ವಿರಾಟ್ ಕೊಹ್ಲಿ ತೆಗೆದ ಚಿತ್ರ ಹಂಚಿಕೊಂಡ ಅನುಷ್ಕಾ; ನೋಡಿ ಸುಮ್ಮನಿರಲಾಗದೇ ಕಾಮೆಂಟ್ ಮಾಡಿದ ಆಲಿಯಾ

| Updated By: shivaprasad.hs

Updated on: Aug 20, 2021 | 6:17 PM

ತಾರಾ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಡಿನ್ನರ್ ಡೇಟ್​ಗೆ ತೆರಳಿದ್ದಾಗ ವಿರಾಟ್ ತೆಗೆದ ಚಿತ್ರವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ಆಲಿಯಾ ಭಟ್ ನಡೆ ಎಲ್ಲರ ಗಮನ ಸೆಳೆದಿದೆ.

ವಿರಾಟ್ ಕೊಹ್ಲಿ ತೆಗೆದ ಚಿತ್ರ ಹಂಚಿಕೊಂಡ ಅನುಷ್ಕಾ; ನೋಡಿ ಸುಮ್ಮನಿರಲಾಗದೇ ಕಾಮೆಂಟ್ ಮಾಡಿದ ಆಲಿಯಾ
ಅನುಷ್ಕಾ ಶರ್ಮಾ, ಆಲಿಯಾ ಭಟ್ (ಸಾಂದರ್ಭಿಕ ಚಿತ್ರ)
Follow us on

ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ಹಾಗೂ ಅನುಷ್ಕಾ ಶರ್ಮ(Anushka Sharma) ದಂಪತಿ ಲಾರ್ಡ್ಸ್ ಟೆಸ್ಟ್ ಜಯದ ಬೆನ್ನಲ್ಲೇ ಲಂಡನ್​ನ ರೆಸ್ಟೊರೆಂಟ್ ಒಂದರಲ್ಲಿ ವಿಜಯದ ಭೋಜನ ಸವಿದಿದ್ದಾರೆ. ಅಲ್ಲಿ ತೆಗೆಸಿಕೊಂಡ ಚಿತ್ರಗಳನ್ನು ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಂನಲ್ಲಿ ಸಂತಸದಿಂದ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಅನುಷ್ಕಾ ಅವರ ಅಂದವನ್ನು ಹಾಡಿಹೊಗಳುತ್ತಿದ್ದಾರೆ. ಇದಕ್ಕೆ ತಾರೆಗಳೂ ಹಿಂದೆ ಬಿದ್ದಿಲ್ಲ. ಬಾಲಿವುಡ್​ನಲ್ಲಿ ಸದ್ಯ ಮುಂಚೂಣಿಯಲ್ಲಿರುವ ನಟಿ ಆಲಿಯಾ ಭಟ್ ಕೂಡಾ ಚಿತ್ರವನ್ನು ನೋಡಿ ಸುಮ್ಮನಿರಲಾಗದೇ ಕಾಮೆಂಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮುಂದೆ ಮುದ್ದು ಮುದ್ದಾಗಿ ಕುಳಿತ ಅನುಷ್ಕಾರನ್ನು ‘ಗಾರ್ಜಿಯಸ್’(Gorgeous) ಎಂದು ಹೊಗಳಿದ್ದಾರೆ ಆಲಿಯಾ. ಸೆಲೆಬ್ರಿಟಿಗಳು ಪರಸ್ಪರರ ಪೋಸ್ಟ್​ಗಳಿಗೆ ಕಾಮೆಂಟ್ ಮಾಡುವುದು ಅಪರೂಪವಲ್ಲವಾದರೂ, ಆಲಿಯಾ ನಡೆಯಿಂದ ಈರ್ವರ ಅಭಿಮಾನಿಗಳು ಪುಳಕಿತಗೊಂಡಿದ್ದಾರೆ.

ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಲಂಡನ್​ನ ಟೆಂಡ್ರಿಲ್ ಹೋಟೆಲ್​ಗೆ ಭೇಟಿ ನೀಡಿ, ಭೋಜನ ಸವಿದಿದ್ದರು. ಈ ಚಿತ್ರವನ್ನು ರೆಸ್ಟೊರೆಂಟ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಸಂಭ್ರಮಿಸಿತ್ತು. ಅಲ್ಲಿನ ಪದಾರ್ಥಗಳನ್ನು ಹೊಗಳಿದ್ದ ವಿರುಷ್ಕಾ, ಮುಖ್ಯ ಬಾಣಸಿಗ ರಿಶಿಮ್ ಸಚ್ದೇವ ಹಾಗೂ ಹೊಟೆಲ್ ಸಿಬ್ಬಂದಿಗಳೊಂದಿಗೆ ಚಿತ್ರಗಳನ್ನೂ ತೆಗೆಸಿಕೊಂಡಿದ್ದರು. ಈ ಚಿತ್ರಗಳು ವೈರಲ್ ಆಗಿದ್ದವು.

ಅನುಷ್ಕಾ ಹಂಚಿಕೊಂಡ ಚಿತ್ರ:

ಅನುಷ್ಕಾ ಶರ್ಮಾ ತಮ್ಮ ಮಗಳು ವಮಿಕಾಳೊಂದಿಗೆ ವಿರಾಟ್ ಕೊಹ್ಲಿಯ ಇಂಗ್ಲೆಂಡ್ ಪ್ರವಾಸದಲ್ಲಿ ಜೊತೆಗೆ ತೆರಳಿದ್ದಾರೆ. ವಿರುಷ್ಕಾ ಜೋಡಿ ಲಂಡನ್​ನಲ್ಲಿ ಸುತ್ತಾಡುತ್ತಿರುವ ಚಿತ್ರಗಳನ್ನು ಆಗಾಗ ಹಂಚಿಕೊಂಡಿದ್ದರು. ಲಾರ್ಡ್ಸ್ ಟೆಸ್ಟ್​ನಲ್ಲಿ ಭಾರತ ಗೆದ್ದಾಗ ಅನುಷ್ಕಾ ಶರ್ಮಾ ಫೊಟೊಗಳನ್ನು ಹಂಚಿಕೊಂಡು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಆ ಫೊಟೊದಲ್ಲಿ ‘ಎಂತಹ ತಂಡವಿದು! ಎಂತಹ ಜಯವಿದು!’ ಎಂದು ಅವರು ಬರೆದುಕೊಂಡಿದ್ದರು. ಲಾರ್ಡ್ಸ್​​ನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ಭಾರತ 151 ರನ್​ಗಳ ಐತಿಹಾಸಿಕ ಜಯ ದಾಖಲಿಸಿತ್ತು.

ಅನುಷ್ಕಾ ವೃತ್ತಿ ಜೀವನದ ವಿಷಯಕ್ಕೆ ಬಂದರೆ ಅವರು ನಟನೆಯಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳದಿದ್ದರೂ ನಿರ್ಮಾಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ನಿಧನರಾದ ನಟ ಇರ್ಫಾನ್​ ಖಾನ್​ರ ಪುತ್ರ ಬಬಿಲ್ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ‘ಕಾಲ’ವನ್ನು ಅನುಷ್ಕಾ ನಿರ್ಮಿಸುತ್ತಿದ್ದಾರೆ. ಅವರ ನಿರ್ಮಾಣದ ವೆಬ್ ಸಿರೀಸ್ ‘ಪಾತಾಳ್ ಲೋಕ್’ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿತ್ತು. ಹಾಗೆಯೇ ನೆಟ್​ಫ್ಲಿಕ್ಸ್​ನಲ್ಲಿ ತೆರೆಕಂಡ ‘ಬುಲ್​ಬುಲ್’ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಅನುಷ್ಕಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದು 2018ರಲ್ಲೇ ಕೊನೆ. ಶಾರುಖ್ ಖಾನ್ ನಟನೆಯ ಜೀರೊ ಚಿತ್ರದಲ್ಲಿ ಅನುಷ್ಕಾ ಬಣ್ಣಹಚ್ಚಿದ್ದನ್ನು ಹೊರತು ಪಡಿಸಿ ನಂತರ ಅನುಷ್ಕಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ:

ವಿಜಯ್​ ದೇವರಕೊಂಡ ಡಿಮ್ಯಾಂಡ್​ಗೆ ಬೇಸತ್ತ ನಿರ್ದೇಶಕ; ಇದು ದುರಹಂಕಾರ ಎಂದ ಫ್ಯಾನ್ಸ್​

ರಣದೀಪ್ ಹೂಡಾ ತನಗೆ ಮೋಸ ಮಾಡಿದ್ದಾರೆಂದು 10 ಕೋಟಿ ದಾವೆ ಹೂಡಿದ ಯುವತಿ; ಪ್ರಕರಣವೇನು?

(Anushka Sharma shares her picture from dinner date and Alia Bhatt comments to that caught netizens attention)