Seetha Raama: ಸತ್ಯ ಕಂಡ ಕನಸಿನ ಹಿಂದಿನ ಕಥೆಯೇನು? ಆ ಕಹಿ ಸತ್ಯ ಏನಿರಬಹುದು?
ರಾಮ್ನ ಚಿಕ್ಕಪ್ಪ ಅವರು ಹೇಳಲು ಹೊರಟಿರುವ ಸತ್ಯ ಇನ್ನೂ ನಿಗೂಢ. ರಾತ್ರಿ ಕಂಡ ಕನಸು ಮತ್ತೂ ಭಯಾನಕ. ಹಾಗಾದರೆ ಆ ಕಹಿ ಸತ್ಯ ಏನಿರಬಹುದು. ಅದರ ಹಿಂದಿನ ಕಥೆಯೇನು? ಆ ಸತ್ಯ ಏನು ಎಂಬುದು ತಿಳಿಯಬೇಕಿದೆ.
ಸತತ ಮೂರನೇ ವಾರಕ್ಕೆ ಕಾಲಿಟ್ಟು ಒಳ್ಳೆಯ ಮನರಂಜನೆ ನೀಡುತ್ತಿರುವ ‘ಸೀತಾ ರಾಮ’ ಧಾರಾವಾಹಿ (Seetha Raama Serial) ಪ್ರೇಕ್ಷಕನನ್ನು ಮನರಂಜಿಸುತ್ತಿದೆ. ಕಥಾ ನಾಯಕ ರಾಮ್ ಮನೆಯಲ್ಲಿ ಒಂದು ರೀತಿಯ ಬೂದಿ ಮುಚ್ಚಿದ ಕೆಂಡದ ವಾತಾವರಣ. ಸತ್ಯ ಕಣ್ಣೆದುರೇ ಇದ್ದರೂ ಗುರುತಿಸಲಾಗುತ್ತಿಲ್ಲ. ರಾಮ್ ತನ್ನ ಕುಟುಂಬವೇ ತನ್ನ ಶಕ್ತಿ ಅಂದುಕೊಂಡಿದ್ದಾನೆ ಆದರೆ ಅವರೆಲ್ಲರಲ್ಲಿ ರಾಮನನ್ನು ನಿಜವಾಗಿ ಪ್ರೀತಿಸುವವರು ಯಾರು ಎಂಬುದು ಮುಂದೆ ರಾಮನಿಗೇ ತಿಳಿಯಬೇಕಾಗಿದೆ. ಈಗ ರಾಮನಿಗೆ ಚಿಕ್ಕಿ ಮಾತೆ ವೇದವಾಕ್ಯ. ಚಿಕ್ಕಪ್ಪ ಸತ್ಯನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಚಿಕ್ಕಿ ಮಾತು ಮೀರುವಂತಿಲ್ಲ. ಕುಡಿದು ಬಂದ ಚಿಕ್ಕಪ್ಪನ ಮಾತು ಕೇಳಲು ಅವಕಾಶ ಕೊಡದ ಭಾರ್ಗವಿ, ಪ್ರೀತಿ ತೋರುವಂತೆ ನಾಟಕವಾಡಿ ರಾಮ್ ನನ್ನ ಅಲ್ಲಿಂದ ಕಳುಹಿಸಿದ್ದಾಳೆ.
ಸತ್ಯ ಪಾತ್ರ ನಿರ್ವಹಿಸುತ್ತಿರುವ ಜಯದೇವ್ ಅವರು ಹೇಳಲು ಹೊರಟಿರುವ ಸತ್ಯ ಇನ್ನೂ ನಿಗೂಢ. ಜೊತೆಗೆ ಸತ್ಯ ರಾತ್ರಿ ಕನಸು ಕಂಡು ಕೊಲೆ ಎಂದು ಬೆಚ್ಚಿಬಿದ್ದಾಗ, ಏನೋ ಕಹಿ ಸತ್ಯ ಅವರನ್ನು ಕೊಲ್ಲುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಏನದು ಕನಸು? ಅದರ ಹಿಂದಿನ ಕಥೆಯೇನು? ಸತ್ಯ ಅವರೇ ಹೇಳಬೇಕಾಗಿದೆ.
ಇನ್ನು ಸಿಹಿ ತನ್ನ ಬೆಸ್ಟ್ ಫ್ರೆಂಡ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ, ಚಪಾತಿ ಪ್ಯಾಕ್ ಮಾಡಿದ್ದಾಳೆ. ಬೆಳಿಗ್ಗೆ ಸ್ಕೂಲ್ ಹೋಗೋ ಮುಂಚೆ ಡಾಕ್ಟರ್ ಆಂಟಿ ನೋಡೋದಕ್ಕೆ ಹೋಗಿರುವ ಸಿಹಿ ತಾನು ಡಾಕ್ಟರ್ ಆಗಿ ಸಕ್ಕರೆ ಕಾಯಿಲೆಯೇ ಇಲ್ಲ ಎಂಬಂತೆ ಮಾಡ್ತಿನಿ. ಆಗ ಸೀತಮ್ಮನ ಹಾಗೇ ಅಳುವವರಿರುವುದಿಲ್ಲ ಅಂತಿದ್ದಾಳೆ. ಆದರೆ ಅವಳ ಅಮ್ಮನಿಗೆ ಏನೇ ಅಂದರೂ ಮಗಳ ಸಕ್ಕರೆ ಖಾಯಿಲೆಯದ್ದೇ ಚಿಂತೆ.
ಇದನ್ನೂ ಓದಿ: ರಾಮ್ ಮಾಡಿದ ಸಹಾಯ ಸೀತಾಳಿಗೆ ತಿಳಿಯುತ್ತಾ? ಗೆಳೆಯನಿಗೆ ಪುಟಾಣಿ ಸಿಹಿ ಹೇಗೆ ಥ್ಯಾಂಕ್ಸ್ ಹೇಳಬಹುದು?
ಇನ್ನು ಆಫೀಸ್ ನಲ್ಲಿ ರಾಮ್ ಸೀತಾಳಿಗೆ ಪಾಠ ಮಾಡಲು ಹೋಗಿ ತಾನೇ ಬುದ್ದಿ ಹೇಳಿಸಿಕೊಂಡಿದ್ದಾನೆ. ಸೀತಾ, ರಾಮ್ ಮಧ್ಯೆ ಚಾಕ್ಲೆಟ್, ಟಿಫನ್ ವಿನಿಮಯವೂ ಆಗಿದೆ. ಆದರೆ ಮ್ಯಾನೇಜರ್ ಚರಣ್ ಡಿ. ತನ್ನ ಕೆಲಸ ಉಳಿಸಿಕೊಳ್ಳಲು ಬೋನಸ್ ನಾಟಕವಾಡಿ, ಬಾಸ್ ಮೆಚ್ಚುಗೆ ಗಳಿಸಲು ಮತ್ತೊಂದು ಪ್ಲಾನ್ ಮಾಡಿದ್ದಾನೆ. ಅದನ್ನು ಆಫೀಸ್ನವರ ಮುಂದೆ ಹೇಳಿದ್ದಾನೆ. ಆದರೆ ಅದಕ್ಕೆ ರಾಮ್ ಒಪ್ಪದೇ ಆ ಐಡಿಯಾ ವನ್ನು ನಿರಾಕರಿಸಿದ್ದಾನೆ. ಇದನ್ನು ನೋಡಿದ ಸೀತಾ ಕರುಣೆಯಿಂದ ರಾಮ್ ಬಳಿ ಮಾತನಾಡಬೇಡಿ ಎಂದು ಹೇಳುತ್ತಾಳೆ. ಆದರೆ ಇದೆಲ್ಲದರಿಂದ ರಾಮ್ ಯಾರು ಎಂಬ ಸತ್ಯ ಆಫೀಸ್ ಅವರ ಮುಂದೆ ಬಯಲಾಗುತ್ತಾ? ರಾಮ್ ನಿರಾಕರಿಸಿರುವ ಆ ಐಡಿಯಾ ರಿಜೆಕ್ಟ್ ಆಗುತ್ತಾ? ಕಾದು ನೊಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ