ಐಶ್ವರ್ಯಾ ರೈಯಿಂದ ಸಲ್ಮಾನ್ ಖಾನ್​ವರೆಗೆ; ಜಾಹೀರಾತುಗಳಿಂದ ಬಣ್ಣದ ಬದುಕು ಆರಂಭಿಸಿದವರು..

ಈ ಪಟ್ಟಿಯಲ್ಲಿ ಬರುವ ಮೊದಲ ಹೆಸರು ಸಲ್ಮಾನ್ ಖಾನ್ ಅವರದ್ದು. ಸಲ್ಮಾನ್ 1983ರಲ್ಲಿ ‘ಕ್ಯಾಂಪಾ ಕೋಲಾ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಜಾಕಿ ಶ್ರಾಫ್ ಪತ್ನಿ ಆಯೇಶಾ ಶ್ರಾಫ್ ಕೂಡ ಜೊತೆಗಿದ್ದರು. ಇದಾದ ನಂತರ 1988ರಲ್ಲಿ ‘ಬಿವಿ ಹೋ ತೋ ಐಸಿ' ಚಿತ್ರದ ಮೂಲಕ ಸಲ್ಮಾನ್ ಬಾಲಿವುಡ್ ಜಗತ್ತಿಗೆ ಕಾಲಿಟ್ಟರು.

ಐಶ್ವರ್ಯಾ ರೈಯಿಂದ ಸಲ್ಮಾನ್ ಖಾನ್​ವರೆಗೆ; ಜಾಹೀರಾತುಗಳಿಂದ ಬಣ್ಣದ ಬದುಕು ಆರಂಭಿಸಿದವರು..
ಐಶ್ವರ್ಯಾ ರೈಯಿಂದ ಸಲ್ಮಾನ್ ಖಾನ್​ವರೆಗೆ; ಜಾಹೀರಾತುಗಳಿಂದ ಬಣ್ಣದ ಬದುಕು ಆರಂಭಿಸಿದವರು..
Edited By:

Updated on: May 19, 2024 | 7:00 AM

ಜಾಹೀರಾತುಗಳು ಕೆಲವೊಮ್ಮೆ ಸಖತ್ ಜನಪ್ರಿಯತೆ ಪಡೆಯುತ್ತದೆ. ಇದರಿಂದ ಸಿನಿಮಾ ಆಫರ್ ಸಿಕ್ಕ ಸಾಕಷ್ಟು ಉದಾಹರಣೆ ಇದೆ. ಅದೇ ರೀತಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ನಂತರ ನಟಿಸಲು ಪ್ರಾರಂಭಿಸಿದ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಈ ಪಟ್ಟಿಯಲ್ಲಿ ಸಲ್ಮಾನ್ ಖಾನ್‌ನಿಂದ ಐಶ್ವರ್ಯಾ ರೈ (Aishwarya Rai) ಅವರ ಹೆಸರುಗಳಿವೆ. ಜಾಹೀರಾತು ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಈ 5 ತಾರೆಯರ ಹೆಸರುಗಳು ಈಗ ಬಾಲಿವುಡ್​ನಲ್ಲಿ ಮುಂಚೂಣಿಯಲ್ಲಿದೆ.

ಸಲ್ಮಾನ್ ಖಾನ್

ಈ ಪಟ್ಟಿಯಲ್ಲಿ ಬರುವ ಮೊದಲ ಹೆಸರು ಸಲ್ಮಾನ್ ಖಾನ್ ಅವರದ್ದು. ಸಲ್ಮಾನ್ 1983ರಲ್ಲಿ ‘ಕ್ಯಾಂಪಾ ಕೋಲಾ’ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಜಾಕಿ ಶ್ರಾಫ್ ಪತ್ನಿ ಆಯೇಶಾ ಶ್ರಾಫ್ ಕೂಡ ಜೊತೆಗಿದ್ದರು. ಇದಾದ ನಂತರ 1988ರಲ್ಲಿ ‘ಬಿವಿ ಹೋ ತೋ ಐಸಿ’ ಚಿತ್ರದ ಮೂಲಕ ಸಲ್ಮಾನ್ ಬಾಲಿವುಡ್ ಜಗತ್ತಿಗೆ ಕಾಲಿಟ್ಟರು. ಈ ಚಿತ್ರದ ಒಂದು ವರ್ಷದ ನಂತರ, ಅವರಿಗೆ ಮೈನೆ ಪ್ಯಾರ್ ಕಿಯಾ’ ಆಫರ್ ಬಂತು. ಅದರಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು.

ಶಾಹಿದ್ ಕಪೂರ್

90ರ ದಶಕದಲ್ಲಿ ಶಾಹಿದ್ ಕಪೂರ್ ಮತ್ತು ‘ವಾಂಟೆಡ್’ ಖ್ಯಾತಿಯ ಆಯೇಶಾ ಟಾಕಿಯಾ ಕಾಂಪ್ಲ್ಯಾನ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಶಾಹಿದ್ ಕಪೂರ್ ಈ ಜಾಹೀರಾತಿನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2003 ರಲ್ಲಿ ರೊಮ್ಯಾಂಟಿಕ್ ಕಾಮಿಡಿ ‘ಇಷ್ಕ್ ವಿಷ್ಕ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ‘ಟಾರ್ಜನ್: ದಿ ವಂಡರ್ ಕಾರ್’ ಆಯೇಶಾ ಟಾಕಿಯಾ ಅವರ ಮೊದಲ ಚಿತ್ರ. ಈ ಚಿತ್ರ ಬಂದಿದ್ದು 2004ರಲ್ಲಿ.

ಐಶ್ವರ್ಯಾ ರೈ

80ರ ದಶಕದಲ್ಲಿ ಐಶ್ವರ್ಯಾ ರೈ ಪೆನ್ಸಿಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ತಂಪು ಪಾನೀಯ ಜಾಹೀರಾತಿನಲ್ಲೂ ಆಮಿರ್ ಖಾನ್ ಜೊತೆ ಕೆಲಸ ಮಾಡಿದ್ದರು. ಐಶ್ವರ್ಯಾ ಅಭಿನಯದ ಮೊದಲ ಚಿತ್ರ ‘ಇರುವರ್’. ಈ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದರು.

ದೀಪಿಕಾ ಪಡುಕೋಣೆ

2004ರಲ್ಲಿ ದೀಪಿಕಾ ಟೂತ್​ಪೇಸ್ಟ್ ಬ್ರಾಂಡ್​ನ ಜಾಹೀರಾತಲ್ಲಿ ಕೆಲಸ ಮಾಡಿದ್ದರು. ಈ ಜಾಹಿರಾತು ಅವರ ಮೊದಲ ಚಿತ್ರ ಪಡೆಯಲು ನೆರವಾಯಿತು ಎನ್ನಲಾಗಿದೆ. ಕನ್ನಡದಲ್ಲಿ ‘ಐಶ್ವರ್ಯಾ’ ಸಿನಿಮಾ ಮಾಡಿದ ಅವರು 2007ರಲ್ಲಿ ಶಾರುಖ್ ಖಾನ್ ಅವರ ‘ಓಂ ಶಾಂತಿ ಓಂ’ ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ: ರೆಕಾರ್ಡ್ ಮಾಡುತ್ತಿದ್ದಾಗ ಸಿಟ್ಟಲ್ಲಿ ಕ್ಯಾಮೆರಾಗೆ ಪಂಚ್ ಕೊಟ್ಟ ದೀಪಿಕಾ ಪಡುಕೋಣೆ

ಅನುಷ್ಕಾ ಶರ್ಮಾ

2004 ರಲ್ಲಿ ಅನುಷ್ಕಾ ಶರ್ಮಾ ಚರ್ಮದ ಆರೈಕೆ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ನಾಲ್ಕು ವರ್ಷಗಳ ನಂತರ ಅವರು ‘ರಬ್ ನೆ ಬನಾ ದಿ ಜೋಡಿ’ ಚಿತ್ರದ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದರು. ದೀಪಿಕಾರಂತೆ ಅನುಷ್ಕಾ ಕೂಡ ತನ್ನ ಮೊದಲ ಸಿನಿಮಾದಲ್ಲಿ ಶಾರುಖ್ ಜೊತೆ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us