ಕಚೇರಿ ಬಾಡಿಗೆಗೆ ನೀಡಿದ ಅಮಿತಾಬ್ ಬಚ್ಚನ್, ತಿಂಗಳ ಬಾಡಿಗೆ ಎಷ್ಟು ಗೊತ್ತೆ?

|

Updated on: Dec 31, 2023 | 5:50 PM

Amitabh Bachchan: ಅಮಿತಾಬ್ ಬಚ್ಚನ್ ನಟರಾಗಿರುವ ಜೊತೆಗೆ ಒಳ್ಳೆಯ ಉದ್ಯಮಿಯೂ ಹೌದು, ಇತ್ತೀಚೆಗಷ್ಟೆ ಖರೀದಿಸಿದ ತಮ್ಮದೇ ಸ್ಥಳವನ್ನು ಭಾರಿ ಮೊತ್ತಕ್ಕೆ ಬಾಡಿಗೆಗೆ ನೀಡಿದ್ದಾರೆ. ತಿಂಗಳ ಬಾಡಿಗೆ ಎಷ್ಟು ಗೊತ್ತೆ?

ಕಚೇರಿ ಬಾಡಿಗೆಗೆ ನೀಡಿದ ಅಮಿತಾಬ್ ಬಚ್ಚನ್, ತಿಂಗಳ ಬಾಡಿಗೆ ಎಷ್ಟು ಗೊತ್ತೆ?
ಅಮಿತಾಬ್ ಬಚ್ಚನ್
Follow us on

ಅಮಿತಾಬ್ ಬಚ್ಚನ್ (Amitabh Bachchan) ಬಾಲಿವುಡ್​ನಲ್ಲಿ ದೊಡ್ಡ ಮೊತ್ತದ ಸಂಭಾವನೆ ಪಡೆವ ನಟ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಅವರುಗಳಷ್ಟು ಅಲ್ಲದಿದ್ದರೂ ಸಹ ಬಚ್ಚನ್ ಸಂಭಾವನೆ ಕಡಿಮೆ ಕೋಟಿಗಳೇನಲ್ಲ. ಕೆಲ ವರದಿಗಳ ಪ್ರಕಾರ, ತಮ್ಮ ಪುತ್ರ ಅಭಿಷೇಕ್ ಬಚ್ಚನ್​ಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಾರಂತೆ ಅಮಿತಾಬ್ ಬಚ್ಚನ್. ಸಿನಿಮಾ ನಟನೆಯಲ್ಲಿ ಸಕ್ರಿಯವಾಗಿರುವ ಜೊತೆಗೆ ಅಮಿತಾಬ್ ಬಚ್ಚನ್ ವ್ಯವಹಾರೋದ್ಯಮದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಭಿನ್ನ-ಭಿನ್ನ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಿರುತ್ತಾರೆ.

ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹೊಂದಿರುವ ಅಮಿತಾಬ್ ಬಚ್ಚನ್ ರಿಯಲ್ ಎಸ್ಟೇಟ್​ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ಮುಂಬೈ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳಲ್ಲಿ ನಿವೇಷನ ಹಾಗೂ ಅಪಾರ್ಟ್​ಮಿಂಟ್​ ಗಳನ್ನು ಖರೀದಿ ಮಾಡಿದ್ದಾರೆ. ಇದೀಗ ಮುಂಬೈನ ಓಶಿವಾರ ಏರಿಯಾದಲ್ಲಿರುವ ತಮ್ಮ ಕಮರ್ಷಿಯಲ್ ಆಫೀಸ್ ಜಾಗವನ್ನು ಭಾರಿ ಮೊತ್ತಕ್ಕೆ ಬಾಡಿಗೆಗೆ ನೀಡಿದ್ದಾರೆ ನಟ ಅಮಿತಾಬ್ ಬಚ್ಚನ್.

10 ಸಾವಿರ ಚದರ ಅಡಿಯ ಸ್ಥಳವನ್ನು ಅಮಿತಾಬ್ ಬಚ್ಚನ್ ಸಂಸ್ಥೆಯೊಂದಕ್ಕೆ ಬಾಡಿಗೆಗೆ ನೀಡಿದ್ದಾರೆ. 1.03 ಕೋಟಿ ರೂಪಾಯಿಗಳನ್ನು ಭದ್ರತಾ ಮೊತ್ತವನ್ನಾಗಿ ಪಡೆದುಕೊಂಡಿರುವ ಅಮಿತಾಬ್ ಬಚ್ಚನ್. 17.50 ಲಕ್ಷ ರೂಪಾಯಿ ತಿಂಗಳ ಬಾಡಿಗೆಯನ್ನಾಗಿ ನಿಗದಿ ಪಡಿಸಿದ್ದಾರೆ. ವರ್ಷಕ್ಕೆ 2.07 ಕೋಟಿ ರೂಪಾಯಿ ಬಾಡಿಗೆ ಮೊತ್ತವನ್ನು ಅಮಿತಾಬ್ ಬಚ್ಚನ್ ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ:ಮಗಳಿಗೆ 50 ಕೋಟಿ ಮೌಲ್ಯದ ಮನೆ ಉಡುಗೊರೆ ನೀಡಿದ ಅಮಿತಾಬ್ ಬಚ್ಚನ್

ಈಗ ಬಾಡಿಗೆಗೆ ನೀಡಲಾಗಿರುವ ಜಾಗವನ್ನು ಇದೇ ವರ್ಷ (2023) ಆಗಸ್ಟ್​ನಲ್ಲಿ ಖರೀದಿ ಮಾಡಿದ್ದರು ಅಮಿತಾಬ್ ಬಚ್ಚನ್. ಈಗ ಬಾಡಿಗೆಗೆ ನೀಡಲಾಗಿರುವ ಸ್ಥಳಕ್ಕೆ 7.18 ಕೋಟಿ ರೂಪಾಯಿ ಮೊತ್ತವನ್ನು ಬಚ್ಚನ್ ನೀಡಿದ್ದರು. ಮೂರು ವರ್ಷಕ್ಕೆ ಸಂಸ್ಥೆಯೊಟ್ಟಿಗೆ ಬಾಡಿಕೆ ಕರಾರನ್ನು ಬಚ್ಚನ್ ಮಾಡಿಕೊಂಡಿದ್ದಾರೆ. ಒಪ್ಪಂದವನ್ನು ನೊಂದಣಿ ಮಾಡಿಸಿದ್ದು 2.88 ಲಕ್ಷ ರೂಪಾಯಿಯನ್ನು ಶುಲ್ಕವಾಗಿ ಪಾವತಿಸಲಾಗಿದೆ.

ಅಮಿತಾಬ್ ಬಚ್ಚನ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ದಿ ಉಮೇಶ್ ಕ್ರೋನಿಕಲ್ಸ್’, ತೆಲುಗು ಸಿನಿಮಾ ‘ಕಲ್ಕಿ 2898’, ‘ಬಟರ್​ಫ್ಲೈ’, ರಜನೀಕಾಂತ್ ನಟನೆಯ ತಮಿಳು ಸಿನಿಮಾ ‘ವೆಟ್ಟೈಯಾನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ