Prem Chopra: ಬಾಲಿವುಡ್​​ನ ಖ್ಯಾತ ನಟ ಹಾಗೂ ಪತ್ನಿಗೆ ಕೊರೊನಾ ಸೋಂಕು; ಆಸ್ಪತ್ರೆಗೆ ದಾಖಲು

| Updated By: shivaprasad.hs

Updated on: Jan 04, 2022 | 11:16 AM

Covid 19: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಬಾಲಿವುಡ್ ತಾರೆಯರೂ ಸೋಂಕಿಗೆ ತುತ್ತಾಗುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ. ಇದೀಗ ಹಿರಿಯ ನಟ ಪ್ರೇಮ್ ಚೋಪ್ರಾ ದಂಪತಿಗೆ ಸೋಂಕು ಕಾಣಿಸಿಕೊಂಡಿದೆ.

Prem Chopra: ಬಾಲಿವುಡ್​​ನ ಖ್ಯಾತ ನಟ ಹಾಗೂ ಪತ್ನಿಗೆ ಕೊರೊನಾ ಸೋಂಕು; ಆಸ್ಪತ್ರೆಗೆ ದಾಖಲು
ಪ್ರೇಮ್ ಚೋಪ್ರಾ, ಉಮಾ ಚೋಪ್ರಾ
Follow us on

ಮುಂಬೈನಲ್ಲಿ ಕೊರೊನಾ ಪ್ರಕರಣಗಳು ತೀವ್ರ ಗತಿಯಲ್ಲಿ ಏರುತ್ತಿರುವ ಬೆನ್ನಲ್ಲೇ, ಬಾಲಿವುಡ್ ತಾರೆಯರೂ ಸೋಂಕಿಗೆ ತುತ್ತಾಗುತ್ತಿದ್ದಾರೆ. ನಿನ್ನೆಯಷ್ಟೇ (ಸೋಮವಾರ) ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ಹಾಗೂ ಜಾನ್ ಅಬ್ರಹಾಂ (John Abraham)- ಪ್ರಿಯಾ ರುಂಚಾಲ್ (Priya Runchal) ದಂಪತಿ ಸೋಂಕಿಗೆ ತುತ್ತಾಗಿದ್ದರು. ಇದೀಗ ಮತ್ತೋರ್ವ ಹಿರಿಯ ನಟ ಪ್ರೇಮ್ ಚೋಪ್ರಾ (Prem Chopra) ಸೋಂಕಿಗೆ ತುತ್ತಾಗಿದ್ದಾರೆ. ಪ್ರೇಮ್ ಚೋಪ್ರಾ ಪತ್ನಿ ಉಮಾ ಚೋಪ್ರಾ ಅವರಿಗೂ ಪಾಸಿಟಿವ್ ಆಗಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಚ್ಚಿನ ನಟನಿಗೆ ಸೋಂಕು ತಗುಲಿ, ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಅಭಿಮಾನಿಗಳು ಆತಂಕಿತರಾಗಿದ್ದಾರೆ.

ವೈದ್ಯರು ಹೇಳಿದ್ದೇನು?
86 ವರ್ಷದ ಪ್ರೇಮ್ ಚೋಪ್ರಾ (Prem Chopra) ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಲೀಲಾವತಿ ಆಸ್ಪತ್ರೆಯ ಡಾ.ಜಲೀಲ್ ಪಾರ್ಕರ್ ಹೇಳಿದ್ದಾರೆ. ಪಿಟಿಐನೊಂದಿಗೆ ಮಾತನಾಡಿರುವ ಅವರು, ‘‘ಒಂದು ಅಥವಾ ಎರಡು ದಿನದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು’’ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ 86 ವರ್ಷವಾದರೂ ಕೂಡ ಚಿಕಿತ್ಸೆಗೆ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ಧಾರೆ.

ಪ್ರೇಮ್ ಚೋಪ್ರಾ ಬಾಲಿವುಡ್​​ನಲ್ಲಿ ಬಹುದೊಡ್ಡ ಹೆಸರು. ‘ಬಾಬ್ಬಿ’, ‘ದೊ ರಾಸ್ತೆ’, ‘ಉಪಕಾರ್’ ಸೇರಿದಂತೆ ಹಲವು ಖ್ಯಾತ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, ಇತ್ತೀಚೆಗೆ ಸೈಫ್ ಅಲಿ ಖಾನ್ ನಟನೆಯ ‘ಬಂಟಿ ಔರ್ ಬಬ್ಲಿ 2’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

ಬಾಲಿವುಡ್​​ನ ಹಲವು ತಾರೆಯರಿಗೆ ಸೋಂಕು:
ಬಾಲಿವುಡ್​ನ ಹಲವು ತಾರೆಯರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದು, ನಿನ್ನೆ ಏಕ್ತಾ ಕಪೂರ್ ಹಾಗೂ ಜಾನ್ ಅಬ್ರಹಾಂ ದಂಪತಿ ಸೋಂಕಿಗೆ ತುತ್ತಾಗಿದ್ದರು. ಇದಕ್ಕೂ ಮುನ್ನ ಮೃಣಾಲ್ ಠಾಕೂರ್, ನೋರಾ ಫತೇಹಿ, ಅಲಾಯಾ, ರಾಹುಲ್ ರವೈಲ್, ರಿಯಾ ಕಪೂರ್, ಕರಣ್ ಬೂಲಾನಿ ಸೇರಿದಂತೆ ಹಲವರಿಗೆ ಕೊರೊನಾ ಪಾಸಿಟಿವ್ ಆಗಿತ್ತು.

ಮಹಾರಾಷ್ಟ್ರದಲ್ಲಿ ಸೋಂಕು ದಿನದಿಂದ ದಿನಕ್ಕೆ ಏರುತ್ತಿದ್ದು, ಸೋಮವಾರ 12,160 ಪ್ರಕರಣಗಳು ದಾಖಲಾಗಿವೆ. ಒಂದು ದಿನದ ಅವಧಿಯಲ್ಲಿ 11 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 50,000 ದಾಟಿದೆ.

ಇದನ್ನೂ ಓದಿ:

Sunny Leone: ಸನ್ನಿ ಲಿಯೋನ್ ಕೈಯಲ್ಲಿವೆ 7 ಸಿನಿಮಾಗಳು; ನಟಿಗೆ ಯಶಸ್ಸು ತಂದುಕೊಡಲಿದೆಯೇ 2022?

Nysa Devgan: ಇನ್ನೂ ಬಾಲಿವುಡ್​ಗೆ ಕಾಲಿಡದ ಅಜಯ್- ಕಾಜೊಲ್ ಪುತ್ರಿಯ ಚಿತ್ರಗಳು ವೈರಲ್; ಇದಕ್ಕಿದೆ ವಿಶೇಷ ಕಾರಣ