡಬೇಕು ಎನ್ನುವುದು ಅಭಿಮಾನಿಗಳ ಇಚ್ಛೆ. ಹೀಗಾಗಿ, ಅವರಿಗೆ ಹೆಚ್ಚು ವೋಟ್ ಬಿದ್ದೇ ಬೀಳುತ್ತದೆ. ಹೀಗಾಗಿ, ಈ ವಾರ ಮನೆಯಿಂದ ಹೊರ ಹೋಗುವ ಸಾಧ್ಯತೆ ಕಡಿಮೆ. ಇನ್ನು, ಶುಭಾ ಪೂಂಜಾ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡವರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೆ ಅವರಿಗೆ ಹೆಚ್ಚಿನ ವೋಟ್ ಬೀಳುವ ಸಾಧ್ಯತೆ ಇದೆ.
ಪ್ರಶಾಂತ್ ಸಂಬರಗಿ ಇತ್ತೀಚೆಗೆ ತುಂಬಾನೇ ಬದಲಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜತೆ ಬೆರೆಯುತ್ತಿದ್ದಾರೆ. ಹೀಗಾಗಿ, ಅವರು ಈ ವಾರ ಸೇವ್ ಆಗಬಹುದು. ಕೊನೆಯಲ್ಲಿ ಉಳಿದು ಕೊಂಡಿದ್ದು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಪ್ರಿಯಾಂಕಾ ತಿಮ್ಮೇಶ್. ಇವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಬಹುದು ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಇದನ್ನೂ ಓದಿ: Bigg Boss Kannada: ಈ ವಾರದ ಎಲಿಮಿನೇಷನ್ಗೆ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್
Bigg Boss Kannada: ಮಂಜು ಪಾವಗಡ ಜಾತಕದಲ್ಲಿದ್ದ ವಿಚಾರ ಬಿಗ್ ಬಾಸ್ ಮನೆಯಲ್ಲಿ ನಿಜವಾಯ್ತು