
‘ಕೆಜಿಎಫ್’ (KGF) ಸಿನಿಮಾ ಸರಣಿಯಿಂದಾಗಿ ಪ್ಯಾನ್ ಇಂಡಿಯಾ ಸ್ಟಾರ್ ನಿರ್ದೇಶಕ ಎನಿಸಿಕೊಂಡಿರುವ ಪ್ರಶಾಂತ್ ನೀಲ್, ‘ಸಲಾರ್’ ಸಿನಿಮಾ ಮೂಲಕ, ‘ಕೆಜಿಎಫ್’ ಗೆಲುವು ಅದೃಷ್ಟವಲ್ಲ ಎಂದು ಸಾಭೀತುಪಡಿಸಿದ್ದಾರೆ. ಇದೀಗ ಪ್ರಶಾಂತ್ ನೀಲ್, ಜೂ ಎನ್ಟಿಆರ್ ನಟನೆಯ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಡಲಾಗಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದು, ಕೆಲವು ಕನ್ನಡದ ನಟರೂ ಸಹ ಸಿನಿಮಾನಲ್ಲಿದ್ದಾರೆ. ಇದೀಗ ಪ್ರಶಾಂತ್ ನೀಲ್ ಅವರು ‘ಡ್ರ್ಯಾಗನ್’ ಸಿನಿಮಾಕ್ಕಾಗಿ ಬಾಲಿವುಡ್ನ ಸ್ಟಾರ್ ನಟರೊಬ್ಬರನ್ನು ಕರೆ ತಂದದ್ದಾರೆ.
ಜೂ ಎನ್ಟಿಆರ್ ಸಿನಿಮಾನಲ್ಲಿ ಬಾಲಿವುಡ್ನ ಹಿರಿಯ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ಅನಿಲ್ ಕಪೂರ್ ನಟಿಸುತ್ತಿದ್ದಾರೆ. ಸ್ವತಃ ಅನಿಲ್ ಕಪೂರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಡ್ರ್ಯಾಗನ್’ ಸಿನಿಮಾದ ಐಎಂಡಿಬಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಅನಿಲ್ ಕಪೂರ್ ಅವರು ಈ ಹಿಂದೆ ಸಂದೀಪ್ ರೆಡ್ಡಿ ವಂಗಾ ನಟನೆಯ ‘ಅನಿಮಲ್’ ಸಿನಿಮಾನಲ್ಲಿ ನಟಿಸಿದ್ದು ಅದು ಭಾರಿ ಯಶಸ್ವಿ ಆಗಿತ್ತು, ಆ ಸಿನಿಮಾವನ್ನು ದಕ್ಷಿಣದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದರು. ಈಗ ಮತ್ತೊಮ್ಮೆ ದಕ್ಷಿಣದ ನಿರ್ದೇಶಕನ ಸಿನಿಮಾನಲ್ಲಿ ಅನಿಲ್ ಕಪೂರ್ ನಟಿಸುತ್ತಿದ್ದು, ನೀಲ್ ಅವರು ಅನಿಲ್ ಅವರಿಗಾಗಿ ಪವರ್ಫುಲ್ ಪಾತ್ರವನ್ನೇ ರೆಡಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ‘ಡ್ರ್ಯಾಗನ್’ ಸಿನಿಮಾದ ಮೂಲಕ ನೀಲ್ ಮೊದಲ ಬಾರಿಗೆ ಭಾರತದ ಗಡಿ ದಾಟುತ್ತಿದ್ದಾರೆ. ನೀಲ್, ಈ ವರೆಗೆ ಕೇವಲ ಭಾರತದಲ್ಲಿ ಮಾತ್ರವೇ ಸಿನಿಮಾ ಶೂಟಿಂಗ್ ಮಾಡಿದ್ದರು. ಆದರೆ ‘ಡ್ರ್ಯಾಗನ್’ ಸಿನಿಮಾಕ್ಕಾಗಿ ವಿದೇಶಕ್ಕೆ ಕಾಲಿರಿಸಿದ್ದಾರೆ. ಆಫ್ರಿಕಾನಲ್ಲಿ ‘ಡ್ರ್ಯಾಗನ್’ ಸಿನಿಮಾದ ಆಕ್ಷನ್ ದೃಶ್ಯಗಳ ಶೂಟಿಂಗ್ ಮಾಡಲಿದ್ದಾರೆ.
ಇದನ್ನೂ ಓದಿ:‘ವಾರ್ 2’ ಸೋತರೂ ಜೂ ಎನ್ಟಿಆರ್ಗೆ ಮತ್ತೊಂದು ಅವಕಾಶ ಕೊಟ್ಟ ವೈಆರ್ಎಫ್
‘ಡ್ರ್ಯಾಗನ್’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಈಗಾಗಲೇ ಶೂಟಿಂಗ್ನಲ್ಲಿ ರುಕ್ಮಿಣಿ ಭಾಗವಹಿಸಿದ್ದಾರೆ. ಮಲಯಾಳಂನ ಸ್ಟಾರ್ ನಟ ಟೊವಿನೋ ಥಾಮಸ್ ಸಹ ‘ಡ್ರ್ಯಾಗನ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟೊವಿನೊ ಥಾಮಸ್ ಅವರಿಗೆ ಇದು ಮೊದಲ ತೆಲುಗು ಸಿನಿಮಾ ಆಗಿದೆ. ಈ ಹಿಂದೆ ಎರಡು ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆದರೆ ಇದು ಅವರಿಗೆ ಮೊದಲ ತೆಲುಗು ಸಿನಿಮಾ ಆಗಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಸಿನಿಮಾ ಇದೇ ವರ್ಷದ ಅಂತ್ಯದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ