ಆರ್​ಸಿಬಿ ಗೆದ್ದ ಬಳಿಕ ಅನುಷ್ಕಾ ಶರ್ಮಾ ಸೆಲೆಬ್ರೇಷನ್ ಹೇಗಿತ್ತು ನೋಡಿ; ಬೇರೆಯದೇ ಲೆವೆಲ್

|

Updated on: May 13, 2024 | 7:29 AM

ಅನುಷ್ಕಾ ಶರ್ಮಾ ಅವರು ತಮ್ಮ ಚೇರ್ ಮೇಲೆ ಕುಳಿತಿದ್ದರು. ಕೊನೆಯ ವಿಕೆಟ್ ಬೀಳುತ್ತಿದ್ದಂತೆ ಅವರು ಎದ್ದು ಕೈ ಮುಗಿದಿದ್ದಾರೆ. ಈ ವಿಡಿಯೋನ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ‘ಅನುಷ್ಕಾ ಶರ್ಮಾ ಅವರ ಸೆಲೆಬ್ರೇಷನ್ ಬೇರೆಯದೇ ಲೆವೆಲ್’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ಆರ್​ಸಿಬಿ ಗೆದ್ದ ಬಳಿಕ ಅನುಷ್ಕಾ ಶರ್ಮಾ ಸೆಲೆಬ್ರೇಷನ್ ಹೇಗಿತ್ತು ನೋಡಿ; ಬೇರೆಯದೇ ಲೆವೆಲ್
ಅನುಷ್ಕಾ
Follow us on

ರಾಯಲ್​ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಆರ್​ಸಿಬಿ ಗೆದ್ದಿದೆ. ಫಾಪ್ ಡುಪ್ಲೆಸಿಸ್ ತಂಡ 47 ರನ್​ಗಳ ಗೆಲುವು ಸಾಧಿಸೋ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಐದನೇ ಸ್ಥಾನಕ್ಕೆ ಜಂಪ್ ಆಗಿದೆ. ಇದು ಆರ್​ಸಿಬಿ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಆರ್​ಸಿಬಿ ಅಭಿಮಾನಿ. ಇದಕ್ಕೆ ಕಾರಣ ಅವರ ಪತಿ ವಿರಾಟ್ ಕೊಹ್ಲಿ ಈ ತಂಡದಲ್ಲಿ ಆಟ ಆಡುತ್ತಿದ್ದಾರೆ. ಆರ್​ಸಿಬಿ ಗೆದ್ದ ಬಳಿಕ ಅವರು ಕೂಡ ಸಂಭ್ರಮಿಸಿದ್ದಾರೆ.

ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಉತ್ತಮ ಆಟ ಪ್ರದರ್ಶನ ನೀಡಿದ ಆರ್​ಸಿಬಿ ಕೊನೆಯಲ್ಲಿ ಡಲ್ ಹೊಡೆಯಿತು. ಆರ್​ಸಿಬಿ ಪರ ವಿಲ್ ಜಾಕ್ಸ್ 29 ಬಾಲ್​ಗಳಿಗೆ 41, ರಜತ್ ಪಟಿದಾರ್ 32 ಬಾಲ್​ಗೆ 52 ಹಾಗೂ ಗ್ರೀನ್ 24 ಬಾಲ್​ಗೆ 32 ರನ್ ಕಲೆ ಹಾಕಿ ತಂಡಕ್ಕೆ ಆಸರೆ ಆದರು. ಅಂತಿಮವಾಗಿ, ಆರ್​ಸಿಬಿ 9 ವಿಕೆಟ್ ನಷ್ಟಕ್ಕೆ 187 ರನ್​ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನು ಹತ್ತಿದ ಡೆಲ್ಲಿ ಆರಂಭದಲ್ಲೇ ಮುಗ್ಗರಿಸಿತು. ಅಕ್ಸರ್ ಪಟೇಲ್ ಅವರು ಮಾತ್ರ (57 ರನ್) ಡೆಲ್ಲಿ ಪರ ಆಸರೆ ಆದರು. ಯಶ್ ದಯಾಳ್ ಅವರು 20ನೇ ಓವರ್​ನಲ್ಲಿ ಕುಲ್ದೀಪ್ ಯಾದವ್​ನ ಬೋಲ್ಡ್ ಮಾಡಿದರು. ಈ ವೇಳೆ ಸಂಭ್ರಮ ಮುಗಿಲುಮುಟ್ಟಿತ್ತು.

ಅನುಷ್ಕಾ ಶರ್ಮಾ ಅವರು ತಮ್ಮ ಚೇರ್ ಮೇಲೆ ಕುಳಿತಿದ್ದರು. ಕೊನೆಯ ವಿಕೆಟ್ ಬೀಳುತ್ತಿದ್ದಂತೆ ಅವರು ಎದ್ದು ಕೈ ಮುಗಿದಿದ್ದಾರೆ. ಈ ವಿಡಿಯೋನ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ‘ಅನುಷ್ಕಾ ಶರ್ಮಾ ಅವರ ಸೆಲೆಬ್ರೇಷನ್ ಬೇರೆಯದೇ ಲೆವೆಲ್’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಆರ್​ಸಿಬಿ ಸತತ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ ಅನ್ನೋದು ವಿಶೇಷ. ಸದ್ಯ 12 ಅಂಕ ಗಳಿಸಿ ಆರ್​ಸಿಬಿ ಐದನ್ನೇ ಸ್ಥಾನಕ್ಕೆ ಬಂದಿದೆ. ಪ್ಲೇಆಫ್​ಗೆ ಏರಬೇಕು ಎನ್ನುವ ಕನಸು ಇನ್ನೂ ಜೀವಂತವಾಗಿದೆ.

ಇದನ್ನೂ ಓದಿ: ಆರ್​ಸಿಬಿ ಆಟಗಾರರ ಜೊತೆ ಅನುಷ್ಕಾ ಶರ್ಮಾ ಬರ್ತ್​ಡೇ; ಹೇಗಿತ್ತು ನೋಡಿ ಸೆಲೆಬ್ರೇಷನ್

ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಸಿನಿಮಾಗಳಿಂದ ದೂರವಾಗಿದ್ದಾರೆ. ಇತ್ತೀಚೆಗೆ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಆರೈಕೆಯ ಕಾರಣಕ್ಕೆ ಅವರು ಐಪಿಲ್ ಪಂದ್ಯ ವೀಕ್ಷಿಸೋಕೆ ಬರುತ್ತಿರಲಿಲ್ಲ. ಇತ್ತೀಚೆಗೆ ಅವರು ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.