‘ಇಂಡಿಯಾ’ ಹೆಸರು ಬದಲಾವಣೆ ಚರ್ಚೆ ಬೆನ್ನಲ್ಲೇ ‘ಭಾರತ್​ ಮಾತಾ ಕಿ ಜೈ’ ಎಂದ ಅಮಿತಾಭ್​ ಬಚ್ಚನ್​

ಅಮಿತಾಭ್​ ಬಚ್ಚನ್​ ಅವರು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಭಾರತದ ಧ್ವಜ ಮತ್ತು ಕೆಂಪು ಬಾವುಟ ಇರುವ ಎಮೋಜಿಯನ್ನು ಅವರು ಬಳಸಿದ್ದಾರೆ. ಕೇವಲ ಎರಡೂವರೆ ಗಂಟೆಯಲ್ಲಿ 20 ಸಾವಿರಕ್ಕೂ ಅಧಿಕ ಜನರು ಇದನ್ನು ಲೈಕ್ ಮಾಡಿದ್ದಾರೆ. ಈ ನಿರ್ದಿಷ್ಟ ಸಮಯದಲ್ಲಿ ಈ ರೀತಿ ಟ್ವೀಟ್​ ಮಾಡಿದ್ದಕ್ಕೆ ಅರ್ಥವೇನು ಎಂದು ಕೆಲವರು ಪ್ರಶ್ನಿಸಿದ್ದಾರೆ.

‘ಇಂಡಿಯಾ’ ಹೆಸರು ಬದಲಾವಣೆ ಚರ್ಚೆ ಬೆನ್ನಲ್ಲೇ ‘ಭಾರತ್​ ಮಾತಾ ಕಿ ಜೈ’ ಎಂದ ಅಮಿತಾಭ್​ ಬಚ್ಚನ್​
ಅಮಿತಾಭ್​ ಬಚ್ಚನ್​

Updated on: Sep 05, 2023 | 5:04 PM

ಹಿರಿಯ ನಟ ಅಮಿತಾಭ್​ ಬಚ್ಚನ್​ (Amitabh Bachchan) ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅನೇಕ ವಿಚಾರಗಳ ಬಗ್ಗೆ ಅವರು ಆಗಾಗ ಪೋಸ್ಟ್​ ಮಾಡುತ್ತಾರೆ. ಈಗ ಅವರು ಮಾಡಿರುವ ಒಂದು ಟ್ವೀಟ್​ (Amitabh Bachchan Tweet) ಬಗ್ಗೆ ಸಖತ್​ ಚರ್ಚೆ ಆಗುತ್ತಿದೆ. ‘ಭಾರತ್​ ಮಾತಾ ಕಿ ಜೈ’ ಎಂದು ಟ್ವೀಟ್​ ಮಾಡಿದ್ದಾರೆ. ಬೇರೆ ಯಾವುದೇ ಸಂದರ್ಭದಲ್ಲಿ ಅವರು ಈ ರೀತಿ ಪೋಸ್ಟ್​ ಮಾಡಿದ್ದರೆ ಅದು ಚರ್ಚೆ ಆಗುತ್ತಿರಲಿಲ್ಲ. ಈಗ ‘ಇಂಡಿಯಾ’ ಎಂಬ ಹೆಸರನ್ನು ‘ಭಾರತ್​’ (Bharat) ಎಂದು ಬದಲಾಯಿಸಲಾಗುವುದು ಎಂಬ ಮಾತು ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಅಮಿತಾಭ್​ ಬಚ್ಚನ್​ ಅವರು ‘ಭಾರತ್​ ಮಾತಾ ಕಿ ಜೈ’ ಎಂದು ಟ್ವೀಟ್​ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಇದಕ್ಕೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಅಮಿತಾಭ್​ ಬಚ್ಚನ್​ ಅವರು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಭಾರತದ ಧ್ವಜ ಮತ್ತು ಕೆಂಪು ಬಾವುಟ ಇರುವ ಎಮೋಜಿಯನ್ನು ಅವರು ಬಳಸಿದ್ದಾರೆ. ಕೇವಲ ಎರಡೂವರೆ ಗಂಟೆಯಲ್ಲಿ 20 ಸಾವಿರಕ್ಕೂ ಅಧಿಕ ಜನರು ಇದನ್ನು ಲೈಕ್ ಮಾಡಿದ್ದಾರೆ. ಈ ನಿರ್ದಿಷ್ಟ ಸಮಯದಲ್ಲಿ ಈ ರೀತಿ ಟ್ವೀಟ್​ ಮಾಡುವ ಅವಶ್ಯಕತೆ ಏನು ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ಅಮಿತಾಭ್​ ಬಚ್ಚನ್​ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಅಮಿತಾಭ್​ ಬಚ್ಚನ್​ ಅವರ ಟ್ವೀಟ್​:

ಪ್ರತಿಪಕ್ಷಗಳು ‘INDIA’ ಎಂಬ ಹೆಸರಿನಲ್ಲಿ ಮೈತ್ರಿಕೂಟ ಮಾಡಿಕೊಂಡಿವೆ. ಆ ಕಾರಣದಿಂದಲೇ ದೇಶದ ಹೆಸರನ್ನು INDIA ಎಂಬುದರ ಬದಲು ‘ಭಾರತ್​’ ಎಂದು ಬದಲಾಯಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೆಲವರು ಊಹಿಸಿದ್ದಾರೆ. ಹಾಗಾದರೆ ಅಮಿತಾಭ್​ ಬಚ್ಚನ್​ ಅವರಿಗೂ ‘INDIA’ ಮೈತ್ರಿಕೂಟದ ಮೇಲೆ ಅಸಮಾಧಾನ ಇದೆಯೇ ಎಂದು ನೆಟ್ಟಿಗರು ಕಮೆಂಟ್​ ಮೂಲಕ ಪ್ರಶ್ನಿಸಿದ್ದಾರೆ. ಆ ಬಗ್ಗೆಯೂ ಇನ್ನಷ್ಟೇ ಬಿಗ್​ ಬಿ ಕಡೆಯಿಂದ ಸ್ಪಷ್ಟನೆ ಸಿಗುವುದು ಬಾಕಿ ಇದೆ.

ಇದನ್ನೂ ಓದಿ: ಮಾವನ ಜತೆ ಮುದ್ದು ಸೊಸೆಯ ತರಲೆ-ತಮಾಷೆ; ಐಶ್​-ಅಮಿತಾಭ್​ ಬಚ್ಚನ್​ ಕ್ಯೂಟ್​ ವಿಡಿಯೋ ನೋಡಿ

ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್​ ಎಂದು ಬದಲಾಯಿಸುವ ಚರ್ಚೆಯ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧ ವ್ಯಕ್ತವಾಗುತ್ತಿದೆ. ಈಗ ಹೆಸರು ಬದಲಾವಣೆಯಿಂದ ಏನೂ ಪ್ರಯೋಜನ ಇಲ್ಲ ಎಂದು ಕೆಲವರು ಹೇಳಿದ್ದಾರೆ. ‘ಇಂಡಿಯಾ ಎಂಬ ಹೆಸರು ಚೆನ್ನಾಗಿದೆ. ಆದರೆ ಭಾರತ್​ ಎಂಬುದು ಎಮೋಷನ್​’ ಎಂಬ ಕಮೆಂಟ್​ ಕೂಡ ಬಂದಿದೆ.

ಇದನ್ನೂ ಓದಿ: Amitabh Bachchan: ಅಭಿಮಾನಿಗಳನ್ನು ಭೇಟಿ ಮಾಡುವಾಗ ಚಪ್ಪಲಿ ಹಾಕಿಕೊಳ್ಳಲ್ಲ ಅಮಿತಾಭ್​ ಬಚ್ಚನ್​; ಕಾರಣ ತಿಳಿಸಿದ ಸ್ಟಾರ್​ ನಟ

ಸಿನಿಮಾ ವಿಚಾರಕ್ಕೆ ಬರುವುದಾದರೆ ಅಮಿತಾಭ್​ ಬಚ್ಚನ್​ ಅವರು ‘ಕಲ್ಕಿ 2898 ಎಡಿ’, ‘ಗಣಪತ್​ ಪಾರ್ಟ್​ 1’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ‘ಕೌನ್​ ಬನೇಗಾ ಕರೋಡ್​ಪತಿ ಸೀಸನ್​ 15’ ಶೋನ ನಿರೂಪಣೆ ಕೂಡ ಮಾಡುತ್ತಿದ್ದಾರೆ. ಅವರಿಗೆ ಹೊಸ ಹೊಸ ಆಫರ್​ಗಳು ಸಿಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:28 pm, Tue, 5 September 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us