58ನೇ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಲಿಯುತ್ತಿರುವ ನಟ ಆಮಿರ್​ ಖಾನ್​

ಹೊಸ ವಿಷಯಗಳನ್ನು ಕಲಿಯುವಲ್ಲಿ ಆಮಿರ್​ ಖಾನ್​ ಎಂದಿಗೂ ಹಿಂದೇಟು ಹಾಕಿದವರಲ್ಲ. ಈಗ ಅವರಿಗೆ ಸಂಗೀತದ ಬಗ್ಗೆ ಆಸಕ್ತಿ ಮೂಡಿದೆ. ಪ್ರತಿ ದಿನ ಸಂಗೀತದ ಅಭ್ಯಾಸಕ್ಕಾಗಿ ಒಂದು ಗಂಟೆ ಮೀಸಲಿಡುತ್ತಿದ್ದಾರೆ. ಮಗಳು ಇರಾ ಖಾನ್ ಮದುವೆಯ ಕೆಲಸಗಳಲ್ಲೂ ಅವರು ಬ್ಯುಸಿ ಆಗಿದ್ದಾರೆ.

58ನೇ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಲಿಯುತ್ತಿರುವ ನಟ ಆಮಿರ್​ ಖಾನ್​
ಆಮಿರ್​ ಖಾನ್​
Follow us
ಮದನ್​ ಕುಮಾರ್​
|

Updated on:Dec 31, 2023 | 7:58 AM

ಖ್ಯಾತ ನಟ ಆಮಿರ್​ ಖಾನ್​ (Aamir Khan) ಅವರು ಈಗ ನಟನೆಯಿಂದ ಸ್ವಲ್ಪ ದೂರ ಉಳಿದುಕೊಂಡಿದ್ದಾರೆ. ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಸೋತ ಬಳಿಕ ಅವರು ದೊಡ್ಡ ಬ್ರೇಕ್​ ಪಡೆದುಕೊಂಡಿದ್ದಾರೆ. ಈ ಸಮಯದಲ್ಲಿ ಅವರು ಹೊಸ ವಿಷಯಗಳನ್ನು ಕಲಿಯುವತ್ತ ಆಸಕ್ತಿ ತೋರಿಸುತ್ತಿದ್ದಾರೆ. ಅಚ್ಚರಿ ಏನೆಂದರೆ, ಆಮಿರ್ ಖಾನ್ ಅವರು ಈಗ ಶಾಸ್ತ್ರೀಯ ಸಂಗೀತ (Classical Music) ಕಲಿಯುತ್ತಿದ್ದಾರೆ. 58ನೇ ವಯಸ್ಸಿನಲ್ಲಿ ಅವರು ಬಹಳ ಉತ್ಸಾಹದಿಂದ ಸಂಗೀತ ಕಲಿಯುತ್ತಿದ್ದಾರೆ ಎಂದು ವರದಿ ಆಗಿದೆ. ಮುಂದಿನ ಸಿನಿಮಾ ಸಲುವಾಗಿ ಅವರು ಸಂಗೀತಾಭ್ಯಾಸ ಮಾಡುತ್ತಿದ್ದಾರಾ ಎಂಬ ಕುತೂಹಲ ಮೂಡಿದೆ.

ಹೊಸ ವಿಷಯಗಳನ್ನು ಕಲಿಯುವಲ್ಲಿ ಆಮಿರ್​ ಖಾನ್​ ಎಂದಿಗೂ ಹಿಂದೇಟು ಹಾಕಿದವರಲ್ಲ. ಈ ಮೊದಲು ಅವರು ಮರಾಠಿ ಕಲಿತು ಚೆನ್ನಾಗಿ ಮಾತನಾಡಿದ್ದರು. ಬಿಡುವಿನ ವೇಳೆಯಲ್ಲಿ ಅಡುಗೆ ಕಲಿತುಕೊಂಡಿದ್ದರು. ಈಗ ಅವರಿಗೆ ಸಂಗೀತದ ಬಗ್ಗೆ ಆಸಕ್ತಿ ಮೂಡಿದೆ. ಪ್ರತಿ ದಿನ ಸಂಗೀತದ ಅಭ್ಯಾಸಕ್ಕಾಗಿ ಒಂದು ಗಂಟೆ ಮೀಸಲಿಡುತ್ತಿದ್ದಾರೆ. ಇದರ ಹಿಂದಿನ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ಆಮಿರ್​ ಖಾನ್​ ಜೊತೆ ನಟಿ ಜೆನಿಲಿಯಾ ಡಿಸೋಜಾ ರೊಮ್ಯಾನ್ಸ್​

ಆಮಿರ್​ ಖಾನ್​ ಅವರು ನಿರ್ಮಾಪಕ ಕೂಡ ಹೌದು. ಸನ್ನಿ ಡಿಯೋಲ್ ನಟನೆಯ ‘ಲಾಹೋರ್​ 1947’ ಚಿತ್ರಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ. ಇದಲ್ಲದೇ, ‘ಸಿತಾರೆ ಜಮೀನ್​​ ಪರ್​’ ಚಿತ್ರದಲ್ಲಿ ಆಮಿರ್​ ಖಾನ್ ನಟಿಸಲಿದ್ದಾರೆ. ಈ ಎರಡೂ ಸಿನಿಮಾಗಳ ಮೇಲೆ ನಿರೀಕ್ಷೆ ಇದೆ. ಹೊಸ ರೂಪದಲ್ಲಿ ಆಮಿರ್​ ಖಾನ್​ ಅವರನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: Aamir Khan: ಚೆನ್ನೈನಲ್ಲಿ ಕಮಲ್​ ಹಾಸನ್​ ಬರ್ತ್​ಡೇ ಪಾರ್ಟಿಗೆ ಹಾಜರಿ ಹಾಕಿದ ಆಮಿರ್​ ಖಾನ್​, ಸೂರ್ಯ; ಫೋಟೋ ವೈರಲ್​

‘ಲಾಲ್​ ಸಿಂಗ್ ಚೆಡ್ಡಾ’ ಬಿಡುಗಡೆ ಆದ ಬಳಿಕ ಆಮಿರ್​ ಖಾನ್​ ಅವರು ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಅಲ್ಲದೇ, ಮಗಳು ಇರಾ ಖಾನ್​ ಮದುವೆ ಸಲುವಾಗಿಯೂ ಅವರು ಸಮಯ ಮೀಸಲಿಟ್ಟಿದ್ದಾರೆ. ಫಿಟ್ನೆಸ್​ ಟ್ರೇನರ್​ ನೂಪುರ್​ ಶಿಖಾರೆ ಜೊತೆ ಇರಾ ಖಾನ್​ ಮದುವೆ ನೆರವೇರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:04 am, Sun, 31 December 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ