ಬಾಲಿವುಡ್ ನಟರಾದ ಅಜಯ್ ದೇವಗನ್ (Ajay Devgn) ಹಾಗೂ ಅಕ್ಷಯ್ ಕುಮಾರ್ ಅವರು ದಕ್ಷಿಣ ಭಾರತದ ಸಿನಿಮಾಗಳನ್ನು ರಿಮೇಕ್ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಇದರಲ್ಲಿ ಕೆಲವೇ ಕೆಲವು ಗೆದ್ದಿವೆ. ಹಲವು ಸಿನಿಮಾಗಳು ಸೋತಿವೆ. ಮಲಯಾಲಂನ ‘ದೃಶ್ಯಂ 2’ ಚಿತ್ರವನ್ನು (Drishyam 2) ರಿಮೇಕ್ ಮಾಡಿ ಅಜಯ್ ದೇವಗನ್ ಗೆದ್ದಿದ್ದರು. ಇದೇ ನಂಬಿಕೆಮೇರೆಗೆ ಅಜಯ್ ದೇವಗನ್ ಅವರು ‘ಕೈದಿ’ ಚಿತ್ರವನ್ನು ರಿಮೇಕ್ ಮಾಡಿದ್ದಾರೆ. ‘ಭೋಲಾ’ ಹೆಸರಲ್ಲಿ ಈ ಚಿತ್ರವನ್ನು ತೆರೆಮೇಲೆ ತಂದಿದ್ದಾರೆ ಅಜಯ್ ದೇವಗನ್. ಆದರೆ, ಇದರಿಂದ ಅವರು ಕೈ ಸುಟ್ಟುಕೊಂಡಿದ್ದಾರೆ. ಈ ಸಿನಿಮಾ ಸೋಲುವ ಸೂಚನೆ ಸಿಕ್ಕಿದೆ.
ಲೋಕೇಶ್ ಕನಗರಾಜ್ ನಿರ್ದೇಶನದ, ಕಾರ್ತಿ ನಟನೆಯ ತಮಿಳಿನ ‘ಕೈದಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ಅಜಯ್ ದೇವಗನ್ ರಿಮೇಕ್ ಮಾಡಿದರು. ಈ ಚಿತ್ರದ ನಿರ್ದೇಶನ, ನಿರ್ಮಾಣದ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡರು. ಈ ಸಿನಿಮಾ ಮೊದಲ ದಿನ (ಮಾರ್ಚ್ 30) 11.20 ಕೋಟಿ ರೂಪಾಯಿ ಹಾಗೂ ಎರಡನೇ ದಿನ (ಮಾರ್ಚ್ 31) 7.40 ಕೋಟಿ ರೂಪಾಯಿ ಮಾತ್ರ ಕಮಾಯಿ ಮಾಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 18.60 ಕೋಟಿ ರೂಪಾಯಿ ಆಗಿದೆ.
ಶನಿವಾರ (ಏಪ್ರಿಲ್ 1) ಕೂಡ ‘ಭೋಲಾ’ ಚಿತ್ರಕ್ಕೆ ಹೇಳಿಕೊಳ್ಳುವಂತ ಬುಕಿಂಗ್ ಆಗುತ್ತಿಲ್ಲ. ಒಂದೊಮ್ಮೆ ಇಂದು ಹಾಗೂ ನಾಳೆ (ಏಪ್ರಿಲ್ 2) ಚಿತ್ರಕ್ಕೆ ಉತ್ತಮ ಗಳಿಕೆ ಆಗದೇ ಇದ್ದರೆ ನಿರ್ಮಾಪಕರ ಪರಿಸ್ಥಿತಿ ಹೀನಾಯ ಮಟ್ಟ ತಲುಪಲಿದೆ. ‘ದೃಶ್ಯಂ 2’ ಚಿತ್ರ 200+ ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೇ ಹುಮ್ಮಸ್ಸಿನಲ್ಲಿ ಅಜಯ್ ದೇವಗನ್ ದಕ್ಷಿಣ ಭಾರತದ ಸಿನಿಮಾದ ರಿಮೇಕ್ ಮೊರೆ ಹೋಗಿದ್ದರು. ಆದರೆ, ಸಿನಿಮಾದ ಪರಿಸ್ಥಿತಿ ಹೀನಾಯ ಮಟ್ಟ ತಲುಪುತ್ತಿದೆ.
#Bholaa slips on Day 2… The decline was on the cards, since Thu was #RamNavmi holiday, while Fri was a working day… Thu 11.20 cr, Fri 7.40 cr. Total: ₹ 18.60 cr. #India biz.#Bholaa needs to cover lost ground on Sat and Sun… Biz on Sat should witness an upturn, with bigger… pic.twitter.com/8i9yR2fbQc
— taran adarsh (@taran_adarsh) April 1, 2023
ಇದನ್ನೂ ಓದಿ: Bholaa Collection: ಅಜಯ್ ದೇವಗನ್ ನಟನೆಯ ‘ಭೋಲಾ’ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?
‘ಭೋಲಾ’ ಚಿತ್ರಕ್ಕೆ ಭರ್ಜರಿ ಸ್ಪರ್ಧೆ ಇದೆ. ತೆಲುಗಿನಲ್ಲಿ ನಾನಿ ನಟನೆಯ ‘ದಸರಾ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ತೆಲುಗು ಹಾಗೂ ಆಂಧ್ರದಲ್ಲಿ ‘ಭೋಲಾ’ ಚಿತ್ರಕ್ಕೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಕರ್ನಾಟಕದಲ್ಲಿ ಡಾಲಿ ನಟನೆಯ ‘ಹೊಯ್ಸಳ’ ಸಿನಿಮಾ ಕೂಡ ಕಾಂಪಿಟೇಷನ್ ನೀಡುತ್ತಿದೆ.
ಅಜಯ್ ದೇವಗನ್ ಜೊತೆ ಭೂಷಣ್ ಕುಮಾರ್, ಕೃಷನ್ ಕುಮಾರ್ ಮೊದಲಾದವರು ‘ಭೋಲಾ’ ಚಿತ್ರವನ್ನು ನಿರ್ಮಾಣ ಮಾಡಲು ಕೈ ಜೋಡಿಸಿದ್ದಾರೆ. ಟಬು, ಸಂಜಯ್ ಮಿಶ್ರಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ