‘ವೆಲ್ಕಮ್ ಟು ದಿ ಜಂಗಲ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಶಾಕ್; ಬಿಕಿನಿ ದೃಶ್ಯಕ್ಕೆ ಕತ್ತರಿ

ಸೆನ್ಸಾರ್ ಮಂಡಳಿ ಮತ್ತು ಸಿನಿಮಾಗಳ ನಡುವಿನ ವಿವಾದ ಮುಂದುವರಿದಿದೆ. ಅಕ್ಷಯ್ ಕುಮಾರ್ ನಟನೆಯ 'ವೆಲ್ಕಮ್ ಟು ದಿ ಜಂಗಲ್' ಚಿತ್ರಕ್ಕೆ ಸೆನ್ಸಾರ್ ಬೋರ್ಡ್ UA 16+ ಪ್ರಮಾಣಪತ್ರ ನೀಡಿ, 18 ಬದಲಾವಣೆಗಳನ್ನು ಸೂಚಿಸಿದೆ. ಸಂಭಾಷಣೆಗಳು, ದೃಶ್ಯಗಳು, ಮತ್ತು ಬಿಕಿನಿ ಶಾಟ್‌ಗಳಿಗೆ ಕತ್ತರಿ ಹಾಕಲಾಗಿದೆ. ಈ ಕಠಿಣ ಕ್ರಮಗಳಿಂದಾಗಿ ಚಿತ್ರ ಸಂಕಷ್ಟಕ್ಕೆ ಸಿಲುಕಿದೆ.

ವೆಲ್ಕಮ್ ಟು ದಿ ಜಂಗಲ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಶಾಕ್; ಬಿಕಿನಿ ದೃಶ್ಯಕ್ಕೆ ಕತ್ತರಿ
ವೆಲ್​ಕಮ್​ ಟು ದಿ ಜಂಗಲ್
Image Credit source: Welcome To The Jungle

Updated on: Jun 23, 2026 | 7:01 AM

ಇತ್ತೀಚೆಗೆ ಸಿನಿಮಾಗಳಿಗೂ ಸೆನ್ಸಾರ್ ಮಂಡಳಿಗೂ (Sencor Board) ಕಿತ್ತಾಟ ನಡೆಯುತ್ತಿದೆ. ಸೆನ್ಸಾರ್ ಪತ್ರ ನೀಡುವಾಗ ಸಾಕಷ್ಟು ಕಿರಿಕ್​​ಗಳು ಆಗುತ್ತವೆ. ಈಗ ಬಾಲಿವುಡ್ ನಟ ಅಕ್ಷಯ್ ಕುಮಾರ್​ಗೆ ಸೆನ್ಸಾರ್ ಮಂಡಳಿ ಶಾಕ್ ನೀಡಿದೆ. ಅವರ ನಟನೆಯ ‘ವೆಲ್ಕಮ್ ಟು ದಿ ಜಂಗಲ್’ ಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿ UA 16+ ಪ್ರಮಾಣಪತ್ರ ನೀಡಿದೆ. ಸೆನ್ಸಾರ್ ಮಂಡಳಿ ಸೂಚಿಸಿದ ಒಟ್ಟು 18 ಬದಲಾವಣೆಗಳನ್ನು ಅಳವಡಿಸಿಕೊಂಡ ನಂತರ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿದೆ.

10 ಸೆಕೆಂಡ್ ಕಟ್, ಸಂಭಾಷಣೆಗಳಿಗೆ ಕತ್ತರಿ:

ಚಿತ್ರದ ಕೆಲವು ಮುಖ್ಯ ಸಂಭಾಷಣೆಗಳು ಹಾಗೂ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಚಿತ್ರದಲ್ಲಿದ್ದ 10 ಸೆಕೆಂಡ್‌ಗಳ ಒಂದು ಸಣ್ಣ ದೃಶ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಎಲ್ಲಾ ಬದಲಾವಣೆಗಳ ನಂತರ ಚಿತ್ರದ ಸಮಯ 2 ಗಂಟೆ 44 ನಿಮಿಷಗಳು ಆಗಿದೆ.

‘ಕಾಲಾ ಪೈದಾ ಹುವಾ…’ (ಕಪ್ಪಗಿರುವವನು ಹುಟ್ಟಿದ, ಕಲ್ಲಿದ್ದಲಿನಂತಿದ್ದಾನೆ) ಎಂಬ ಡೈಲಾಗ್ ಅನ್ನು ‘ಸಾದಾ ಪೈದಾ ಹುವಾ…’ (ಸಾಮಾನ್ಯ ವ್ಯಕ್ತಿ, ವಿಚಿತ್ರ ಕ್ಯಾರೆಕ್ಟರ್) ಎಂದು ಬದಲಾಯಿಸಲಾಗಿದೆ. ‘ಪನ್ನಿ ಆಫ್ ಕಾಶ್ಮೀರ್’ ಎಂಬ ಸಾಲನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ‘ಗೂರ್ಖಾ ರೆಜಿಮೆಂಟ್’ ಎಂಬ ಪದದ ಬದಲಿಗೆ ‘ತುಮ್ ಆರ್ಮಿ ಸೇ ಹೋ?’ ಎಂದು ಬಳಸಲಾಗಿದೆ. ಹಾಗೆಯೇ ‘ಜನರಲ್’ ಎಂಬ ಪದವನ್ನು ‘ಆಫೀಸರ್’ ಎಂದು ಬದಲಾಯಿಸಲಾಗಿದೆ. ಹಾಡೊಂದರಲ್ಲಿದ್ದ ಬಿಕಿನಿ ದೃಶ್ಯಗಳು ಮತ್ತು ಕ್ಲೋಸ್-ಅಪ್ ಶಾಟ್‌ಗಳನ್ನು ಸೆನ್ಸಾರ್ ಮಂಡಳಿ ತೆಗೆಸಿದೆ. ನಟಿಯರಾದ ದಿಶಾ ಪಟಾನಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರ ಗ್ಲಾಮರಸ್ ದೃಶ್ಯಗಳನ್ನು ಮಾರ್ಪಡಿಸಲಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ರೀತಿ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ‘ಕೆಡಿ’ ಸಿನಿಮಾಗೂ ಸೆನ್ಸಾರ್ ಸಮಸ್ಯೆ

ಚಿತ್ರದಲ್ಲಿದ್ದ ಅಶ್ಲೀಲ ಕೈ ಸನ್ನೆಯ ದೃಶ್ಯದ ಜಾಗದಲ್ಲಿ ನಟ ವಿಂದು ದಾರಾ ಸಿಂಗ್ ಅವರ ಕ್ಲೋಸ್-ಅಪ್ ಶಾಟ್ ಇಡಲಾಗಿದೆ. ಇಂಗ್ಲಿಷ್ ಸಬ್‌ಟೈಟಲ್ಸ್‌ನಲ್ಲಿದ್ದ ಕೆಲವು ಪದಗಳನ್ನು ಕೂಡ ಬದಲಾಯಿಸಲಾಗಿದೆ.
ಅಹ್ಮದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್‌ನ ದೊಡ್ಡ ತಾರಾಬಳಗವೇ ಇದೆ. ಅಕ್ಷಯ್ ಕುಮಾರ್ ಜೊತೆಗೆ ಸುನಿಲ್ ಶೆಟ್ಟಿ, ಅರ್ಷದ್ ವಾರ್ಸಿ, ಜಾಕಿ ಶ್ರಾಫ್, ಪರೇಶ್ ರಾವಲ್, ರವೀನಾ ಟಂಡನ್ ಮತ್ತು ಲಾರಾ ದತ್ತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಿರೋಜ್ ಎ. ನಾಡಿಯಾಡ್ವಾಲಾ ನಿರ್ಮಿಸಿರುವ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಜೂನ್ 26 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us