AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಆಪ್ತನ ಮನೆ ಮೇಲೆ ಗುಂಡಿನ ದಾಳಿ, ಹೊಣೆ ಹೊತ್ತುಕೊಂಡ ಲಾರೆನ್ಸ್ ಬಿಷ್ಣೋಯಿ

Salman Khan: ಸಲ್ಮಾನ್ ಖಾನ್​ಗೆ ಆಪ್ತವಾಗಿರುವ ಗಾಯಕರೊಬ್ಬರ ಮನೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಸಲ್ಮಾನ್ ಖಾನ್ ಜೊತೆ ಆಪ್ತವಾಗಿರುವ ಕಾರಣದಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಸಲ್ಮಾನ್ ಖಾನ್​ರ ವೈರಿ ಲಾರೆನ್ಸ್ ಬಿಷ್ಣೋಯಿ ಹೇಳಿಕೊಂಡಿದ್ದಾನೆ.

ಸಲ್ಮಾನ್ ಖಾನ್ ಆಪ್ತನ ಮನೆ ಮೇಲೆ ಗುಂಡಿನ ದಾಳಿ, ಹೊಣೆ ಹೊತ್ತುಕೊಂಡ ಲಾರೆನ್ಸ್ ಬಿಷ್ಣೋಯಿ
Follow us
ಮಂಜುನಾಥ ಸಿ.
|

Updated on: Nov 26, 2023 | 5:14 PM

ಸಲ್ಮಾನ್ ಖಾನ್ (Salman Khan) ಆಪ್ತ ಎನ್ನಲಾಗುವ ಗಾಯಕನ ಮೇಲೆ ಅಗಂತುಕರ ಗುಂಪೊಂದು ಗುಂಡಿನ ದಾಳಿ ಮಾಡಿದೆ. ಘಟನೆ ನಡೆದಿರುವುದು ದೂರದ ಕೆನಡಾನಲ್ಲಿ. ಜನಪ್ರಿಯ ಪಂಜಾಬಿ ಗಾಯಕ ಜಿಪ್ಪಿ ಗೆರೆವಾಲ್​ರ ಕೆನಡಾದ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿ ತನ್ನ ನಿರ್ದೇಶನದಿಂದಲೇ ನಡೆದಿದೆ ಎಂದು ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಹೇಳಿಕೊಂಡಿದ್ದು, ಜಿಪ್ಪಿ ಗೆರೆವಾಲ್, ಸಲ್ಮಾನ್ ಖಾನ್​ಗೆ ಆತ್ಮೀಯನಾಗಿರುವ ಕಾರಣಕ್ಕೆ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದೇವೆ ಎಂದಿದ್ದಾನೆ.

ಸಲ್ಮಾನ್ ಖಾನ್ ಜೊತೆಗೆ ನಿನಗೆ ನಿಕಟ ಸಂಬಂಧ ಇದ್ದೊಡನೆ ಅದು ನಿನ್ನನ್ನು ಕಾಪಾಡುವುದಿಲ್ಲ. ನಿನ್ನ ‘ಸಹೋದರ’ (ಸಲ್ಮಾನ್ ಖಾನ್) ಈಗ ಬಹಿರಂಗವಾಗಿ ಬಂದು ನಿನ್ನನ್ನು ರಕ್ಷಿಸಿಕೊಳ್ಳಲಿ ನೋಡೋಣ. ಈಗ ನಾವು ನೀಡಿರುವ ಸಂದೇಶ ಸಲ್ಮಾನ್ ಖಾನ್‌ಗಾಗಿ. ನಿನ್ನನ್ನು ನಮ್ಮಿಂದ ದಾವೂದ್ ಇಬ್ರಾಹಿಂ ರಕ್ಷಿಸುತ್ತಾನೆ ಎಂದುಕೊಂಡು ಸುಖವಾಗಿ ಕಾಲ ಕಳೆಯಬೇಡ’’ ಎಂದು ಲಾರೆನ್ಸ್ ಬಿಷ್ಣೊಯಿ ಫೇಸ್​ಬುಕ್​ನಲ್ಲಿ ಜಿಪ್ಪಿ ಗೆರೆವಾಲ್​ ಗೆ ಪೋಸ್ಟ್ ಮಾಡಿದ್ದಾನೆ. ಇದಿಷ್ಟೆ ಅಲ್ಲದೆ, ಕೆನಡಾದ ರಾಕ್ ಏರಿಯಾ ವೆಂಕೋವರ್​ನಲ್ಲಿ ನಡೆದ ಶೂಟಿಂಗ್​ಗೆ ನಾನೇ ಕಾರಣ ಎಂದೂ ಸಹ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ:ಸಲ್ಮಾನ್ ಖಾನ್​ಗೆ ಹೇಗಿದೆ ನೋಡಿ ಭದ್ರತೆ; ಸಲ್ಲು ಬಳಿ ಯಾರೂ ಸುಳಿಯುವ ಹಾಗಿಲ್ಲ..

ಲಾರೆನ್ಸ್ ಬಿಷ್ಣೋಯಿ ಪಂಜಾಜ್ ಪ್ರಾಂತ್ಯದ ಕುಖ್ಯಾತ ಭೂಗತ ಪಾತಕಿ ಆಗಿದ್ದು ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದ. ಹಲವು ಕೊಲೆ, ಸುಲಿಗೆ, ಬೆದರಿಕೆ ಪ್ರಕರಣಗಳು ಈತನ ಮೇಲಿದ್ದು, ಈ ಮೊದಲೂ ಸಹ ಕೆಲವು ಬಾರಿ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಪ್ರಯತ್ನ ಮಾಡಿ ವಿಫಲನಾಗಿದ್ದಾನೆ. ಪಂಜಾಬಿನ ಜನಪ್ರಿಯ ಗಾಯಕ ಹಾಗೂ ಕಾಂಗ್ರೆಸ್ ಸದಸ್ಯ ಸಿಧು ಮೂಸೆವಾಲ ಹತ್ಯೆಯಲ್ಲಿಯೂ ಇವನ ಹಾಗೂ ಇವನ ಆಪ್ತರಾದ ಗೋಲ್ಡಿ ಬ್ರದರ್ಸ್ ಅವರ ಕೈವಾಡ ಇತ್ತು. ಇದನ್ನು ಬಹಿರಂಗವಾಗಿಯೇ ಇವರುಗಳು ಒಪ್ಪಿಕೊಂಡಿದ್ದರು.

ಸಲ್ಮಾನ್ ಖಾನ್ ಮೇಲೆ ಕೃಷ್ಣಮೃಗ ಕೊಂದ ಆರೋಪವಿದ್ದು, ಇದೇ ಕಾರಣಕ್ಕೆ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಪಟ್ಟು ಹಿಡಿದಿದ್ದಾನೆ. ಅವನಿಗೆ ಬಿಷ್ಣೋಯಿ ಸಮುದಾಯದ ಬೆಂಬಲವೂ ಇದೆ. ಬಿಷ್ಣೋಯಿ ಸಮುದಾಯಕ್ಕೆ ಕೃಷ್ಣಮೃಗ ದೇವರ ಸಮಾನ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ