ಆ.14ರಿಂದ ಶುರುವಾಗಲಿದೆ ‘ಕೌನ್​ ಬನೇಗಾ ಕರೋಡ್​ಪತಿ’ ಹೊಸ ಸೀಸನ್​; ಈ ಬಾರಿಯೂ ಅಮಿತಾಭ್​ ಬಚ್ಚನ್​ ಸಾರಥ್ಯ

Kaun Banega Crorepati 15: ಸೋನಿ ಟಿವಿಯಲ್ಲಿ ‘ಕೌನ್​ ಬನೇಗಾ ಕರೋಡ್​ಪತಿ 15’ ಪ್ರಸಾರ ಆಗಲಿದೆ. ಹೊಸ ಸೀಸನ್​ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅಮಿತಾಭ್​ ಬಚ್ಚನ್​ ಕಾಣಿಸಿಕೊಂಡಿದ್ದಾರೆ.

ಆ.14ರಿಂದ ಶುರುವಾಗಲಿದೆ ‘ಕೌನ್​ ಬನೇಗಾ ಕರೋಡ್​ಪತಿ’ ಹೊಸ ಸೀಸನ್​; ಈ ಬಾರಿಯೂ ಅಮಿತಾಭ್​ ಬಚ್ಚನ್​ ಸಾರಥ್ಯ
ಅಮಿತಾಭ್​ ಬಚ್ಚನ್​
Follow us
ಮದನ್​ ಕುಮಾರ್​
|

Updated on: Aug 01, 2023 | 1:14 PM

ನಟ ಅಮಿತಾಭ್​ ಬಚ್ಚನ್​ (Amitabh Bachchan) ಅವರು ದಣಿವರಿಯದ ಯುವಕನಂತೆ ಕೆಲಸ ಮಾಡುತ್ತಾರೆ. ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲದೇ ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಅವರು ಜನಮೆಚ್ಚುಗೆ ಪಡೆದಿದ್ದಾರೆ. ಅವರ ನಿರೂಪಣೆಯಲ್ಲಿ ಮೂಡಿಬರುವ ‘ಕೌನ್​ ಬನೇಗಾ ಕರೋಡ್​ಪತಿ’ (Kaun Banega Crorepati) ಕಾರ್ಯಕ್ರಮಕ್ಕೆ ಪ್ರತ್ಯೇಕವಾದ ಅಭಿಮಾನಿ ಬಳಗ ಇದೆ. ಈ ಕ್ವಿಜ್​ ಶೋ ನೋಡಿದರೆ ಪ್ರೇಕ್ಷಕರ ಸಾಮಾನ್ಯಜ್ಞಾನ ವೃದ್ಧಿಸುತ್ತದೆ. ಆಟ ಆಡಿದವರಿಗೆ ಕೋಟಿಗಟ್ಟಲೆ ಹಣ ಸಿಗುತ್ತದೆ. ಈವರೆಗೂ 14 ಆವೃತ್ತಿಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿವೆ. ಈಗ ‘ಕೌನ್​ ಬನೇಗಾ ಕರೋಡ್​ಪತಿ’ 15ನೇ (KBC 15) ಆವೃತ್ತಿಗೆ ಚಾಲನೆ ನೀಡಲು ಸಕಲ ಸಿದ್ಧತೆ ನಡೆದಿದೆ. ಈ ಬಾರಿ ಕೂಡ ಅಮಿತಾಭ್​ ಬಚ್ಚನ್​ ಅವರೇ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸೋನಿ ಟಿವಿಯಲ್ಲಿ ‘ಕೌನ್​ ಬನೇಗಾ ಕರೋಡ್​ಪತಿ 15’ ಪ್ರಸಾರ ಆಗಲಿದೆ. ಹೊಸ ಸೀಸನ್​ ಬಗ್ಗೆ ಮಾಹಿತಿ ತಿಳಿಸಲು ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅಮಿತಾಭ್​ ಬಚ್ಚನ್​ ಕಾಣಿಸಿಕೊಂಡಿದ್ದಾರೆ. ಇದನ್ನು ‘ಹೊಸ ಆರಂಭ’ ಎಂದು ಅವರು ಕರೆದಿದ್ದಾರೆ. ಆಗಸ್ಟ್​ 14ರಂದು ಈ ಶೋ ಪ್ರಸಾರ ಆರಂಭ ಆಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಇದರ ಸಂಚಿಕೆಗಳು ಬಿತ್ತರ ಆಗಲಿದೆ. ಹೊಸ ಸೀಸನ್​ ನಡೆಸಿಕೊಡಲು ಬಹಳ ಉತ್ಸಾಹದಿಂದ ಅಮಿತಾಭ್​ ಬಚ್ಚನ್​ ಅವರು ವೇದಿಕೆ ಏರಿದ್ದಾರೆ.

‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದ ಪ್ರತಿ ಎಪಿಸೋಡ್​ನಲ್ಲೂ ವಿಶೇಷತೆ ಇರುತ್ತದೆ. ಬೇರೆ ಬೇರೆ ಕ್ಷೇತ್ರದ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಪ್ರತಿ ಪ್ರಶ್ನೆಗೆ ಉತ್ತರ ನೀಡಿದಾಗಲೂ ಸ್ಪರ್ಧಿಗಳಿಗೆ ನಗದು ಬಹುಮಾನ ಸಿಗುತ್ತದೆ. ಸಾವಿರದಿಂದ ಬಹುಕೋಟಿ ರೂಪಾಯಿವರೆಗೆ ಹಣ ಗೆಲ್ಲುವ ಅವಕಾಶ ಈ ಶೋನಲ್ಲಿ ಸಿಗುತ್ತದೆ. ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಿಂದ ಅನೇಕರ ಬದುಕು ಬದಲಾಗಿದೆ. ಈ ಶೋ ಬಗ್ಗೆ ಅಮಿತಾಭ್​ ಬಚ್ಚನ್​ ಅವರು ವಿಶೇಷವಾದ ಒಲವು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Amitabh Bachchan: ಅಭಿಮಾನಿಗಳನ್ನು ಭೇಟಿ ಮಾಡುವಾಗ ಚಪ್ಪಲಿ ಹಾಕಿಕೊಳ್ಳಲ್ಲ ಅಮಿತಾಭ್​ ಬಚ್ಚನ್​; ಕಾರಣ ತಿಳಿಸಿದ ಸ್ಟಾರ್​ ನಟ

ಎಂದಿನಂತೆ ಝಗಮಗಿಸುವ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮೊದಲ ಎಪಿಸೋಡ್​ನಲ್ಲಿ ಸ್ಪರ್ಧಿಸುವ ಸ್ಪರ್ಧಿಗಳನ್ನು ಹೊಸ ಪ್ರೋಮೋನಲ್ಲಿ ತೋರಿಸಲಾಗಿದೆ. ‘5ಜಿ ವೇಗಕ್ಕೆ ಅಪ್​ಗ್ರೇಡ್​ ಆಗಿ, ಹೊಸ ಮಾದರಿಯಲ್ಲಿ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮ ಬರುತ್ತಿದೆ’ ಎಂದು ಅಮಿತಾಭ್​ ಬಚ್ಚನ್​ ಹೇಳಿದ್ದಾರೆ. ಸಿನಿಮಾಗಳಲ್ಲೂ ಬಿಗ್​-ಬಿ ಸಕ್ರಿಯರಾಗಿದ್ದಾರೆ. ಪ್ರಭಾಸ್​ ನಟನೆಯ ‘ಕಲ್ಕಿ 2898 ಎಡಿ’ ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿ ಇವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ