‘ಆಲಿಯಾ ಭಟ್​ ಬೇಕು’ ಎಂದ ಶಾರುಖ್​ ಖಾನ್​; ವಿಡಿಯೋ ವೈರಲ್​ ಆದ ಬಳಿಕ ನಟಿ ನೀಡಿದ ಪ್ರತಿಕ್ರಿಯೆ ಏನು?

ಶಾರುಖ್​ ಖಾನ್​ ಮತ್ತು ಆಲಿಯಾ ಭಟ್​ ನಡುವೆ ಉತ್ತಮ ಒಡನಾಟ ಇದೆ. ಈ ಹಿಂದೆ ಬಿಡುಗಡೆ ಆದ ‘ಡಿಯರ್​ ಜಿಂದಗಿ’ ಸಿನಿಮಾದಲ್ಲಿ ಆಲಿಯಾ ಭಟ್​ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಈಗ ‘ಜವಾನ್’ ಸಿನಿಮಾಗೆ ಆಲಿಯಾ ಭಟ್​ ಅವರು ಶುಭ ಕೋರಿದ್ದಾರೆ. ಬಹುತಾರಾಗಣದ ಈ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ.

‘ಆಲಿಯಾ ಭಟ್​ ಬೇಕು’ ಎಂದ ಶಾರುಖ್​ ಖಾನ್​; ವಿಡಿಯೋ ವೈರಲ್​ ಆದ ಬಳಿಕ ನಟಿ ನೀಡಿದ ಪ್ರತಿಕ್ರಿಯೆ ಏನು?
ಆಲಿಯಾ ಭಟ್​, ಶಾರುಖ್​ ಖಾನ್​

Updated on: Sep 01, 2023 | 11:57 AM

ಬಹುನಿರೀಕ್ಷಿತ ‘ಜವಾನ್​’ (Jawan) ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಈ ಸಿನಿಮಾ ಸೆಪ್ಟೆಂಬರ್​ 7ರಂದು ರಿಲೀಸ್​ ಆಗಲಿದೆ. ನಟ ಶಾರುಖ್​ ಖಾನ್​ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ಸಾನ್ಯಾ ಮಲ್ಹೋತ್ರಾ ಮುಂತಾದವರು ಇದ್ದಾರೆ. ಇತ್ತೀಚೆಗಷ್ಟೇ ‘ಜವಾನ್’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಈ ಟ್ರೇಲರ್​ನಲ್ಲಿ ‘ಆಲಿಯಾ ಭಟ್​ ಬೇಕು’ ಎಂದು ಶಾರುಖ್​ ಖಾನ್​ (Shah Rukh Khan) ಅವರು ಹೇಳಿರುವ ಡೈಲಾಗ್​ ಹೈಲೈಟ್​ ಆಗಿದೆ. ಅದಕ್ಕೆ ಈಗ ಆಲಿಯಾ ಭಟ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಇಡೀ ಪ್ರಪಂಚಕ್ಕೆ ಶಾರುಖ್​ ಖಾನ್​ ಬೇಕು’ ಎಂದು ಆಲಿಯಾ ಅವರು ಬರೆದುಕೊಂಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಆಲಿಯಾ ಭಟ್​ (Alia Bhatt) ನಟಿಸಿಲ್ಲ.

ಟ್ರೇಲರ್​ನಲ್ಲಿ ಬಹಿರಂಗ ಆಗಿರುವಂತೆ ‘ಜವಾನ್​’ ಸಿನಿಮಾದಲ್ಲಿ ಮೆಟ್ರೋ ರೈಲನ್ನು ಶಾರುಖ್​ ಖಾನ್​ ಹೈಜಾಕ್​ ಮಾಡುತ್ತಾರೆ. ಆಗ ಪೊಲೀಸ್​ ಪಾತ್ರ ಮಾಡಿರುವ ನಯನತಾರಾ ಅವರು ‘ನಿನಗೆ ಏನು ಬೇಕು’ ಅಂತ ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಶಾರುಖ್​ ಖಾನ್ ಅವರು, ‘ನನಗೆ ಆಲಿಯಾ ಭಟ್​ ಬೇಕು’ ಎಂದು ಡೈಲಾಗ್​ ಹೊಡೆಯುತ್ತಾರೆ. ತಮಗೆ ಸಂಬಂಧವೇ ಇಲ್ಲದ ಸಿನಿಮಾದ ಟ್ರೇಲರ್​ನಲ್ಲಿ ತಮ್ಮ ಹೆಸರು ಪ್ರಸ್ತಾಪ ಆಗಿದ್ದಕ್ಕೆ ಆಲಿಯಾ ಭಟ್​ಗೆ ಅಚ್ಚರಿ ಆಗಿದೆ. ಜೊತೆಗೆ ಖುಷಿ ಕೂಡ ಆಗಿದೆ.

‘ಜವಾನ್’ ಸಿನಿಮಾದ ಟ್ರೇಲರ್:

Jawan | Official Hindi Trailer | Shah Rukh Khan | Atlee | Nayanthara | Vijay S | Deepika P | Anirudh

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಆಲಿಯಾ ಭಟ್​ ಅವರು ‘ಜವಾನ್​’ ಸಿನಿಮಾದ ಟ್ರೇಲರ್​ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ಬರೆದುಕೊಂಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ‘ಇಡೀ ಪ್ರಪಂಚಕ್ಕೆ ಕೇವಲ ಶಾರುಖ್​ ಖಾನ್​ ಬೇಕು. ಎಂಥ ಅದ್ಭುತ ಟ್ರೇಲರ್​. ಸೆಪ್ಟೆಂಬರ್​ 7 ಇನ್ನೂ ದೂರ ಎನಿಸುತ್ತಿದೆ’ ಎಂದು ಈ ಸಿನಿಮಾ ಬಗ್ಗೆ ತಮಗೆ ಇರುವ ಎಗ್ಸೈಟ್​ಮೆಂಟ್​ ಎಷ್ಟು ಎಂಬುದನ್ನು ಆಲಿಯಾ ಭಟ್​ ತಿಳಿಸಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ಅವರು ಈ ಸಿನಿಮಾದ ಬಗ್ಗೆ ಇನ್ನಷ್ಟು ನಿರೀಕ್ಷೆ ಮೂಡುವಂತೆ ಮಾಡಿದ್ದಾರೆ.

ಇದನ್ನೂ ಓದಿ: ‘ನನಗೆ ನನ್ನ ಹೆಂಡತಿಯನ್ನೇ ನಿಭಾಯಿಸೋಕೆ ಆಗ್ತಿಲ್ಲ’: ಶಾರುಖ್​ ಖಾನ್​ ಹೀಗೆ ಹೇಳಿದ್ದೇಕೆ?

ಶಾರುಖ್​ ಖಾನ್​ ಮತ್ತು ಆಲಿಯಾ ಭಟ್​ ನಡುವೆ ಉತ್ತಮ ಒಡನಾಟ ಇದೆ. ಈ ಹಿಂದೆ ಬಿಡುಗಡೆ ಆದ ‘ಡಿಯರ್​ ಜಿಂದಗಿ’ ಸಿನಿಮಾದಲ್ಲಿ ಆಲಿಯಾ ಭಟ್​ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಆ ಚಿತ್ರದಲ್ಲಿ ಶಾರುಖ್​ ಖಾನ್​ ಅವರು ಅತಿಥಿ ಪಾತ್ರ ಮಾಡಿದ್ದರು. ಇಬ್ಬರ ಕಾಂಬಿನೇಷನ್​ ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಈಗ ‘ಜವಾನ್’ ಸಿನಿಮಾಗೆ ಆಲಿಯಾ ಭಟ್​ ಅವರು ಶುಭ ಕೋರಿದ್ದಾರೆ. ಈ ಸಿನಿಮಾ​ಗೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​ ಒಡೆತನದ ‘ರೆಡ್​​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us