Akshay Kumar: 30 ಸಾವಿರ ರೂಪಾಯಿ ಬೆಲೆಯ ಬ್ಯಾಗ್​ ಧರಿಸಿದ್ದೇ ತಪ್ಪಾಯ್ತಾ? ಹಿಗ್ಗಾಮುಗ್ಗಾ ಟ್ರೋಲ್​ ಆದ ಅಕ್ಷಯ್​ ಕುಮಾರ್​

Akshay Kumar Bag: ಅಕ್ಷಯ್​ ಕುಮಾರ್​ ಧರಿಸಿದ ಬ್ಯಾಗ್​ ವಿಶೇಷವಾಗಿದೆ. ಅದರಲ್ಲಿ ಐರನ್​ ಮ್ಯಾನ್​ ಮುಖವಿದೆ. ಅದಕ್ಕೆ ಎಲ್​ಇಡಿ ಲೈಟ್​ ಕೂಡ ಅಳವಡಿಕೆ ಆಗಿದೆ. ಅದನ್ನು​ ಕಂಡು ಅನೇಕರಿಗೆ ಅಚ್ಚರಿಗೆ ಆಗಿದೆ.

Akshay Kumar: 30 ಸಾವಿರ ರೂಪಾಯಿ ಬೆಲೆಯ ಬ್ಯಾಗ್​ ಧರಿಸಿದ್ದೇ ತಪ್ಪಾಯ್ತಾ? ಹಿಗ್ಗಾಮುಗ್ಗಾ ಟ್ರೋಲ್​ ಆದ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್​ ಬ್ಯಾಗ್​

Updated on: May 30, 2023 | 6:29 PM

ನಟ ಅಕ್ಷಯ್​ ಕುಮಾರ್​ (Akshay Kumar) ಅವರಿಗೆ ಈಗ ಟೈಮ್​ ಚೆನ್ನಾಗಿಲ್ಲ ಎನ್ನಬಹುದು. ಇತ್ತೀಚೆಗೆ ಅವರು ಮಾಡಿದ ಯಾವ ಚಿತ್ರವೂ ಗೆಲ್ಲುತ್ತಿಲ್ಲ. ಅದೂ ಸಾಲದೆಂಬಂತೆ ಮತ್ತೆ ಮತ್ತೆ ಟ್ರೋಲ್​ ಆಗುತ್ತಿದ್ದಾರೆ ಕೂಡ. ಚಿಕ್ಕ ಪುಟ್ಟ ಕಾರಣಕ್ಕೂ ಅವರನ್ನು ಟೀಕೆ ಮಾಡಲಾಗುತ್ತಿದೆ. ಈಗ ಅವರು ದುಬಾರಿ ಬೆಲೆಯ ಬ್ಯಾಗ್​ ಧರಿಸಿದ್ದಕ್ಕೆ ಟ್ರೋಲ್​ (Akshay Kumar Troll) ಆಗಿದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅಕ್ಷಯ್​ ಕುಮಾರ್​ ಅವರು ಐಷಾರಾಮಿ ಜೀವನ ನಡೆಸುತ್ತಾರೆ. ಇತ್ತೀಚೆಗೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆ ವೇಳೆ ಅವರು ಧರಿಸಿದ್ದ ಬ್ಯಾಗ್​ (Akshay Kumar Bag) ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಈ ಬ್ಯಾಗ್​ ಬೆಲೆ 30 ಸಾವಿರ ರೂಪಾಯಿ. ಇಷ್ಟು ದುಬಾರಿ ಬ್ಯಾಗ್​ ಅವಶ್ಯಕತೆ ಇದೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ‘ನಿರ್ಮಾಪಕರಿಗೆ ನೂರಾರು ಕೋಟಿ ರೂಪಾಯಿ ನಷ್ಟ ಮಾಡುವ ಅಕ್ಷಯ್​ ಕುಮಾರ್​ ಈಗ ಶೋಕಿ ಜೀವನ ನಡೆಸುತ್ತಿದ್ದಾರೆ’ ಎಂದೆಲ್ಲ ಕಮೆಂಟ್​ ಮಾಡಲಾಗುತ್ತಿದೆ.

ಅಕ್ಷಯ್​ ಕುಮಾರ್​ ಧರಿಸಿದ ಬ್ಯಾಗ್​ ವಿಶೇಷವಾಗಿದೆ. ಅದರಲ್ಲಿ ಐರನ್​ ಮ್ಯಾನ್​ ಮುಖವಿದೆ. ಅದಕ್ಕೆ ಎಲ್​ಇಡಿ ಲೈಟ್​ ಕೂಡ ಅಳವಡಿಕೆ ಆಗಿದೆ. ಈ ಬ್ಯಾಕ್​ಪ್ಯಾಕ್​ ಕಂಡು ಅನೇಕರಿಗೆ ಅಚ್ಚರಿಗೆ ಆಗಿದೆ. ಅದರ ಬೆಲೆ ಎಷ್ಟಿರಬಹುದು ಎಂದು ಗೂಗಲ್​ನಲ್ಲಿ ಹುಡುಕಾಡುವ ಪ್ರಯತ್ನ ನಡೆದಿದೆ. ಈ ಬ್ಯಾಗ್​ನ ಬೆಲೆ 30 ಸಾವಿರ ರೂಪಾಯಿ ಎಂದು ಗೊತ್ತಾದ ಕೂಡಲೇ ಬಹುತೇಕರು ಹೌಹಾರಿದ್ದಾರೆ. ಇದು ದುಂದುವೆಚ್ಚ ಎಂದೆಲ್ಲ ಟ್ರೋಲ್​ ಮಾಡಲಾಗುತ್ತಿದೆ. ಆದರೆ ಅಪ್ಪಟ ಅಭಿಮಾನಿಗಳು ಅಕ್ಷಯ್​ ಕುಮಾರ್​ ಪರ ನಿಂತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಕ್ಷಯ್​ ಕುಮಾರ್​ ಅವರು ಇತ್ತೀಚೆಗೆ ‘ಶಂಕರ’ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಇದರಲ್ಲಿ ನಾಯಕಿಯಾಗಿ ಅನನ್ಯಾ ಪಾಂಡೆ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಅವರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಾಕಷ್ಟು ಗೌಪ್ಯವಾಗಿಯೇ ಎಲ್ಲ ಕೆಲಸಗಳನ್ನು ಮುಗಿಸಲಾಗುತ್ತಿದೆ. ಇದಲ್ಲದೇ ಹಲವು ಚಿತ್ರಗಳು ಅವರ ಕೈಯಲ್ಲಿವೆ. ‘ಸೂರರೈ ಪೋಟ್ರು’ ಹಿಂದಿ ರಿಮೇಕ್​, ‘ಬಡೆಮಿಯಾ ಚೋಟೆ ಮಿಯಾ’, ‘ಓಹ್​ ಮೈ ಗಾಡ್​ 2’, ‘ವೇಡಾತ್​ ಮರಾಠೆ ವೀರ್​ ದೌಡಲೇ ಸಾಥ್​’, ‘ದ ಗ್ರೇಡ್​ ಇಂಡಿಯನ್​ ರೆಸ್ಕ್ಯೂ’ ಮುಂತಾದ ಸಿನಿಮಾಗಳು ಒಂದರಹಿಂದೊಂದು ಬಿಡುಗಡೆ ಆಗಲಿವೆ.

ಇದನ್ನೂ ಓದಿ: Akshay Kumar: ಸೋಲಿನ ನೋವು ಮರೆತು ಪೊಲೀಸರ ಜೊತೆ ವಾಲಿಬಾಲ್​ ಆಡಿದ ನಟ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​

2022ರ ವರ್ಷ ಅಕ್ಷಯ್​ ಕುಮಾರ್​ ಪಾಲಿಗೆ ನೀರಸವಾಗಿತ್ತು. ಅವರು ನಟಿಸಿದ ಯಾವ ಚಿತ್ರಗಳೂ ಗೆಲ್ಲಲಿಲ್ಲ. ಕೊನೇ ಪಕ್ಷ 2023ರಲ್ಲಾದರೂ ಅವರು ಗೆಲುವಿನ ಖಾತೆ ತೆರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ಅವರು ನಟಿಸಿದ ‘ಸೆಲ್ಫೀ’ ಸಿನಿಮಾ ಫೆಬ್ರವರಿಯಲ್ಲಿ ತೆರೆಕಂಡು ಸೋತಿತು. ಮುಂಬರುವ ಚಿತ್ರಗಳ ಮೂಲಕವಾದರೂ ಅವರಿಗೆ ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us