ಇಷ್ಟೊಂದು ಹಾಟ್ ಅವತಾರದಲ್ಲಿ ಬಂದಿದ್ದೇಕೆ ಆಲಿಯಾ? ಇದರ ಹಿಂದಿದೆ ಬೇರೆಯದೇ ಕಥೆ

ಈ ವಿಡಿಯೋ ಅಸಲಿಗೆ ವಮಿಖಾ ಗಬ್ಬಿ ಅವರದ್ದು. ಕೆಲವು ಟೂಲ್​ಗಳನ್ನು ಬಳಸಿ ವಮಿಖಾ ಮುಖಕ್ಕೆ ಆಲಿಯಾ ಮುಖವನ್ನು ಅಂಟಿಸಲಾಗಿದೆ. ಹೀಗಾಗಿ ಈ ವಿಡಿಯೋದಲ್ಲಿ ಆಲಿಯಾ ಅವರನ್ನು ನೋಡಿದಂತೇ ಆಗುತ್ತಿದೆ. ಡಿಜಿಟಲ್ ಮ್ಯಾನ್ಯುಪಲೇಷನ್ ಟೆಕ್ನಾಲಜಿ ಬಳಸಿ ಈ ರೀತಿ ಮಾಡಿರೋದನ್ನು ಅನೇಕರು ಖಂಡಿಸಿದ್ದಾರೆ.

ಇಷ್ಟೊಂದು ಹಾಟ್ ಅವತಾರದಲ್ಲಿ ಬಂದಿದ್ದೇಕೆ ಆಲಿಯಾ? ಇದರ ಹಿಂದಿದೆ ಬೇರೆಯದೇ ಕಥೆ
ಆಲಿಯಾ ಫೇಕ್ ವಿಡಿಯೋ

Updated on: May 08, 2024 | 7:34 AM

ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಖತ್ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಅಸಲಿಗೆ ಇದು ಅವರ ವಿಡಿಯೋ ಅಲ್ಲವೇ ಅಲ್ಲ. ಅವರು ಮತ್ತೊಮ್ಮೆ ಡೀಪ್​ಫೇಕ್​ ವಿಡಿಯೋದಿಂದ ತೊಂದರೆಗೆ ಒಳಗಾಗಿದ್ದರೆ. ಸದ್ಯ ಈ ವಿಡಿಯೋ ಬಗ್ಗೆ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿಯ ವಿಡಿಯೋಗಳ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಈ ವಿಡಿಯೋ ಅಸಲಿಗೆ ವಮಿಖಾ ಗಬ್ಬಿ ಅವರದ್ದು. ಕೆಲವು ಟೂಲ್​ಗಳನ್ನು ಬಳಸಿ ವಮಿಖಾ ಮುಖಕ್ಕೆ ಆಲಿಯಾ ಮುಖವನ್ನು ಅಂಟಿಸಲಾಗಿದೆ. ಹೀಗಾಗಿ ಈ ವಿಡಿಯೋದಲ್ಲಿ ಆಲಿಯಾ ಅವರನ್ನು ನೋಡಿದಂತೇ ಆಗುತ್ತಿದೆ. ಡಿಜಿಟಲ್ ಮ್ಯಾನ್ಯುಪಲೇಷನ್ ಟೆಕ್ನಾಲಜಿ ಬಳಸಿ ಈ ರೀತಿ ಮಾಡಿರೋದನ್ನು ಅನೇಕರು ಖಂಡಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ವಮಿಖಾ ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋನ ಹಂಚಿಕೊಂಡಿದ್ದರು. ಕೆಂಪು ಸೀರೆಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ನೆಟ್​ಫ್ಲಿಕ್ಸ್ ಸೀರಿಸ್ ‘ಹೀರಾಮಂಡಿ’ಯ ಸ್ಪೆಷಲ್ ಶೋನಲ್ಲಿ ಅವರು ಇದನ್ನು ಧರಿಸಿದ್ದರು. ಈ ಕಾರ್ಯಕ್ರಮಕ್ಕೆ ಆಲಿಯಾ ಭಟ್ ಅವರು ಕೂಡ ಭಾಗವಹಿಸಿದ್ದರು.

ಆಲಿಯಾ ಡೀಪ್​ಫೇಕ್ ವಿಡಿಯೋ..

ಆಲಿಯಾ ಭಟ್ ಅವರು ಡೀಪ್​ಫೇಕ್ ವಿಡಿಯೋಗೆ ಬಲಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಬೇರೆ ವಿಡಿಯೋ ಹಾಗೂ ಫೋಟೋಗಳಿಗೆ ಆಲಿಯಾ ಮುಖವನ್ನು ಅಂಟಿಸೋ ಕೆಲಸ ಮಾಡಲಾಗಿತ್ತು. ಇದನ್ನು ಅನೇಕರು ಖಂಡಿಸಿದ್ದರು.

ಇದನ್ನೂ ಓದಿ: Met Gala 2024: ಸೀರೆಯಲ್ಲಿ ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ಮಿಂಚಿದ ಆಲಿಯಾ ಭಟ್

ಡೀಪ್​ಫೇಕ್ ವಿಡಿಯೋ ಹೆಚ್ಚು ಚರ್ಚೆಗೆ ಬಂದಿದ್ದು ರಶ್ಮಿಕಾ ಮಂದಣ್ಣ ಅವರಿಂದಾಗಿ. ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿ ಸುದ್ದಿ ಮಾಡಿತ್ತು. ಪೊಲೀಸ್ ಕೇಸ್ ಕೂಡ ದಾಖಲಾಗಿತ್ತು. ಇದಾದ ಬಳಿಕ ಕತ್ರಿನಾ ಕೈಫ್, ಕಾಜೋಲ್ ಸೇರಿ ಅನೇಕರು ಇದರಿಂದ ತೊಂದರೆ ಅನುಭವಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us