ಎಲಾನ್ ಮಸ್ಕ್ (Elon Musk) ಟ್ವಿಟರ್ ಸಿಇಒ ಆದ ಬಳಿಕ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಟ್ವಿಟರ್ನಲ್ಲಿ ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎನ್ನುವ ನಿಯಮವನ್ನು ಅವರು ಜಾರಿಗೆ ತಂದಿದ್ದಾರೆ. ಈ ಬೆನ್ನಲ್ಲೇ ಎಲ್ಲಾ ಖಾತೆಗಳ ಬ್ಲೂಟಿಕ್ ಮಾಯವಾಗಿತ್ತು. ಇದಕ್ಕೆ ಸೆಲೆಬ್ರಿಟಿ ವಲಯದಿಂದ ವಿರೋಧ ವ್ಯಕ್ತವಾಯಿತು. ಕೋಟ್ಯಾಂತರ ಹಿಂಬಾಲಕರನ್ನು ಹೊಂದಿರುವ ಸೆಲೆಬ್ರಿಟಿಗಳು ಈ ಬಗ್ಗೆ ಅಸಮಾಧಾನ ಹೊರಹಾಕಿದರು. ಈ ಬೆನ್ನಲ್ಲೇ ಎಲಾನ್ ಮಸ್ಕ್ ಮತ್ತೆ ನಿಯಮ ಬದಲಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ನಟ ಅಮಿತಾಭ್ ಬಚ್ಚನ್ (Amitabh Bachchan) ಅಸಮಾಧಾನ ಹೊರಹಾಕಿದ್ದಾರೆ. ‘ನಾನು ದುಡ್ಡು ಕಳೆದುಕೊಂಡೆ’ ಎಂದು ಅವರು ಹೇಳಿದ್ದಾರೆ.
ಬ್ಲೂಟಿಕ್ ಮಾಯವಾದ ಬೆನ್ನಲ್ಲೇ ಅನೇಕ ಸೆಲೆಬ್ರಿಟಿಗಳು ಸಿಟ್ಟಾದರು. ಕೆಲವರು ತಾವು ಹಣ ಪಾವತಿಸುವುದಿಲ್ಲ ಎಂದು ನೇರವಾಗಿಯೇ ಹೇಳಿದರು. ಈ ಬೆನ್ನಲೇ ಹಲವು ಸೆಲೆಬ್ರಿಟಿಗಳಿಗೆ ಬ್ಲೂಟಿಕ್ ಮರಳಿ ಸಿಕ್ಕಿದೆ. ಇದಕ್ಕೆ ಕಾರಣವೂ ಇದೆ. 1 ಮಿಲಿಯನ್ ಅಂದರೆ 10 ಲಕ್ಷಕ್ಕಿಂತ ಅಧಿಕ ಹಿಂಬಾಲಕರು ಇರುವ ಟ್ವಿಟರ್ ಬಳಕೆದಾರರ ಖಾತೆಯಲ್ಲಿ ಬ್ಲೂಟಿಕ್ ಹಾಗೆಯೇ ಉಳಿಯುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಹೀಗಾಗಿ, 1 ಮಿಲಿಯನ್ಗಿಂತ ಅಧಿಕ ಫಾಲೋವರ್ಸ್ ಇರುವವರ ಖಾತೆಗೆ ಬ್ಲೂಟಿಕ್ ಮರಳಿದೆ.
ಈ ಬೆಳವಣಿಗೆ ಬಗ್ಗೆ ಅಮಿತಾಭ್ ಬಚ್ಚನ್ ಅಸಮಾಧಾನ ಹೊರಹಾಕಿದ್ದಾರೆ. ಬ್ಲೂಟಿಕ್ ಪಡೆಯಲು ಅವರು ಹಣ ಪಾವತಿಸಿದ್ದರು. ಆ ಬಳಿಕ ಮಸ್ಕ್ ಕಡೆಯಿಂದ ಹೊಸ ಘೋಷಣೆ ಆಯಿತು. ‘ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎಂದಿರಿ. ನಾನು ಹಣ ಪಾವತಿಸಿದೆ. ಆದರೆ, 1 ಮಿಲಿಯನ್ಗಿಂತ ಹೆಚ್ಚಿನ ಹಿಂಬಾಲಕರಿದ್ದರೆ ಅವರ ಬ್ಲೂಟಿಕ್ ಹಾಗೆಯೇ ಇರುತ್ತದೆ ಎಂದು ಈಗ ನೀವು ಹೇಳುತ್ತಿದ್ದೀರಿ. ನನಗೆ 48.4 ಮಿಲಿಯನ್ ಹಿಂಬಾಲಕರಿದ್ದಾರೆ. ನನ್ನ ಹಣ ಈಗಾಗಲೇ ಹೋಗಿದೆ. ನಾನೀಗ ಏನು ಮಾಡಬೇಕು?’ ಎಂದು ಅಮಿತಾಭ್ ಟ್ವೀಟ್ ಮಾಡಿದ್ದಾರೆ.
T 4627 – अरे मारे गये गुलफाम , बिरज में मारे गये गुलफाम ?
ए ! Twitter मौसी, चाची, बहनी, ताई, बुआ .. झौआ भर के त नाम हैं तुम्हार ! पैसे भरवा लियो हमार, नील कमल ख़ातिर ✔️ अब कहत हो जेकर 1 m follower उनकर नील कमल free म
हमार तो 48.4 m हैं , अब ??
खेल खतम, पैसा हजम ?!?— Amitabh Bachchan (@SrBachchan) April 23, 2023
ಇದನ್ನೂ ಓದಿ: ಟ್ವಿಟರ್ ಹೊಸ ನಿಯಮ; ಯಶ್, ಅಲ್ಲು ಅರ್ಜುನ್ ಸೇರಿ ಎಲ್ಲಾ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯ
ಅಲ್ಲು ಅರ್ಜುನ್, ಅಮಿತಾಭ್ ಬಚ್ಚನ್ ಮೊದಲಾದವರು ಬ್ಲೂಟಿಕ್ ಕಳೆದುಕೊಂಡಿದ್ದರು. ಆದರೆ, ಇವರೆಲ್ಲರಿಗೂ ಒಂದು ಮಿಲಿಯನ್ಗೂ ಅಧಿಕ ಹಿಂಬಾಲಕರು ಇರುವುದರಿಂದ ಟ್ವಿಟರ್ ಬ್ಲೂ ಟಿಕ್ ಮರಳಿದೆ. ಸದ್ಯ ಈ ಬಗ್ಗೆ ಅನೇಕ ಗೊಂದಲಗಳು ಮುಂದುವರಿದಿವೆ. ನಕಲಿ ಖಾತೆಗಳು ಹಣ ಪಾವತಿಸಿ ಬ್ಲೂಟಿಕ್ ಪಡೆಯಬಹುದು ಎನ್ನುವ ಭಯ ಕೆಲವರಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Mon, 24 April 23