ಬಾಲಿವುಡ್ನ ಭರವಸೆಯ ನಟಿಯರಲ್ಲಿ ಅನನ್ಯಾ ಪಾಂಡೆ ಪ್ರಮುಖರು.
ಈಗಾಗಲೇ ಅನನ್ಯಾ ಪಾಂಡೆ ಬತ್ತಳಿಕೆಯಲ್ಲಿ ಹಲವಾರು ಚಿತ್ರಗಳಿದ್ದು, ವಿವಿಧ ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದಾರೆ.
ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರದಲ್ಲಿ ಸದ್ಯ ಅನನ್ಯಾ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ಬಾಕ್ಸಿಂಗ್ ತಾರೆ ಮೈಕ್ ಟೈಸನ್ ಕೂಡ ಬಣ್ಣ ಹಚ್ಚುತ್ತಿದ್ದಾರೆ.
ಲಾಸ್ ವೇಗಾಸ್ನಲ್ಲಿ ‘ಲೈಗರ್’ ಚಿತ್ರೀಕರಣ ನಡೆಯುತ್ತಿದ್ದು, ಅನನ್ಯಾ ಚಿತ್ರೀಕರಣದ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಅವರು ಅಲ್ಲಿ ಸೂರ್ಯಾಸ್ತದ ಸಮಯದಲ್ಲಿ ಬೀಚ್ ಬಳಿ ತೆಗೆಸಿಕೊಂಡ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಬಿಕಿನಿ ಉಡುಗೆಯ ಮೂಲಕ ಅನನ್ಯಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಈ ಚಿತ್ರಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.
Published On - 4:19 pm, Sun, 28 November 21