ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರಾ ಮದುವೆಗೂ ಮುನ್ನ ಅದ್ದೂರಿಯಾಗಿ ನಡೆಯಿತು ಸಂಗೀತ ಕಾರ್ಯಕ್ರಮ

Kiara Advani Sidharth Malhotra Wedding: ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್​ ಮಲ್ಹೋತ್ರಾ 2018ರಲ್ಲಿ ಭೇಟಿ ಆದರು. ನಂತರ ಪ್ರೀತಿ ಹುಟ್ಟಿದೆ. ‘ಶೇರ್ಷಾ’ ಚಿತ್ರದಲ್ಲಿ ಇವರು ಒಟ್ಟಾಗಿ ನಟಿಸಿದರು. ಇವರ ಕೆಮಿಸ್ಟ್ರಿ ಕೆಲಸ ಮಾಡಿತು.

ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರಾ ಮದುವೆಗೂ ಮುನ್ನ ಅದ್ದೂರಿಯಾಗಿ ನಡೆಯಿತು ಸಂಗೀತ ಕಾರ್ಯಕ್ರಮ
ಕಿಯಾರಾ-ಸಿದ್ದಾರ್ಥ್

Updated on: Feb 07, 2023 | 11:11 AM

ಬಾಲಿವುಡ್ ಸೆಲೆಬ್ರಿಟಿಗಳಾದ ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಮದುವೆಗೆ ಕ್ಷಣಗಣನೆ ಆರಂಭ ಆಗಿದೆ. ರಾಜಸ್ಥಾನದ ಜೈಸಲ್ಮೇರ್​​ನಲ್ಲಿರುವ ಸೂರ್ಯಗಢ (Suryagarh Hotel) ಹೋಟೆಲ್​​ನಲ್ಲಿ ಇಂದು (ಫೆಬ್ರವರಿ 7) ಮದುವೆ ನಡೆಯಲಿದೆ. ಈಗಾಗಲೇ ಕುಟುಂಬದವರು ಇಲ್ಲಿಗೆ ಆಗಮಿಸಿ ಮದುವೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಕಿಯಾರಾ ಹಾಗೂ ಸಿದ್ದಾರ್ಥ್ ಶನಿವಾರವರೇ (ಫೆಬ್ರವರಿ 4) ಜೈಸಲ್ಮೇರ್​ಗೆ ಆಗಮಿಸಿದ್ದರು. ಸೋಮವಾರ ರಾತ್ರಿ (ಫೆಬ್ರವರಿ 5) ಅದ್ದೂರಿಯಾಗಿ ಸಂಗೀತ ಕಾರ್ಯಕ್ರಮ ನಡೆದಿದೆ. ಪಾಪರಾಜಿಗಳು ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್​ ಮಲ್ಹೋತ್ರಾ 2018ರಲ್ಲಿ ಭೇಟಿ ಆದರು. ನಂತರ ಪ್ರೀತಿ ಹುಟ್ಟಿದೆ. ‘ಶೇರ್ಷಾ’ ಚಿತ್ರದಲ್ಲಿ ಇವರು ಒಟ್ಟಾಗಿ ನಟಿಸಿದರು. ಇವರ ಕೆಮಿಸ್ಟ್ರಿ ಕೆಲಸ ಮಾಡಿತು. ಹಲವು ವರ್ಷಗಳ ಕಾಲ ಪರಸ್ಪರ ಇಬ್ಬರೂ ಪ್ರೀತಿಸುತ್ತಿದ್ದರು. ಇವರ ಮಧ್ಯೆ ಬ್ರೇಕಪ್ ಆಗಿದೆ ಎಂಬ ಸುದ್ದಿಯೂ ಇತ್ತೀಚೆಗೆ ಹರಿದಾಡಿತ್ತು. ಈ ಜೋಡಿ ಈಗ ಮದುವೆ ಆಗುತ್ತಿದೆ. ಇಂದು ಅದ್ದೂರಿಯಾಗಿ ವಿವಾಹ ಕಾರ್ಯ ನಡೆಯಲಿದೆ.

ಇದನ್ನೂ ಓದಿ
‘ವೈಯಕ್ತಿಕ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ’; ಬ್ರೇಕಪ್​ನಿಂದ ಚೇತರಿಸಿಕೊಂಡ ಕಿಯಾರಾ ಅಡ್ವಾಣಿ
ಪಡ್ಡೆಗಳ ನಿದ್ದೆ ಕದ್ದ ಕಿಯಾರಾ ಅಡ್ವಾಣಿ; ಇಲ್ಲಿದೆ ಫೋಟೋ ಗ್ಯಾಲರಿ
ಕಿಯಾರಾ ಜತೆಗಿನ ಬ್ರೇಕಪ್​ ವದಂತಿಗೆ ತುಪ್ಪ ಸುರಿದ ಸಿದ್ದಾರ್ಥ್​ ಮಲ್ಹೋತ್ರಾ; ಫ್ಯಾನ್ಸ್​ ಊಹಿಸಿದ್ದೇನು?
ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​; ಸಿದ್ದಾರ್ಥ್​-ಕಿಯಾರಾ ಪ್ರೇಮ್​ ಕಹಾನಿಗೆ ಸ್ಯಾಡ್ ಎಂಡಿಂಗ್

ಸೂರ್ಯಗಢ ಹೋಟೆಲ್​ ಒಳಗೆ ತೆರಳಲು ಯಾರಿಗೂ ಅವಕಾಶ ಇಲ್ಲ. ಸೋಮವಾರ ರಾತ್ರಿ ಈ ಹೋಟೆಲ್​ನಲ್ಲಿ ಲೈಟ್ ಝಗಮಗಿಸಿದೆ. ಸಾಂಗ್​​ಗಳನ್ನು ದೊಡ್ಡದಾಗಿ ಪ್ಲೇ ಮಾಡಲಾಗಿದೆ. ಹೀಗಾಗಿ, ಸಂಗೀತ ಕಾರ್ಯಕ್ರಮ ನಡೆದಿದೆ ಎಂದು ಎಲ್ಲರೂ ಊಹಿಸಿದ್ದಾರೆ. ಈ ಸಂದರ್ಭದಲ್ಲಿ ಹೊರ ಭಾಗದಿಂದ ಹೋಟೆಲ್ ಹೇಗೆ ಕಾಣುತ್ತಿತ್ತು ಎಂಬುದನ್ನು ಪಾಪರಾಜಿಗಳು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

ಅದ್ದೂರಿ ಮದುವೆಗೆ ಬಾಲಿವುಡ್​ ಸೆಲೆಬ್ರಿಟಿಗಳು ಹಾಜರಿ ಹಾಕುತ್ತಿದ್ದಾರೆ. ಮನಿಶ್ ಮಲ್ಹೋತ್ರಾ,     ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜ್​​ಪೂತ್ ಸೇರಿ ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಲಿದ್ದಾರೆ. ಎಲ್ಲಾ ಸೆಲೆಬ್ರೆಟಿಗಳನ್ನೂ ಇಲ್ಲಿಗೆ ಕರೆಸೋಕೆ ಸಾಧ್ಯವಿಲ್ಲ. ಈ ಕಾರಣದಿಂದ ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Kiara Advani: ಕಿಯಾರಾ ಅಡ್ವಾಣಿ ಮದುವೆ ಲುಕ್​ ವೈರಲ್​; ಹಲವು ಪ್ರಶ್ನೆ ಕೇಳಿದ ಅಭಿಮಾನಿಗಳು

ಈ ಮೊದಲು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಕೂಡ ರಾಜಸ್ಥಾನದಲ್ಲೇ ನಡೆದಿತ್ತು. ಮದುವೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರು ಫೋಟೋ ಪೋಸ್ಟ್ ಮಾಡಿದ್ದರು. ಈ ಜೋಡಿ ಕೂಡ ವಿವಾಹದ ಬಳಿಕ ಫೋಟೋ ಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:22 am, Tue, 7 February 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us