ಬಿಗ್ ಬಾಸ್ ಗೆದ್ರೆ ಆರ್ಯವರ್ಧನ್​-ರೂಪೇಶ್​ ಸ್ಪೀಚ್ ಹೇಗಿರುತ್ತದೆ? ಸುದೀಪ್​ ಎದುರು ಮಿಮಿಕ್ರಿ ಮಾಡಿ ತೋರಿಸಿದ ಮನೆ ಮಂದಿ

ವೀಕೆಂಡ್ ಬಂದಿದೆ. ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಟ್ಟಿದ್ದಾರೆ. ಸುದೀಪ್ ಅವರ ನಿರೂಪಣೆಗಾಗಿ ವೀಕ್ಷಕರು ಕಾದಿದ್ದರು. ಈ ವಾರವೂ ಒಂದಷ್ಟು ಮೋಜು ಮಸ್ತಿ ಮಾಡಲಾಗಿದೆ.

ಬಿಗ್ ಬಾಸ್ ಗೆದ್ರೆ ಆರ್ಯವರ್ಧನ್​-ರೂಪೇಶ್​ ಸ್ಪೀಚ್ ಹೇಗಿರುತ್ತದೆ? ಸುದೀಪ್​ ಎದುರು ಮಿಮಿಕ್ರಿ ಮಾಡಿ ತೋರಿಸಿದ ಮನೆ ಮಂದಿ
ರೂಪೇಶ್​,ಆರ್ಯವರ್ಧನ್​,ಸುದೀಪ್
Edited By:

Updated on: Dec 24, 2022 | 5:47 PM

ಮುಂದಿನ ವಾರ ‘ಕನ್ನಡ ಬಿಗ್ ಬಾಸ್ ಸೀಸನ್​ 9’ರ ಫಿನಾಲೆ ನಡೆಯಲಿದೆ. ಈ ಮೂಲಕ ಈ ಸೀಸನ್ ಪಯಣ ಮುಗಿಯಲಿದೆ. ಸದ್ಯ ಬಿಗ್ ಬಾಸ್ (Bigg Boss) ಮನೆಯಲ್ಲಿ ಅರುಣ್ ಸಾಗರ್, ಆರ್ಯವರ್ಧನ್​ ಗುರೂಜಿ, ಅಮೂಲ್ಯ ಗೌಡ, ದಿವ್ಯಾ ಉರುಡುಗ, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ (Roopesh Rajanna) ಹಾಗೂ ರಾಕೇಶ್ ಅಡಿಗ ಆಟ ಮುಂದುವರಿಸಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎನ್ನಲಾಗುತ್ತಿದೆ. ಯಾರು ಬಿಗ್ ಬಾಸ್ ಟ್ರೋಫಿ ಎತ್ತಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಯಾರು ಟ್ರೋಫಿ ಗೆದ್ದರೆ ಯಾವ ರೀತಿ ಮಾತನಾಡುತ್ತಾರೆ ಎನ್ನುವುದನ್ನು ಮನೆ ಮಂದಿ ಮಿಮಿಕ್ರಿ ಮಾಡಿ ತೋರಿಸಿದ್ದಾರೆ.

ವೀಕೆಂಡ್ ಬಂದಿದೆ. ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಟ್ಟಿದ್ದಾರೆ. ಸುದೀಪ್ ಅವರ ನಿರೂಪಣೆಗಾಗಿ ವೀಕ್ಷಕರು ಕಾದಿದ್ದರು. ಈ ವಾರವೂ ಒಂದಷ್ಟು ಮೋಜು ಮಸ್ತಿ ಮಾಡಲಾಗಿದೆ. ಯಾರು ಕಪ್ ಗೆದ್ದರೆ ಯಾವ ರೀತಿ ಆಡುತ್ತಾರೆ ಎಂಬುದನ್ನು ತೋರಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿ ಇದರ ಪ್ರೋಮೋ ಹಂಚಿಕೊಂಡಿದೆ. ಇದನ್ನು ನೋಡಿ ವೀಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಆರ್ಯವರ್ಧನ್ ಅವರು ದೊಡ್ಮನೆಯಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಹಲವು ವಿಚಾರಗಳಲ್ಲಿ ತಾವು ಎಕ್ಸಪರ್ಟ್​ ಎಂದು ಭಾವಿಸಿದ್ದಾರೆ. ಅವರು ಬಿಗ್ ಬಾಸ್ ಗೆದ್ದರೆ ಹೇಗೆ ಹೇಳುತ್ತಾರೆ ಎಂಬುದನ್ನು ರೂಪೇಶ್ ವಿವರಿಸಿದ್ದಾರೆ. ‘ಐದರಲ್ಲಿ ಒಬ್ಬನಾಗಬೇಕು ಎಂದುಕೊಂಡಿದ್ದೆ. ಆದರೆ, ನಾನೇ ಗೆದ್ದಿದ್ದೇನೆ. ನಾನೇ ಗೆಲ್ಲುತ್ತೇನೆ ಅನ್ನೋದು ನನಗೆ ಗೊತ್ತಿತ್ತು. ನಾನೇ ನಂಬರ್​ ಒನ್​. ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್​’ ಎಂದು ಆರ್ಯವರ್ಧನ್ ಅವರ ಮಿಮಿಕ್ರಿ ಮಾಡಿ ತೋರಿಸಿದ್ದಾರೆ ರೂಪೇಶ್. ಇದನ್ನು ಕೇಳಿ ಮನೆ ಮಂದಿ ನಕ್ಕಿದ್ದಾರೆ.

ಅಮೂಲ್ಯ ಗೌಡ ಅವರು ಯಾವ ರೀತಿಯ ವಿನ್ನಿಂಗ್ ಸ್ಪೀಚ್ ನೀಡುತ್ತಾರೆ ಎಂಬುದನ್ನು ದಿವ್ಯಾ ಉರುಡುಗ ತೋರಿಸಿದ್ದಾರೆ. ರೂಪೇಶ್ ಶೆಟ್ಟಿ ಅವರು ಕಪ್ ಗೆದ್ದರೆ ಯಾವ ರೀತಿಯ ಮಾತುಗಳನ್ನು ಆಡುತ್ತಿದ್ದರು ಎಂಬುದನ್ನು ರಾಕೇಶ್ ಅಡಿಗ ತೋರಿಸಿದ್ದಾರೆ. ಈ ಪ್ರೋಮೋ ನೋಡಿ ವೀಕ್ಷಕರು ಸಖತ್​ ಖುಷಿಪಟ್ಟಿದ್ದಾರೆ. ಪೂರ್ತಿ ಎಪಿಸೋಡ್​ ನೋಡಲು ವೀಕ್ಷಕರು ಕಾದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಮೂಲಕ ಮರು ಎಂಟ್ರಿ ಪಡೆದ ದೀಪಿಕಾ ದಾಸ್​ಗೆ ಇದು ನಿರ್ಣಾಯಕ ವಾರ

ಫಿನಾಲೆಗೆ ಐದು ಸ್ಪರ್ಧಿಗಳು ಉಳಿದುಕೊಳ್ಳುತ್ತಾರೆ. ಸದ್ಯ ಈ ಮನೆಯಲ್ಲಿ 8 ಸ್ಪರ್ಧಿಗಳಿದ್ದಾರೆ. ಹೀಗಾಗಿ, ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದು ಹಾಗೂ ಮುಂದಿನ ವಾರ ಮಿಡ್ ವೀಕ್​ ಎಲಿಮಿನೇಷನ್ ನಡೆಯಬಹುದು ಎಂದು ವೀಕ್ಷಕರು ಊಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us