
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ನಟಿಸಿರುವ ‘ಆದಿಪುರುಷ್’ (Adipurush) ಚಿತ್ರ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. ಈಗ ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಆಯೋಧ್ಯೆಯಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ ಟೀಸರ್ (Adipurush Teaser) ಬಿಡುಗಡೆ ಮಾಡಲಾಗಿದೆ. ರಾಮನ ಅವತಾರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಅಭಿನಯಿಸಿದ್ದಾರೆ. ಹತ್ತು ತಲೆಯ ರಾವಣನಾಗಿ ಸೈಫ್ ಅಲಿ ಖಾನ್ ಅಬ್ಬರಿಸಿದ್ದಾರೆ. ‘ಆದಿಪುರುಷ್’ ಟೀಸರ್ನಲ್ಲಿನ ಗ್ರಾಫಿಕ್ಸ್ ಕಂಡು ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ಹೈಬಜೆಟ್ನಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರದ ಪ್ರತಿ ಫ್ರೇಮ್ ಕೂಡ ಅದ್ದೂರಿಯಾಗಿದೆ ಎಂಬುದಕ್ಕೆ ಈ ಟೀಸರ್ ಸಾಕ್ಷಿ ಒದಗಿಸುತ್ತಿದೆ.
ಭೂಷಣ್ ಕುಮಾರ್ ಮತ್ತು ಕ್ರಿಷನ್ ಕುಮಾರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. 2023ರ ಜನವರಿ 12ರಂದು 3ಡಿ ವರ್ಷನ್ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಅಯೋಧ್ಯೆಯ ಸರಯು ನದಿಯ ದಂಡೆ ಮೇಲೆ ಇಂದು (ಅ.2) ಟೀಸರ್ ಬಿಡುಗಡೆ ಆಗಿರುವುದು ವಿಶೇಷ. ಬೃಹತ್ ವೇದಿಕೆಯಲ್ಲಿ, ದೊಡ್ಡ ಎಲ್ಇಡಿ ಪರದೆ ಮೇಲೆ ಟೀಸರ್ ಬಿತ್ತರ ಮಾಡಲಾಗಿದೆ. ಇದನ್ನು ಕಂಡು ಫ್ಯಾನ್ಸ್ ಕಣ್ತುಂಬಿಕೊಂಡಿದ್ದಾರೆ.
ಕನ್ನಡ, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ‘ಆದಿಪುರುಷ್’ ಟೀಸರ್ ರಿಲೀಸ್ ಆಗಿದೆ. ಎಲ್ಲ ಭಾಷೆಗಳಿಂದಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ನಿರ್ದೇಶಕ ಓಂ ರಾವುತ್ ಅವರ ಕಾರ್ಯಕ್ಕೆ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ.
‘ಬಾಹುಬಲಿ’ ಚಿತ್ರದ ಯಶಸ್ಸಿನ ನಂತರ ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಹೀರೋ ಇಮೇಜ್ ಪಡೆದುಕೊಂಡರು. ಹಾಗಾಗಿ ಅವರ ಎಲ್ಲ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಕ್ಕಿಲ್ಲ. ‘ಸಾಹೋ’ ಮತ್ತು ‘ರಾಧೆ ಶ್ಯಾಮ್’ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸೋತವು. ಈಗ ‘ಆದಿಪುರುಷ್’ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲು ಸಜ್ಜಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:36 pm, Sun, 2 October 22