ವೇದಿಕೆ ಮೇಲೆ ದೌರ್ಜನ್ಯ, ಅವಮಾನ ಆರೋಪ, ದೂರು ನೀಡಿದ ಖ್ಯಾತ ನಟಿ

Mimi Chakraborty: ಖ್ಯಾತ ನಟಿ, ಟಿಎಂಸಿಯ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಅವರು ದೌರ್ಜನ್ಯದ ಆರೋಪ ಮಾಡಿದ್ದು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪಶ್ಚಿಮ ಬಂಗಾಳದ ಜಿಲ್ಲೆಯೊಂದರಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ವೇದಿಕೆ ಮೇಲೆ ತಮ್ಮ ಮೇಲೆ ದೌರ್ಜನ್ಯ ಎಸಗಲಾಯ್ತು, ಬಲವಂತದಿಂದ ನನ್ನ ಕಾರ್ಯಕ್ರಮವನ್ನು ನಿಲ್ಲಿಸಲಾಯ್ತು ಎಲ್ಲರೆದುರು ಅವಮಾನ ಮಾಡಲಾಯ್ತು ಎಂದು ನಟಿ ಮಿಮಿ ಚಕ್ರವರ್ತಿ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

ವೇದಿಕೆ ಮೇಲೆ ದೌರ್ಜನ್ಯ, ಅವಮಾನ ಆರೋಪ, ದೂರು ನೀಡಿದ ಖ್ಯಾತ ನಟಿ
Mimi Chakraborty

Updated on: Jan 28, 2026 | 10:56 AM

ಪಶ್ಚಿಮ ಬಂಗಾಳದ (West Bengal) ಖ್ಯಾತ ನಟಿ, ಟಿಎಂಸಿಯ ಮಾಜಿ ಸಂಸದೆ ಮಿಮಿ ಚಕ್ರವರ್ತಿ (Mimi Chakraborty) ಅವರು ದೌರ್ಜನ್ಯದ ಆರೋಪ ಮಾಡಿದ್ದು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪಶ್ಚಿಮ ಬಂಗಾಳದ ಜಿಲ್ಲೆಯೊಂದರಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ವೇದಿಕೆ ಮೇಲೆ ತಮ್ಮ ಮೇಲೆ ದೌರ್ಜನ್ಯ ಎಸಗಲಾಯ್ತು, ಬಲವಂತದಿಂದ ನನ್ನ ಕಾರ್ಯಕ್ರಮವನ್ನು ನಿಲ್ಲಿಸಲಾಯ್ತು ಎಲ್ಲರೆದುರು ಅವಮಾನ ಮಾಡಲಾಯ್ತು ಎಂದು ನಟಿ ಮಿಮಿ ಚಕ್ರವರ್ತಿ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

ಪಶ್ಚಿಮ ಬಂಗಾಳದ ನಯಾಗ್ರಾಂನ ಬೋಂಗೋನ್ ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಿಮಿ ಚಕ್ರವರ್ತಿಯನ್ನು ಅತಿಥಿಯಾಗಿ ಆಹ್ವಾನ ಮಾಡಲಾಗಿತ್ತು. ನಟಿ ನೀಡಿರುವ ದೂರಿನ ಅನ್ವಯ, ನಟಿ ಮಿಮಿ ವೇದಿಕೆ ಮೇಲೆ ಪ್ರದರ್ಶನ ನೀಡುತ್ತಿರುವಾಗಲೇ ವೇದಿಕೆ ಏರಿದ ಆಯೋಜಕರಲ್ಲಿ ಒಬ್ಬರಾದ ತನ್ಮಯ್ ಶಾಸ್ತ್ರಿ ಎಂಬುವರು ನಟಿಯನ್ನು ಪ್ರದರ್ಶನ ನಿಲ್ಲಿಸುವಂತೆ ಹೇಳಿದ್ದಲ್ಲದೆ, ಬಲವಂತದಿಂದ ಕೆಳಕ್ಕೆ ಇಳಿಸಿದ್ದಾರೆ. ‘ಸಾಕು ನಿಲ್ಲಿಸು, ಇಲ್ಲಿಂದ ತೆರಳು’ ಎಂದು ಕಠಿಣವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಆದರೆ ಆಯೋಜಕರು ಹೇಳುತ್ತಿರುವುದೇ ಬೇರೆ, ವೇದಿಕೆ ಕಾರ್ಯಕ್ರಮಕ್ಕೆ ಮಧ್ಯರಾತ್ರಿ 12 ಗಂಟೆಯ ವರೆಗೆ ಮಾತ್ರ ಪೊಲೀಸರು ಅವಕಾಶ ಕೊಟ್ಟಿದ್ದರಂತೆ. ಆದರೆ ನಟಿ ಸುಮಾರು ಒಂದು ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಲ್ಲದೆ, ವೇದಿಕೆ ಮೇಲೆ ಸಹ ಹೆಚ್ಚು ಸಮಯ ತೆಗೆದುಕೊಂಡರಂತೆ. ಪೊಲೀಸರ ನಿಯಮದ ಕಾರಣ ತಾವು ನಟಿಯನ್ನು ಕಾರ್ಯಕ್ರಮ ನಿಲ್ಲಿಸುವಂತೆ ಹೇಳಿದೆವು ಎಂದಿದ್ದಾರೆ. ಅಲ್ಲದೆ ತಾವು ಯಾವುದೇ ದೌರ್ಜನ್ಯವನ್ನಾಗಲಿ, ನಟಿಯೊಂದಿಗೆ ಅವಮಾನಕರ ರೀತಿಯಲ್ಲಾಗಲಿ ನಡೆದುಕೊಂಡಿಲ್ಲ ಎಂದು ಆಯೋಜಕರು ಹೇಳಿದ್ದಾರೆ. ಬದಲಿಗೆ, ನಟಿಯ ಬೌನ್ಸರ್​​ಗಳು ನಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡರು ಎಂದಿದ್ದಾರೆ.

ಇದನ್ನೂ ಓದಿ:ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?

ನಟಿ ಮಿಮಿ ಚಕ್ರವರ್ತಿ, ಇಮೇಲ್ ಮೂಲಕ ಬೊಂಗೋನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಹ ತನಿಖೆ ಆರಂಭಿಸಿದ್ದಾರೆ. ನಟಿ ಮಿಮಿ ಅವರು ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಹ ಬರೆದುಕೊಂಡಿದ್ದು, ನಟಿಯ ಪೋಸ್ಟ್​​ಗೆ ಪರ-ವಿರೋಧ ಅಭಿಪ್ರಾಯಗಳು ಸಹ ವ್ಯಕ್ತವಾಗಿವೆ. ಮಿಮಿ ಚಕ್ರವರ್ತಿ, ಬಂಗಾಳಿ ಸಿನಿಮಾ ರಂಗದ ಬಲು ಜನಪ್ರಿಯ ನಟಿ, ಮತ್ತು ಟಿಎಂಸಿ ಪಕ್ಷದ ಮಾಜಿ ಸಂಸದೆ ಸಹ ಆಗಿದ್ದವರು. ಬಂಗಾಳಿ ಸಿನಿಮಾಗಳ ಜೊತೆಗೆ ಒಂದು ಬಾಲಿವುಡ್ ಸಿನಿಮಾ ಮತ್ತು ಒಂದು ಬಾಂಗ್ಲಾದೇಶಿ ಸಿನಿಮಾನಲ್ಲಿಯೂ ನಟಿಸಿದ್ದಾರೆ ಮಿಮಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ