ದಿನಕ್ಕೆ ಕೋಟಿ ಸಂಭಾವನೆ ಪಡೆವ ರಜನೀಕಾಂತ್ ಮೊದಲ ಸಿನಿಮಾಕ್ಕೆ ಎಷ್ಟು ಪಡೆದಿದ್ದರು?
Rajinikanth first remuneration: ಇಂದು ಸಿನಿಮಾ ಒಂದಕ್ಕೆ ನೂರಾರು ಕೋಟಿ ಸಂಭಾವನೆ ಪಡೆವ ರಜನೀಕಾಂತ್ ತಮ್ಮ ಮೊದಲ ಸಿನಿಮಾಕ್ಕೆ ಪಡೆದಿದ್ದ ಸಂಭಾವನೆ ಎಷ್ಟು?

ರಜನೀಕಾಂತ್ (Rajinikanth) ಭಾರತದ ಸೂಪರ್ ಸ್ಟಾರ್. ವಯಸ್ಸು 70 ದಾಟಿದ್ದರೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕೋಟ್ಯಂತರ ರೂಪಾಯಿ ಸಂಭಾವನೆಯನ್ನೂ ಪಡೆಯುತ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆವ ಭಾರತದ ಟಾಪ್ ನಟರಲ್ಲಿ ರಜನೀಕಾಂತಗ ಸಹ ಒಬ್ಬರು. ಇಂದು ಕೋಟ್ಯಂತರ ಸಂಭಾವನೆ ಪಡೆವ ರಜನೀಕಾಂತ್, ಮೊದಲ ಸಿನಿಮಾನಲ್ಲಿ ನಟಿಸಿದಾಗ ಎಷ್ಟು ಸಂಭಾವನೆ ನೀಡಲಾಗಿತ್ತು.
ರಜನೀಕಾಂತ್, ಪ್ರಮುಖ ಪಾತ್ರದಲ್ಲಿ ನಟಿಸಿದ ಮೊದಲ ಸಿನಿಮಾ 1975 ರಲ್ಲಿ ಬಿಡುಗಡೆ ಆದ ‘ಅಪೂರ್ವ ರಾಗಂಗಳ್’ ಆ ಸಿನಿಮಾದಲ್ಲಿ ಕಮಲ್ ಹಾಸನ್ ನಾಯಕ. ಬಾಲಚಂದರ್ ನಿರ್ದೇಶಕ. ಆ ಸಿನಿಮಾಕ್ಕೆ ರಜನೀಕಾಂತ್ ಗೆ ಎರಡು ಸಾವಿರ ರೂಪಾಯಿಗಳನ್ನು ನೀಡಲಾಗಿತ್ತಂತಂತೆ. ಆಗ ರಜನೀಕಾಂತ್ ಗೆ ನಿಗದಿಪಡಿಸಲಾಗಿದ್ದ ಸಂಭಾವನೆ ಅಷ್ಟಾಗಿತ್ತಂತೆ. ಈ ಬಗ್ಗೆ ನಟಿ ಶ್ರೀದೇವಿ ಹಿಂದೊಮ್ಮೆ ಮಾತನಾಡಿದ್ದರು.
1976 ರಲ್ಲಿ ಬಿಡುಗಡೆ ಆದ ‘ಮೂಂಡ್ರು ಮುಡಿಚ್ಚು’ ಸಿನಿಮಾದಲ್ಲಿ ರಜನೀಕಾಂತ್, ಕಮಲ್ ಹಾಸನ್ ಹಾಗೂ ಶ್ರೀದೇವಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾವನ್ನೂ ಸಹ ಬಾಲಚಂದರ್ ಅವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾದಲ್ಲಿ ಶ್ರೀದೇವಿಗೆ 5000 ಸಂಭಾವನೆ ನೀಡಿದ್ದರಂತೆ. ರಜನೀಕಾಂತ್ ಗೆ ಅದಕ್ಕಿಂತಲೂ ಕಡಿಮೆ ಕೇವಲ 2000 ನೀಡಿದ್ದರಂತೆ. ಆದರೆ ಆ ಸಿನಿಮಾದ ನಾಯಕ ಕಮಲ್ ಹಾಸನ್ ಗೆ ಆಗಿನ ಕಾಲಕ್ಕೆ ಬರೋಬ್ಬರಿ 30000 ಸಂಭಾವನೆ ಕೊಡಲಾಗಿತ್ತಂತೆ.
ಇದನ್ನೂ ಓದಿ:ಬಡವರಿಗಾಗಿ ಆಸ್ಪತ್ರೆ ಕಟ್ಟಿಸಲು ಮುಂದಾದ ರಜನೀಕಾಂತ್: ಎಲ್ಲಿ?
ಆ ಸಿನಿಮಾದ ಶೂಟಿಂಗ್ ವೇಳೆ ಶ್ರೀದೇವಿಯವರ ತಾಯಿಯೊಟ್ಟಿಗೆ ಆಪ್ತವಾಗಿದ್ದ ರಜನೀಕಾಂತ್, ‘ನಾನು ಕಮಲ್ ಹಾಸನ್ ಅವರ ರೀತಿ ಯಾವಾಗ ಆಗ್ತೀನಿ? ನಿಜಕ್ಕೂ ನಾನು ಕಮಲ್ ಹಾಸನ್ ರೀತಿ ಅಗಬಲ್ಲೆನೆ? ನನ್ನಲ್ಲಿ ಅಷ್ಟು ಪ್ರತಿಭೆ ಇದೆಯೇ’ ಎಂದು ಪದೇ-ಪದೇ ಕೇಳುತ್ತಿದ್ದರಂತೆ. ಅದಕ್ಕೆ ಶ್ರೀದೇವಿ ಅವರ ತಾಯಿ, ಖಂಡಿತ ನೀನು ದೊಡ್ಡ ನಟ ಆಗುತ್ತೀಯ ಎಂದು ಹಾರೈಸಿದ್ದರಂತೆ.
ಗಳಿಕೆಯ ವಿಷಯದಲ್ಲಿ ರಜನೀಕಾಂತ್, ಕಮಲ್ ಹಾಸನ್ ರನ್ನು ಹಿಂದೆ ಹಾಕಿ ಬಹಳ ಸಮಯವಾಗಿದೆ. ಇಬ್ಬರೂ ಸಹ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟರು. ಇಬ್ಬರೂ ಒಂದೇ ಸಮಯದಲ್ಲಿ ಸ್ಟಾರ್ ಗಳಾಗಿದ್ದರೂ ಸಹ ವೃತ್ತಿ ವೈಷಮ್ಯ ಇಲ್ಲದೆ ಆರಂಭದಿಂದಲೂ ಗೆಳೆತನ ಕಾಯ್ದುಕೊಂಡು ಬಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ