AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನಿಕಾಂತ್, ಅಜಿತ್ ಕುಮಾರ್ ಜೊತೆ ಕೆಲಸ ಮಾಡಲು ರೆಡಿ ಆದ ವಿಜಯ್ ಫೇವರಿಟ್ ಡೈರೆಕ್ಟರ್ ಅಟ್ಲಿ

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದಿಂದ ಅಟ್ಲಿ ಅವರು ದೊಡ್ಡ ಗೆಲುವು ಕಂಡರು. ಅವರ ಹೆಸರು ಬಾಲಿವುಡ್​ನಲ್ಲೂ ಚಾಲ್ತಿಗೆ ಬಂತು. ರಜನಿಕಾಂತ್​ ಮತ್ತು ಅಜಿತ್​ ಕುಮಾರ್​ ಸಿನಿಮಾಗೆ ನಿರ್ದೇಶನ ಮಾಡಲು ಅಟ್ಲಿ ಆಸಕ್ತಿ ತೋರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ರಜನಿಕಾಂತ್, ಅಜಿತ್ ಕುಮಾರ್ ಜೊತೆ ಕೆಲಸ ಮಾಡಲು ರೆಡಿ ಆದ ವಿಜಯ್ ಫೇವರಿಟ್ ಡೈರೆಕ್ಟರ್ ಅಟ್ಲಿ
ರಜನಿಕಾಂತ್​, ಅಜಿತ್​, ಅಟ್ಲಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 16, 2023 | 3:16 PM

Share

ಅಟ್ಲಿ ಅವರನ್ನು ದಳಪತಿ ವಿಜಯ್ ಫ್ಯಾನ್ಸ್ ಸಾಕಷ್ಟು ಇಷ್ಟಪಡುತ್ತಾರೆ. ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ಅವರು ವಿಜಯ್ ಜೊತೆ ಕೆಲಸ ಮಾಡಿದ್ದರು. ಆ ಬಳಿಕ ಅಟ್ಲಿ ಬಾಲಿವುಡ್​ಗೆ ಹಾರಿದರು. ರಜನಿಕಾಂತ್ (Rajinikanth) ಹಾಗೂ ವಿಜಯ್ ಅಭಿಮಾನಿಗಳ ಮಧ್ಯೆ ಮೊದಲಿನಿಂದಲೂ ವೈಮನಸ್ಸು ಇದೆ. ಈ ಕಾರಣದಿಂದಲೇ ಅಟ್ಲಿ ಅವರು ರಜನಿಕಾಂತ್ ಜೊತೆ ಕೆಲಸ ಮಾಡುವುದಿಲ್ಲ ಎಂದು ಹೇಳಲಾಗಿತ್ತು. ಈ ಪ್ರಶ್ನೆಗೆ ಅಟ್ಲಿ (Atlee) ಉತ್ತರಿಸಿದ್ದಾರೆ. ಈ ಮೊದಲು ರಜನಿ ಜೊತೆ ಸಿನಿಮಾ ಮಾಡುವ ಪ್ರಯತ್ನಗಳು ನಡೆದಿದ್ದವು. ಆದರೆ, ಅದು ಯಶಸ್ಸು ಕಂಡಿರಲಿಲ್ಲ.

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದಿಂದ ಅಟ್ಲಿ ಅವರು ದೊಡ್ಡ ಗೆಲುವು ಕಂಡರು. ಅವರ ಹೆಸರು ಬಾಲಿವುಡ್​ನಲ್ಲೂ ಚಾಲ್ತಿಗೆ ಬಂತು. ಈ ಚಿತ್ರ ರಿಲೀಸ್ ಆದ ಬಳಿಕ ಅಟ್ಲಿ ಹಲವು ಕಡೆಗಳಲ್ಲಿ ಸಂದರ್ಶನ ನೀಡಿದ್ದರು. ಆ ಬಳಿಕ ಅವರು ಮಾಧ್ಯಮದವರ ಕೈಗೆ ಸಿಕ್ಕಿರಲಿಲ್ಲ. ಈಗ ಅವರು ಮಾತಿಗೆ ಸಿಕ್ಕಿದ್ದಾರೆ. ಮಾಧ್ಯಮದವರ ಜೊತೆ ಅವರು ಹಲವು ವಿಚಾರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ದೃಶ್ಯಗಳನ್ನು ಕದಿಯಲಾಗಿದೆ’ ಎಂದವರಿಗೆ ಸರಿಯಾಗಿ ತಿರುಗೇಟು ನೀಡಿದ ನಿರ್ದೇಶಕ ಅಟ್ಲಿ

‘ನಾನು ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ನಾನು ಅವರಿಂದ ಹಲವು ವಿಚಾರ ಕಲಿತಿದ್ದೇನೆ. ಎಂದಿರನ್ ಸಿನಿಮಾ ಸಂದರ್ಭದಲ್ಲಿ ಅವರ ಜೊತೆ ಹಲವು ದಿನ ಕೆಲಸ ಮಾಡಿದ್ದೆ. ಬಾಷಾಗಿಂತ ಒಳ್ಳೆಯ ಸಿನಿಮಾ ನೀಡಬೇಕು ಎಂಬುದು ನನ್ನ ಉದ್ದೇಶ. ಆದರೆ, ಅವರ ಜೊತೆ ಕೆಲಸ ಮಾಡೋಕೆ ಇನ್ನೂ ಅವಕಾಶ ಸಿಕ್ಕಿಲ್ಲ. ರಜನಿಕಾಂತ್ ಕೂಡ ಕಥೆ ಮಾಡುವಂತೆ ಹಲವು ಬಾರಿ ಹೇಳಿದ್ದಾರೆ’ ಎಂದಿದ್ದಾರೆ ಅಟ್ಲಿ. ಈ ಮೂಲಕ ಶೀಘ್ರವೇ ರಜನಿ ಜೊತೆ ಕೆಲಸ ಮಾಡುವ ಸೂಚನೆಯನ್ನು ಅಟ್ಲಿ ನೀಡಿದ್ದಾರೆ.

ಇದನ್ನೂ ಓದಿ: ಅಟ್ಲಿ ಮತ್ತು ಪ್ರಿಯಾ ದಂಪತಿ ಫೋಟೋಗಳು ವೈರಲ್​; ಆದರೆ ಕಮೆಂಟ್​ ಮಾಡುವಂತಿಲ್ಲ

ನಟ ಅಜಿತ್ ಕುಮಾರ್ ಜೊತೆ ಕೆಲಸ ಮಾಡುವ ಬಗ್ಗೆಯೂ ಅಟ್ಲಿ ಮಾತನಾಡಿದ್ದಾರೆ. ‘ಅಜಿತ್ ಅವರ ಜೊತೆ ಕೆಲಸ ಮಾಡಬೇಕು. ನಾನು ಸ್ಕ್ರಿಪ್ಟ್ ರೆಡಿ ಮಾಡಿಟ್ಟಿದ್ದೇನೆ. ‘ರಾಜ ರಾಣಿ’ ಶೂಟಿಂಗ್ ಸಂದರ್ಭದಲ್ಲಿ ಅಜಿತ್ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದೆ. ನಯನತಾರಾ ಅವರು ಅಜಿತ್​ರನ್ನು ಪರಿಚಯಿಸಿದ್ದರು. ಅವರು ಓಕೆ ಎಂದರೆ ನಾವು ಸಿನಿಮಾ ಮಾಡುತ್ತೇವೆ’ ಎಂದಿದ್ದಾರೆ ಅಟ್ಲಿ. ವಿಜಯ್ ಹಾಗೂ ಅಜಿತ್ ಅಭಿಮಾನಿಗಳ ಮಧ್ಯೆಯೂ ಆಗಾಗ ಫ್ಯಾನ್ಸ್ ವಾರ್ ಆಗುತ್ತಿರುತ್ತದೆ. ಅಟ್ಲಿ ಅವರು ಸದ್ಯ ‘ಜವಾನ್’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ವರುಣ್ ಧವನ್ ಜೊತೆ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಶಾರುಖ್ ಹಾಗೂ ಅಟ್ಲಿ ಮತ್ತೊಮ್ಮೆ ಒಂದಾಗುತ್ತಾರೆ ಎನ್ನುವ ಮಾತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?