ಮಗಳಿಗೆ 50 ಕೋಟಿ ಮೌಲ್ಯದ ಮನೆ ಉಡುಗೊರೆ ನೀಡಿದ ಅಮಿತಾಬ್ ಬಚ್ಚನ್

Amitabh Bachchan: ಅಮಿತಾಬ್ ಬಚ್ಚನ್, ತಮ್ಮ ಪ್ರೀತಿಯ ಬಂಗ್ಲೆಯನ್ನು ಮಗಳು ಶ್ವೇತಾ ನಂದಾಗೆ ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆ ನೀಡಿರುವ ಆಸ್ತಿಯ ಮೌಲ್ಯ ಎಷ್ಟು ಗೊತ್ತೆ?

ಮಗಳಿಗೆ 50 ಕೋಟಿ ಮೌಲ್ಯದ ಮನೆ ಉಡುಗೊರೆ ನೀಡಿದ ಅಮಿತಾಬ್ ಬಚ್ಚನ್
ಬಚ್ಚನ್
Follow us
ಮಂಜುನಾಥ ಸಿ.
|

Updated on: Nov 25, 2023 | 8:26 PM

ಅಮಿತಾಬ್ ಬಚ್ಚನ್ (Amitabh Bachchan) ರೀತಿಯೇ ಅವರ ಮನೆ ಸಹ ಸಖತ್ ಜನಪ್ರಿಯ. ಮುಂಬೈನಲ್ಲಿ ಅಮಿತಾಬ್ ಬಚ್ಚನ್ ಮನೆ ಗೊತ್ತಿರದ, ಮನೆಯ ಹೆಸರು ಗೊತ್ತಿಲ್ಲದ ಜನ ಕಡಿಮೆ. ಬಚ್ಚನ್​ ಅವರು ರಿಯಲ್ ಎಸ್ಟೇಟ್​ ಮೇಲೆ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಬಚ್ಚನ್ ಹೆಸರಲ್ಲಿ ಹಲವು ಅಪಾರ್ಟ್​ಮಿಂಟ್​ಗಳಿವೆ ಆದರೆ ಅವರು ವಾಸಕ್ಕೆ ಬಳಸುವುದು ಎರಡು ಮನೆಗಳು ಮಾತ್ರ. ಒಂದು ಜಲ್ಸಾ ಮತ್ತೊಂದು ಪ್ರತೀಕ್ಷಾ. ಈ ಎರಡೂ ಮನೆಗಳು ಮುಂಬೈನ ಪ್ರೈಂ ಲೊಕೇಶನ್​ನಲ್ಲಿಯೇ ಇವೆ. ಆದರೆ ಇದರಲ್ಲೊಂದು ಮನೆಯಲ್ಲಿ ಅಮಿತಾಬ್ ಬಚ್ಚನ್ ತಮ್ಮ ಪುತ್ರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಅಮಿತಾಬ್ ಬಚ್ಚನ್ ತಮ್ಮ ಪುತ್ರಿ ಶ್ವೇತಾ ನಂದಾಗೆ ತಮ್ಮ ಪ್ರತೀಕ್ಷಾ ಬಂಗ್ಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿಶಾಲ ಜಾಗದಲ್ಲಿ ಅಮಿತಾಬ್ ಬಚ್ಚನ್ ದಶಕಗಳ ಹಿಂದೆ ಬಂಗ್ಲೆ ಕಟ್ಟಿಕೊಂಡಿದ್ದರು. ಅಂದಹಾಗೆ ಪ್ರತೀಕ್ಷಾ ನಿರ್ಮಿಸಲಾಗಿರುವ ಸ್ಥಳ ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಖರೀದಿಸಿದ ಮೊದಲ ಆಸ್ತಿ. ಹಾಗಾಗಿ ಅದರ ಬಗ್ಗೆ ಬಚ್ಚನ್​ಗೆ ವಿಶೇಷ ಅಕ್ಕರೆ ಇತ್ತು. ಇದೀಗ ಅದೇ ಅಕ್ಕರೆಯ ಸ್ಥಳವನ್ನು ತಮ್ಮ ಅಕ್ಕರೆಯ ಮಗಳು ಶ್ವೇತಾ ನಂದಾಗೆ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ:ರಿಯಲ್ ಎಸ್ಟೇಟ್ ಬ್ಯುಸಿನೆಸ್ ವಿಸ್ತರಿಸಿದ ಅಮಿತಾಬ್ ಬಚ್ಚನ್, ಸಾರಾ-ಕಾರ್ತಿಕ್​ ಸಹ ಹಿಂದುಳಿದಿಲ್ಲ

ಬಚ್ಚನ್, ಉಡುಗೊರೆಯಾಗಿ ನೀಡಿರುವ ಸ್ಥಳದ ಈಗಿನ ಅಧಿಕೃತ ಮೌಲ್ಯ ಸುಮಾರು 50.63 ಕೋಟಿ ಎನ್ನಲಾಗುತ್ತಿದೆ. ಸ್ಥಳದ ಅಸಲಿ ಮೌಲ್ಯ ಇದಕ್ಕಿಂತಲೂ ಸುಮಾರು 25-30% ಹೆಚ್ಚಿಗೆ ಇದೆ. ಬಚ್ಚನ್ ಉಡುಗೊರೆ ನೀಡಿರುವ ಜಾಗ ಮತ್ತು ಬಂಗ್ಲೆ ಒಟ್ಟು 1564 ಚದರ ಅಡಿಗಳಿವೆ. ಈ ಜಾಗವು ಎರಡು ಭಾಗಗಳಲ್ಲಿ ವಿಭಾಗಗೊಂಡಿದೆ. ಒಂದು ಭಾಗವನ್ನು ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಜಂಟಿಯಾಗಿ ಹೊಂದಿದ್ದರೆ, ಇನ್ನೊಂದು ಭಾಗಕ್ಕೆ ಅಮಿತಾಬ್ ಬಚ್ಚನ್ ಮಾತ್ರವೇ ಮಾಲೀಕರಾಗಿದ್ದರು. ಇದೀಗ ಈ ಎರಡೂ ಭಾಗವನ್ನು ಶ್ವೇತಾ ನಂದಾಗೆ ಉಡುಗೊರೆಯಾಗಿ ಹಸ್ತಾಂತರಿಸಲಾಗಿದೆ.

‘ಪ್ರತೀಕ್ಷಾ’ ಮನೆಯಿಂದ ತುಸುವೇ ದೂರದಲ್ಲಿ ಬಚ್ಚನ್​ರ ಮತ್ತೊಂದು ಬಂಗ್ಲೆ ಜಲ್ಸಾ ಸಹ ಇದೆ. ಈ ಜಾಗವನ್ನು ನಿರ್ದೇಶಕ ರಮೇಶ್ ಸಿಪ್ಪಿ ಅವರು ಬಚ್ಚನ್​ಗೆ ಉಡುಗೊರೆಯಾಗಿ ದಶಕಗಳ ಹಿಂದೆ ನೀಡಿದ್ದರು. ಈಗ ಇದರ ಮೌಲ್ಯ ಸುಮಾರು 60 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. ಇದರ ಹೊರತಾಗಿ ಮುಂಬೈನಲ್ಲಿ ಮತ್ತೊಂದು ಬಂಗ್ಲೆ ಸಹ ಬಚ್ಚನ್ ಹೆಸರಿನಲ್ಲಿದೆ. ‘ಜನಕ್’ ಹೆಸರಿನ ಆ ಬಂಗ್ಲೆಯನ್ನು ಕಚೇರಿಯ ರೀತಿಯಲ್ಲಿ ಬಚ್ಚನ್ ಮತ್ತು ಅವರ ಕುಟುಂಬ ಬಳಸುತ್ತಿದೆ. ಅವರ ನಿರ್ಮಾಣ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳ ಕಚೇರಿಗಳು ಆ ಬಂಗ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಮೂರು ಬಂಗ್ಲೆಗಳ ಹೊರತಾಗಿ ಕೆಲವು ಅಪಾರ್ಟಮೆಂಟ್​ ಫ್ಲಾಟ್​ಗಳ ಮೇಲೂ ಬಚ್ಚನ್ ಬಂಡವಾಳ ತೊಡಗಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್