ನಟ ಅಜಿತ್ ಕುಮಾರ್ ಸಾಧನೆ ಒಂದೆರಡಲ್ಲ; ಇವರು ವಿಮಾನ ಕೂಡ ಹಾರಿಸಬಲ್ಲರು

ಅಜಿತ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅಜಿತ್ ಕುಮಾರ್ ತಂದೆ ಪಿ. ಸುಬ್ರಮಣ್ಯಂ ಕೇರಳ ಮೂಲದವರು. 1971ರ ಮೇ 1ರಂದು ಅಜಿತ್ ಕುಮಾರ್ ಜನಿಸಿದರು. ಅಜಿತ್​ಗೆ ಅನಿಲ್ ಕುಮಾರ್ ಮತ್ತು ಅನುಪ್ ಕುಮಾರ್ ಹೆಸರಿನ ಸಹೋದರು ಇದ್ದಾರೆ. ಅಜಿತ್ ಕುಮಾರ್ ಅವರ ತಂದೆ ಪಿ. ಸುಬ್ರಮಣ್ಯಂ ಕಳೆದ ವರ್ಷ ನಿಧನ ಹೊಂದಿದರು. ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ನಟ ಅಜಿತ್ ಕುಮಾರ್ ಸಾಧನೆ ಒಂದೆರಡಲ್ಲ; ಇವರು ವಿಮಾನ ಕೂಡ ಹಾರಿಸಬಲ್ಲರು
ಅಜಿತ್ ಕುಮಾರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 10, 2024 | 6:45 AM

ತಮಿಳು ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಅಜಿತ್ ಕುಮಾರ್ (Ajith Kumar) ಅವರಿಗೂ ಸ್ಥಾನ ಇದೆ. ಅವರಿಗೆ ಅಪಾರ ಅಭಿಮಾನಿ ಬಳಗ ಇದೆ. ಅನಾರೋಗ್ಯ ಕಾರಣದಿಂದ ಅಜಿತ್ ಕುಮಾರ್ ಅವರು ಆಸ್ಪತ್ರೆ ಸೇರಿದ್ದಾರೆ. ಅವರ ಮಿದುಳಿನಲ್ಲಿ ಹುಣ್ಣಾಗಿದೆ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಆದರೆ, ಆ ರೀತಿ ಇಲ್ಲ ಎಂದು ಅವರ ವಕ್ತಾರರು ತಿಳಿಸಿದ್ದಾರೆ. ಅಜಿತ್ ಅವರು ಅನೇಕ ವಿಚಾರಗಳಲ್ಲಿ ಎಕ್ಸ್​ಪರ್ಟ್ ಇದ್ದಾರೆ ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ವಿವರ.

ಅಜಿತ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅಜಿತ್ ಕುಮಾರ್ ತಂದೆ ಪಿ. ಸುಬ್ರಮಣ್ಯಂ ಕೇರಳ ಮೂಲದವರು. 1971ರ ಮೇ 1ರಂದು ಅಜಿತ್ ಕುಮಾರ್ ಜನಿಸಿದರು. ಅಜಿತ್​ಗೆ ಅನಿಲ್ ಕುಮಾರ್ ಮತ್ತು ಅನುಪ್ ಕುಮಾರ್ ಹೆಸರಿನ ಸಹೋದರು ಇದ್ದಾರೆ. ಅಜಿತ್ ಕುಮಾರ್ ಅವರ ತಂದೆ ಪಿ. ಸುಬ್ರಮಣ್ಯಂ ಕಳೆದ ವರ್ಷ ನಿಧನ ಹೊಂದಿದರು. ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅಜಿತ್ ಅವರಿಗೂ ಅನಾರೋಗ್ಯ ಕಾಡಿರೋದು ಫ್ಯಾನ್ಸ್ ಆತಂಕಕ್ಕೆ ಕಾರಣವಾಗಿದೆ.

ಹಲವು ವಿಚಾರಗಳಲ್ಲಿ ಎಕ್ಸ್​ಪರ್ಟ್​

ಅಜಿತ್ ಅವರಿಗೆ ಶಿಕ್ಷಣದ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅವರು 10ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದಿದ್ದಾರೆ. ನಂತರ ಅವರು ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದರು ಅನ್ನೋದು ವಿಶೇಷ. ಅಜಿತ್ ಕುಮಾರ್ ಓರ್ವ ಪ್ರೊಫೆಷನಲ್ ರೇಸರ್. 2004ರ ಬ್ರಿಟಿಷ್ ಫಾರ್ಮುಲಾ 3 ಹಾಗೂ ಫಾರ್ಮುಲಾ 2 ರೇಸ್​ನಲ್ಲಿ ಅವರು ಸ್ಪರ್ಧಿಸಿದರು. ಅವರು ವೃತ್ತಿಪರ ಶೂಟರ್. ತಮಿಳುನಾಡಿನಲ್ಲಿ ನಡೆದ ಚಾಂಪಿಯನ್​ಶಿಪ್ ಒಂದರಲ್ಲಿ ಅಜಿತ್ ಅವರು 4 ಚಿನ್ನದ ಪದಕ ಗೆದ್ದು ಬೀಗಿದ್ದರು.

ಪೈಲಟ್ ಹೌದು

ಹೀರೋಗಳು ಬೈಕ್ ಹಾಗೂ ಕಾರು ಓಡಿಸೋದರಲ್ಲಿ ಎಕ್ಸ್​ಪರ್ಟ್ ಆಗಿರುತ್ತಾರೆ. ಅಜಿತ್ ಅವರು ವಿಮಾನ ಕೂಡ ಓಡಿಸಬಲ್ಲರು! ಅವರು ವಿಮಾನ ಓಡಿಸುವ ತರಬೇತಿ ಹೊಂದಿದ್ದಾರೆ. ಬೈಕ್ ಬಗ್ಗೆ ಅಜಿತ್​ಗೆ ಸಖತ್ ಕ್ರೇಜ್ ಇದೆ. ಸಿನಿಮಾ ಕೆಲಸಗಳ ಮಧ್ಯೆ ಬ್ರೇಕ್ ಸಿಕ್ಕಾಗ ಈಶಾನ್ಯ ಭಾರತ ಹಾಗೂ ವಿದೇಶಗಳಲ್ಲಿ ಬೈಕ್​ನಲ್ಲಿ ಸುತ್ತಾಡುತ್ತಾರೆ. ಇದರ ಫೋಟೋಗಳು ಆಗಾಗ ವೈರಲ್ ಆಗಿದ್ದಿದೆ.

ಅಜಿತ್ ಕುಮಾರ್ ಪತ್ನಿ ಶಾಲಿನಿ ದಕ್ಷಿಣ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಬ್ಬರ ಮಧ್ಯೆ ಸೆಟ್​ನಲ್ಲಿ ಪ್ರೀತಿ ಮೂಡಿತ್ತು. ಇವರ ದಾಂಪತ್ಯಕ್ಕೆ ಎರಡು ಶತಕಗಳು ಪೂರ್ಣಗೊಂಡಿವೆ. ಈ ದಂಪತಿಗೆ ಇಬ್ಬರು ಮಕ್ಕಳು. ಅಜಿತ್ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದುಕೊಂಡಿದ್ದಾರೆ. ಉಳಿದ ಸ್ಟಾರ್​ಗಳಂತೆ ಅವರು ಸೋಶಿಯಲ್ ಮೀಡಿಯಾ ಬಳಸುವುದಿಲ್ಲ.

ಇದನ್ನೂ ಓದಿ: ಅಜಿತ್ ಕುಮಾರ್ ಹೊಸ ಸಾಧನೆ; ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ನಾಲ್ಕು ಚಿನ್ನ, ಎರಡು ಕಂಚು ಗೆದ್ದ ನಟ

ಅಜಿತ್ ಅವರ ಸಿನಿಮಾಗಳು ಒಳ್ಳೆಯ ಬಿಸ್ನೆಸ್ ಮಾಡುತ್ತವೆ. ಅವರು ಸಿನಿಮಾಗಾಗಿ ವಿಶೇಷ ಸಂದರ್ಶನ ನೀಡುವುದಿಲ್ಲ. ತಮ್ಮ ಹೇಳಿಕೆಗಳನ್ನು ಬೇರೆ ರೀತಿ ಅರ್ಥೈಸಲಾಗುತ್ತದೆ ಎನ್ನುವ ಭಯ ಅವರಿಗೆ ಇದೆ. 2022ರಲ್ಲಿ ರಿಲೀಸ್ ಆದ ‘ತುನಿವು’ ಅವರ ನಟನೆಯ ಕೊನೆಯ ಸಿನಿಮಾ. ಸದ್ಯ ಅಜಿತ್ ಕುಮಾರ್ ಅವರು ‘ವಿದಾ ಮುಯರ್ಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿದೆ. ಈ ಮಧ್ಯೆ ಅವರಿಗೆ ಅನಾರೋಗ್ಯ ಕಾಡಿರುವುದು ಅಭಿಮಾನಿಗಳ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ