ಅಜಿತ್ ಕುಮಾರ್ ಚಿತ್ರಕ್ಕೆ ಹಾಲಿವುಡ್ ಸಿನಿಮಾ ಟೈಟಲ್; ‘ಪುಷ್ಪ’ ನಿರ್ಮಾಪಕನಿಂದ ಬಂಡವಾಳ

‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಪೋಸ್ಟರ್ ಹಿಂಭಾಗ ಸಂಪೂರ್ಣವಾಗಿ ಕೆಂಪು ಬಣ್ಣದಿಂದ ಕೂಡಿದೆ. ಈ ಮೂಲಕ ಚಿತ್ರ ಭರ್ಜರಿ ಆ್ಯಕ್ಷನ್​ ಹಾಗೂ ವೈಲೆನ್ಸ್​ನಿಂದ ಕೂಡಿರಲಿದೆ ಎಂಬುದು ಗೊತ್ತಾಗಿದೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಭಿನಂದನ್ ರಾಮಾನುಜಂ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ಅಜಿತ್ ಕುಮಾರ್ ಚಿತ್ರಕ್ಕೆ ಹಾಲಿವುಡ್ ಸಿನಿಮಾ ಟೈಟಲ್; ‘ಪುಷ್ಪ’ ನಿರ್ಮಾಪಕನಿಂದ ಬಂಡವಾಳ
ಅಜಿತ್

Updated on: Mar 15, 2024 | 8:48 AM

ಅಜಿತ್ ಕುಮಾರ್ (Ajith Kumar) ನಟನೆಯ ಹೊಸ ಸಿನಿಮಾ ಘೋಷಣೆ ಆಗಿದೆ. ಇದು ಅವರ 63ನೇ ಸಿನಿಮಾ ಆಗಿದ್ದು, ಈ ಚಿತ್ರಕ್ಕೆ ‘ಗುಡ್ ಬ್ಯಾಡ್ ಅಗ್ಲಿ’ ಎಂದು ಶೀರ್ಷಿಕೆ ಇಡಲಾಗಿದೆ. 1966ರಲ್ಲಿ ಹಾಲಿವುಡ್​ನಲ್ಲಿ ‘ದಿ ಗುಡ್, ದಿ ಬ್ಯಾಡ್ ಆ್ಯಂಡ್ ದಿ ಅಗ್ಲಿ’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಟೈಟಲ್​ನ ಅಜಿತ್ ಸಿನಿಮಾ ನೆನಪಿಸಿದೆ. ಸಿನಿಮಾದ ಟೈಟಲ್ ನೋಡಿದ ಬಳಿಕ ಅಜಿತ್ ಕುಮಾರ್ ಪಾತ್ರಕ್ಕೆ ಮೂರು ಶೇಡ್​ಗಳು ಇರಲಿವೆಯೇ ಅಥವಾ ಗುಡ್, ಬ್ಯಾಡ್, ಅಗ್ಲಿ ಎಂಬ ಮೂರು ಪಾತ್ರಗಳು ಸಿನಿಮಾದಲ್ಲಿ ಬರಲಿವೆಯೇ ಎನ್ನುವ ಪ್ರಶ್ನೆ ಮೂಡಿದೆ.

ತೆಲುಗಿನ ಮೈತ್ರಿ ಮೂವೀ ಮೇಕರ್ಸ್ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಅವರು ಅಜಿತ್ ಕುಮಾರ್ ಜೊತೆ ಕೈ ಜೋಡಿಸಿರುವುದು ಇದೇ ಮೊದಲು. ಈಗಾಗಲೇ ಮೈತ್ರಿ ಮೂವೀ ಮೇಕರ್ಸ್ ‘ಪುಷ್ಪ’ ಸಿನಿಮಾ ನಿರ್ಮಾಣ ಮಾಡಿ ಸಾಕಷ್ಟು ಲಾಭ ಕಂಡಿದೆ. ಸದ್ಯ ‘ಪುಷ್ಪ 2’ ಮೊದಲಾದ ಚಿತ್ರದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅಜಿತ್ ಕುಮಾರ್ ಹೊಸ ಸಿನಿಮಾ ಕೂಡ ಘೋಷಣೆ ಆಗಿದೆ. ಈ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ.

ಮೈತ್ರಿ ಮೂವೀ ಮೇಕರ್ಸ್

ಈ ಸಿನಿಮಾ ಪೋಸ್ಟರ್ ಹಿಂಭಾಗ ಸಂಪೂರ್ಣವಾಗಿ ಕೆಂಪು ಬಣ್ಣದಿಂದ ಕೂಡಿದೆ. ಈ ಮೂಲಕ ಚಿತ್ರ ಭರ್ಜರಿ ಆ್ಯಕ್ಷನ್​ ಹಾಗೂ ವೈಲೆನ್ಸ್​ನಿಂದ ಕೂಡಿರಲಿದೆ ಎಂಬುದು ಗೊತ್ತಾಗಿದೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಭಿನಂದನ್ ರಾಮಾನುಜಂ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಟ ಅಜಿತ್ ಕುಮಾರ್ ಸಾಧನೆ ಒಂದೆರಡಲ್ಲ; ಇವರು ವಿಮಾನ ಕೂಡ ಹಾರಿಸಬಲ್ಲರು

ಅಜಿತ್ ಕುಮಾರ್ ಅವರು ಬೇರೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರಿಗೆ ಅನಾರೋಗ್ಯ ಕಾಡಿದ್ದು ಇದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಚಿತ್ರದ ಶೂಟಿಂಗ್​ ಜೂನ್​ನಲ್ಲಿ ಆರಂಭ ಆಗಲಿದ್ದು, 2025ರ ಪೊಂಗಲ್​ಗೆ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us