ಅಭಿಷೇಕ್​ಗಿಂತ ಐಶ್ವರ್ಯಾ ರೈ ಇಷ್ಟೆಲ್ಲಾ ವರ್ಷ ದೊಡ್ಡವರಾ? ಈ ವಿಚಾರ ಗೊತ್ತಾ?

Abhishek Bachchan Birthday: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪ್ರೇಮ ವಿವಾಹ. ಇವರಿಬ್ಬರ ವಯಸ್ಸಿನ ಅಂತರದ ಬಗ್ಗೆ ಆಗಾಗಾ ಚರ್ಚೆ ಆಗುತ್ತಿದೆ. 2007 ರಲ್ಲಿ ಮದುವೆಯಾದ ಈ ದಂಪತಿಗೆ ಆರಾಧ್ಯಾ ಹೆಸರಿನ ಮಗಳು ಇದ್ದಾಳೆ. ಇಂದು (ಫೆಬ್ರವರಿ 5) ಅಭಿಷೇಕ್ ಜನ್ಮದಿನ. ಅಭಿಷೇಕ್ ಹಾಗೂ ಐಶ್ವರ್ಯಾ ವಯಸ್ಸಿನ ಅಂತರದ ಬಗ್ಗೆಯೂ ಮಾತನಾಡುತ್ತಿದ್ದಾರೆ.

ಅಭಿಷೇಕ್​ಗಿಂತ ಐಶ್ವರ್ಯಾ ರೈ ಇಷ್ಟೆಲ್ಲಾ ವರ್ಷ ದೊಡ್ಡವರಾ? ಈ ವಿಚಾರ ಗೊತ್ತಾ?
ಅಭಿಷೇಕ್-ಐಶ್ವರ್ಯಾ
Edited By:

Updated on: Feb 05, 2025 | 6:30 AM

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಎಲ್ಲರೂ ಹೇಳಿದ್ದೊಂದೇ ಬಂತು. ಆದರೆ, ಊಹಿಸಿದಂತೆ ನಡೆಯಲಿಲ್ಲ. ಐಶ್ವರ್ಯಾ ಹಾಗೂ ಅಭಿಷೇಕ್ ಒಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ಕೆಲವು ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಇದೆ. ಇಂದು (ಫೆಬ್ರವರಿ 5) ಅಭಿಷೇಕ್ ಜನ್ಮದಿನ. ಈ ದಿನದಂದು ಎಲ್ಲರೂ ಆಸ್ತಿ ವಿಚಾರದ ಕುರಿತು ಮಾತನಾಡುತ್ತಿದ್ದಾರೆ. ಜೊತೆಗೆ ಅಭಿಷೇಕ್ ಹಾಗೂ ಐಶ್ವರ್ಯಾ ವಯಸ್ಸಿನ ಅಂತರದ ಬಗ್ಗೆಯೂ ಮಾತನಾಡುತ್ತಿದ್ದಾರೆ.

ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾಗಿಂತ ವಯಸ್ಸಲ್ಲಿ ಚಿಕ್ಕವರು. ಇವರದ್ದು ಪ್ರೇಮ ವಿವಾಹ. ಸಲ್ಮಾನ್ ಹಾಗೂ ಐಶ್ವರ್ಯಾ ಪರಸ್ಪರ ಪ್ರೀತಿಸುತ್ತಿದ್ದರು. ಆ ಬಳಿಕ ಇವರು ಬೇರೆ ಆದರು. ನಂತರ ಐಶ್ವರ್ಯಾ ಅವರಿಗೆ ವಿವೇಕ್ ಒಬೆರಾಯ್ ಜೊತೆ ಪ್ರೀತಿ ಮೂಡಿತಾದರೂ ಹೆಚ್ಚು ದಿನ ಉಳಿಯಲು ಸಲ್ಮಾನ್ ಕೊಡಲಿಲ್ಲ. ಕೆಲವು ವರ್ಷಗಳ ಬಳಿಕ ಅಭಿಷೇಕ್ ಹಾಗೂ ಐಶ್ವರ್ಯಾ ಭೇಟಿ ಆಗಿ ಇವರ ಮಧ್ಯೆ ಪ್ರೀತಿ ಮೂಡಿತು.

ಪ್ರೀತಿಸಿ ಮದುವೆ ಆಗುತ್ತಿರುವ ಕಾರಣಕ್ಕೆ ಅಭಿಷೇಕ್ ಹಾಗೂ ಐಶ್ವರ್ಯಾ ಆಗಲಿ, ಕುಟುಂಬದವರಾಗಲಿ ವಯಸ್ಸಿನ ಬಗ್ಗೆ ಗಮನ ನೀಡಿಲ್ಲ. ಐಶ್ವರ್ಯಾ ರೈ ಅವರು 1973ರ ನವೆಂಬರ್ 1ರಂದು ಜನಿಸಿದರು. ಅಭಿಷೇಕ್ ಬಚ್ಚನ್ ಅವರು 1976ರ ಫೆಬ್ರವರಿ 5ರಂದು ಜನಿಸಿದರು. ಇವರ ಮಧ್ಯೆ ಮೂರು ವರ್ಷ ವಯಸ್ಸಿನ ಅಂತರ ಇದೆ.

2006ರಲ್ಲಿ ಇಬ್ಬರೂ ಡೇಟಿಂಗ್ ಆರಂಭಿಸಿದರು. 2007ರಲ್ಲಿ ಇವರು ಮದುವೆ ಆದರು. ಈ ದಂಪತಿಗೆ ಆರಾಧ್ಯಾ ಹೆಸರಿನ ಮಗಳು ಇದ್ದಾಳೆ. 2011ರಲ್ಲಿ ಇವಳ ಜನನ ಆಯಿತು. ಅಭಿಷೇಕ್ ಹಾಗೂ ಐಶ್ವರ್ಯಾ, ‘ಗುರು’, ‘ಧೂಮ್ 2’, ‘ಕುಚ್ ನ ಕಹೋ’ ಮೊದಲಾದ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: 40 ಕೋಟಿ ರೂ. ಬಜೆಟ್ ಸಿನಿಮಾ ಗಳಿಸಿದ್ದು 13 ಲಕ್ಷ; ಸಂಕಷ್ಟದಲ್ಲಿ ಅಭಿಷೇಕ್ ಬಚ್ಚನ್ ಕರಿಯರ್

ಆಸ್ತಿ ವಿಚಾರಕ್ಕೆ ಬಂದರೆ ಅಭಿಷೇಕ್​ಗಿಂತ ಐಶ್ವರ್ಯಾ ಅವರು ಹೆಚ್ಚು ಶ್ರೀಮಂತರು. ಐಶ್ವರ್ಯಾ ರೈ ಅವರ ಆಸ್ತಿ ಸುಮಾರು 800 ಕೋಟಿ ರೂಪಾಯಿ ಇದೆ. ಆದರೆ ಅಭಿಷೇಕ್ ಆಸ್ತಿ 280 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಈ ದಂಪತಿ ಸಿನಿಮಾಗಳಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us