‘ಧುರಂಧರ್ 2’ ಜೊತೆ ಬರ್ತಾರಾ ಅಕ್ಷಯ್ ಕುಮಾರ್? ಆದರೆ ಒಂದು ಟ್ವಿಸ್ಟ್

‘ಭೂತ್ ಬಂಗ್ಲ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಪರೇಶ್ ರಾವಲ್, ಟಬು ಮುಂತಾದವರು ನಟಿಸಿದ್ದಾರೆ. ಏಪ್ರಿಲ್ 10ರಂದು ರಿಲೀಸ್ ಆಗಲಿರುವ ಈ ಸಿನಿಮಾದ ಪ್ರಚಾರಕ್ಕೆ ಹಲವು ತಂತ್ರಗಳನ್ನು ರೂಪಿಸಲಾಗುತ್ತಿದೆ. ‘ಧುರಂಧರ್ 2’ ಸಿನಿಮಾ ಜೊತೆ ‘ಭೂತ್ ಬಂಗ್ಲ’ ಚಿತ್ರದ ಪ್ರಚಾರವನ್ನೂ ಮಾಡಲು ಚಿತ್ರತಂಡ ಆಲೋಚಿಸಿದೆ.

‘ಧುರಂಧರ್ 2’ ಜೊತೆ ಬರ್ತಾರಾ ಅಕ್ಷಯ್ ಕುಮಾರ್? ಆದರೆ ಒಂದು ಟ್ವಿಸ್ಟ್
Akshay Kumar, Ranveer Singh

Updated on: Feb 18, 2026 | 3:45 PM

‘ಧುರಂಧರ್ 2’ (Dhurandhar 2) ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಅಷ್ಟಿಷ್ಟಲ್ಲ. ಈಗಾಗಲೇ ‘ಧುರಂಧರ್’ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಆದ್ದರಿಂದ ಅದರ ಸೀಕ್ವೆಲ್ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇನ್ನೂ ಯಾರೆಲ್ಲ ಇರಲಿದ್ದಾರೆ ಎಂಬ ಕೌತುಕ ಇದೆ. ‘ಧುರಂಧರ್ 2’ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಅಕ್ಷಯ್ ಕುಮಾರ್ (Akshay Kumar) ಕೂಡ ಕಾಣಿಸಿಕೊಳ್ಳಲಿದ್ದಾರೆ! ಆದರೆ ನೀವಂದುಕೊಂಡಂತೆ ಅಲ್ಲ.

ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಜೊತೆ ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲ’ ಸಿನಿಮಾದ ಪ್ರಚಾರ ಮಾಡಲು ಪ್ಲ್ಯಾನ್ ಮಾಡಲಾಗಿದೆ. ‘ಧುರಂಧರ್ 2’ ಜೊತೆ ‘ಭೂತ್ ಬಂಗ್ಲ’ ಸಿನಿಮಾದ ಪ್ರೋಮೋ ಸಾಂಗ್ ಅಟ್ಯಾಚ್ ಮಾಡಲಾಗುತ್ತದೆ. ಅಂದರೆ, ‘ಧುರಂಧರ್ 2’ ಸಿನಿಮಾ ಪ್ರದರ್ಶನ ಆಗುವ ಚಿತ್ರಮಂದಿರಗಳಲ್ಲಿ ‘ಭೂತ್ ಬಂಗ್ಲ’ ಪ್ರೋಮೋ ಸಾಂಗ್ ಕೂಡ ಬಿತ್ತರ ಆಗಲಿದೆ.

‘ಭೂತ್ ಬಂಗ್ಲ’ ಸಿನಿಮಾಗೆ ಪ್ರಿಯದರ್ಶನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ನಟಿಸಿದ್ದ ‘ಭೂಲ್ ಭುಲಯ್ಯ’ ಸಿನಿಮಾಗೂ ಪ್ರಿಯದರ್ಶನ್ ಅವರೇ ಆ್ಯಕ್ಷನ್-ಕಟ್ ಹೇಳಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಟೈಟಲ್ ಸಾಂಗ್ ಸಖತ್ ಜನಪ್ರಿಯತೆ ಪಡೆದಿತ್ತು. ಅದೇ ರೀತಿ ಈಗ ‘ಭೂತ್ ಬಂಗ್ಲ’ ಸಿನಿಮಾದಲ್ಲಿ ಕೂಡ ಸಾಂಗ್ ಹೈಲೈಟ್ ಆಗಲಿದೆ.

ಭೂತ್ ಬಂಗ್ಲ’ ಸಿನಿಮಾದ ಹಾಡನ್ನು ಅತಿ ಹೆಚ್ಚಿನ ಜನರಿಗೆ ತಲುಪಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಆದ್ದರಿಂದ ‘ಧುರಂಧರ್ 2’ ಸಿನಿಮಾ ಜೊತೆ ಹಾಡಿನ ಪ್ರೋಮೋವನ್ನು ಅಟ್ಯಾಚ್ ಮಾಡಲು ತೀರ್ಮಾನಿಸಲಾಗಿದೆ. ‘ಧುರಂಧರ್ 2’ ಆರಂಭಕ್ಕೂ ಮುನ್ನ ಅಥವಾ ಮಧ್ಯಂತರದಲ್ಲಿ ಈ ಪ್ರೋಮೋ ಪ್ರದರ್ಶನ ಆಗಲಿದೆ.

ಇದನ್ನೂ ಓದಿ: ಪಾರ್ಟಿ ವೇಳೆ ಜಗಳ: ಅಕ್ಷಯ್ ಕುಮಾರ್ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಗೆ ಏನಾಯ್ತು?

ಈ ಪ್ಲ್ಯಾನ್ ಬಗ್ಗೆ ‘ಭೂತ್ ಬಂಗ್ಲ’ ಸಿನಿಮಾದವರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಆದರೆ ಗಾಸಿಪ್ ಜೋರಾಗಿದೆ. ಹಲವು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟ ಆಗಿದೆ. ಅಕ್ಷಯ್ ಕುಮಾರ್, ಟಬು, ಪರೇಶ್ ರಾವಲ್, ರಾಜ್​ಪಾಲ್ ಯಾದವ್ ಮುಂತಾದವರು ನಟಿಸಿರುವ ಈ ಸಿನಿಮಾ ಏಪ್ರಿಲ್ 10ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.