ಮುಂಬೈ: ಡ್ರಗ್ಸ್ ಕೇಸ್ನಲ್ಲಿ ಆರ್ಯನ್ ಖಾನ್ ಬಂಧನದ ಪ್ರಕರಣಕ್ಕೆ ಸಂಬಂದಪಟ್ಟಂತೆ ಬಾಲಿವುಡ್ ನಟಿ ಅನನ್ಯಾ ಪಾಂಡೆಗೆ ಎನ್ಸಿಬಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರು. ನಿನ್ನೆ (ಗುರುವಾರ) ಮುಂಬೈ NCB ಕಚೇರಿಗೆ ಬಂದಾಗ ಭಯಗೊಂಡಿದ್ದ ಅನನ್ಯಾ ಪಾಂಡೆ, ವಿಚಾರಣೆಗೂ ಮೊದಲು ಕಣ್ಣೀರಿಟ್ಟಿದ್ದರು. ಸಮಾಧಾನ ಮಾಡಿದ ಬಳಿಕ NCB ಅಧಿಕಾರಿಗಳು ಅವರನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್ಸಿಬಿ ಅಧಿಕಾರಿಗಳ ಪ್ರಶ್ನೆಗೆ ಅವರು ಉತ್ತರಿಸಿದ್ದು, ಇಂದೂ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ.
ನಟಿ ಅನನ್ಯಾ ಅವರನ್ನು ನಿನ್ನೆ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಡ್ರಗ್ಸ್ ವಿಚಾರವಾಗಿ ಆರ್ಯನ್, ಅನನ್ಯಾ ನಡುವೆ ಚಾಟ್ ನಡೆದಿದ್ದರ ಕುರಿತು ಅದಿಕಾರಿಗಳು ಪ್ರಶ್ನಿಸಿದ್ದರು. ಈ ವೇಳೆ ಅನನ್ಯಾ, ತಾನು ಈವರೆಗೂ ಡ್ರಗ್ಸ್ ತೆಗೆದುಕೊಂಡಿಲ್ಲ. ಹಾಗೂ ಆರ್ಯನ್ ಖಾನ್ ಜತೆ ಡ್ರಗ್ಸ್ ವಿಚಾರವಾಗಿ ಚಾಟ್ ಮಾಡಿಲ್ಲ. ಸಿಗರೇಟ್ ಬಗ್ಗೆ ವಾಟ್ಸಾಪ್ ಮೆಸೇಜ್, ಸಂಭಾಷಣೆ ಮಾಡಿದ್ದೆವು. ಆದರೆ ಡ್ರಗ್ಸ್ ಬಗ್ಗೆ ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾಗಿ ವರದಿಗಳು ತಿಳಿಸಿವೆ.
ಇದೇ ವೇಳೆ ಎನ್ಸಿಬಿ ಮೂಲಗಳ ಪ್ರಕಾರ, ಅನನ್ಯಾ ತಾವು ಆರ್ಯನ್ಗೆ ಡ್ರಗ್ಸ್ ಒದಗಿಸಿಲ್ಲ ಮತ್ತು ಅವರ ವಿರುದ್ಧ ಅದಕ್ಕೆ ಯಾವ ಸಾಕ್ಷ್ಯಗಳೂ ಇಲ್ಲ ಎಂದು ತಿಳಿಸಿವೆ. ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 2ರಂದು ಮುಂಬೈನ ಐಷಾರಾಮಿ ಹಡಗೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಇದುವರೆಗೆ ಹಲವರನ್ನು ಬಂಧಿಸಲಾಗಿದೆ ಎಂದು ಎನ್ಸಿಬಿ ತಿಳಿಸಿದೆ. ಆರ್ಯನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ಹೈಕೋರ್ಟ್ಗೆ ಮನವಿ ಸಲ್ಲಿಸಲಾಗಿದೆ. ಅಕ್ಟೋಬರ್ 26ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ:
Ananya Panday: ‘ಶಾರುಖ್ ಖಾನ್ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್ ಸುಳಿಯಲ್ಲಿ ನಟಿ
Anushka Sharma: ಒಂದೇ ಒಂದು ಚಿತ್ರದಿಂದ ಅಭಿಮಾನಿಗಳ ಮನಗೆದ್ದ ಅನುಷ್ಕಾ; ಅಂಥದ್ದೇನಿದೆ ಅದರಲ್ಲಿ?
Published On - 12:32 pm, Fri, 22 October 21