ಸೊನಾಲಿ ಬೇಂದ್ರೆಗೆ ರಾತ್ರಿ ಕರೆ ಮಾಡಿ ‘ಓಡಿ ಹೋಗಿ ಮದ್ವೆ ಆಗೋಣ ಬಾ’ ಎಂದಿದ್ರಾ ಸುನೀಲ್​ ಶೆಟ್ಟಿ? ಇಲ್ಲಿದೆ ಅಸಲಿ ವಿಷಯ

ಸೊನಾಲಿ ಬೇಂದ್ರೆಗೆ ರಾತ್ರಿ ಕರೆ ಮಾಡಿ ‘ಓಡಿ ಹೋಗಿ ಮದ್ವೆ ಆಗೋಣ ಬಾ’ ಎಂದಿದ್ರಾ ಸುನೀಲ್​ ಶೆಟ್ಟಿ? ಇಲ್ಲಿದೆ ಅಸಲಿ ವಿಷಯ
ಸುನೀಲ್​ ಶೆಟ್ಟಿ - ಸೊನಾಲಿ ಬೇಂದ್ರೆ

ಆರಂಭದಲ್ಲಿ ಸುನೀಲ್​ ಶೆಟ್ಟಿ ಜೊತೆ ಕೇಳಿಬಂದ ಗಾಸಿಪ್​ಗಳಿಗೆ ಸೊನಾಲಿ ಬೇಂದ್ರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನಂತರದಲ್ಲಿ ಅವರ ಖಾಸಗಿ ಜೀವನದ ಮೇಲೆ ಅದು ಪರಿಣಾಮ ಬೀರಲು ಆರಂಭಿಸಿತು.

TV9kannada Web Team

| Edited By: Madan Kumar

Aug 21, 2021 | 8:21 AM

ಚಿತ್ರರಂಗದಲ್ಲಿನ ಗಾಸಿಪ್​ಗಳು ಯಾವ ಹಂತಕ್ಕೆ ಬೇಕಿದ್ದರೂ ತಲುಪುತ್ತವೆ. ಕೆಲವು ಸೆಲೆಬ್ರಿಟಿಗಳು ತಮ್ಮ ಬಗ್ಗೆ ಕೇಳಿಬಂದ ಗಾಸಿಪ್​ಗೆ ಹೆಚ್ಚೇನೂ ಪ್ರತಿಕ್ರಿಯಿಸದೇ ಸುಮ್ಮನೆ ನಕ್ಕು ಮುಂದೆ ಸಾಗುತ್ತಾರೆ. ಆದರೆ ಇನ್ನೂ ಕೆಲವು ಸ್ಟಾರ್​​ಗಳಿಗೆ ಗಾಸಿಪ್​ಗಳಿಂದ ತೀವ್ರ ತೊಂದರೆ ಉಂಟಾಗುವ ಪ್ರಸಂಗ ಎದುರಾಗುತ್ತದೆ. ಒಂದು ಕಾಲದಲ್ಲಿ ಬಾಲಿವುಡ್​ನ ಟಾಪ್​ ನಟಿಯಾಗಿದ್ದ ಸೊನಾಲಿ ಬೇಂದ್ರೆ (Sonali Bendre) ಅವರು ನೆನಪಿಸಿಕೊಂಡ ಅಂಥ ಒಂದು ಘಟನೆಯ ವಿವರ ಇಲ್ಲಿದೆ. ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಸೊನಾಲಿ ಬೇಂದ್ರೆ ಮತ್ತು ಸುನೀಲ್​ ಶೆಟ್ಟಿ (Suniel Shetty) ನಡುವೆ 90ರ ದಶಕದಲ್ಲಿ ಸಿಕ್ಕಾಪಟ್ಟೆ ಗುಸುಗುಸು ಕೇಳಿಬರುತ್ತಿತ್ತು.

ಆರಂಭದಲ್ಲಿ ಸೊನಾಲಿ ಬೇಂದ್ರೆ ಅವರು ಗಾಸಿಪ್​ಗಳಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನಂತರದಲ್ಲಿ ಅವರ ಖಾಸಗಿ ಜೀವನದ ಮೇಲೆ ಅದು ಪರಿಣಾಮ ಬೀರಲು ಆರಂಭಿಸಿತು. ಎಷ್ಟರಮಟ್ಟಿಗೆಂದರೆ, ಅಪರಿಚಿತ ವ್ಯಕ್ತಿಯೊಬ್ಬ ಮಧ್ಯರಾತ್ರಿ ಅವರ ಮನೆಗೆ ಕರೆ ಮಾಡಿ ತಾನು ಸುನೀಲ್ ಶೆಟ್ಟಿ ಎಂದು ಹೇಳಿಕೊಂಡಿದ್ದ. ಅಲ್ಲದೆ, ‘ಓಡಿ ಹೋಗಿ ಮದುವೆ ಆಗೋಣ ಬಾ’ ಎಂದು ಆಹ್ವಾನ ಕೂಡ ನೀಡಿದ್ದನಂತೆ. ಈ ಘಟನೆ ಸೊನಾಲಿಗೆ ನಿಜಕ್ಕೂ ಶಾಕಿಂಗ್​ ಆಗಿತ್ತು. ಕರೆ ಮಾಡಿದ ವ್ಯಕ್ತಿ ಸುನೀಲ್​ ಶೆಟ್ಟಿ ಅಲ್ಲ ಎಂಬುದು ಅವರಿಗೆ ಕ್ಷಣಾರ್ಧಲ್ಲೇ ಗೊತ್ತಾಗಿತ್ತು.

‘ನನಗೆ ಆಗ ಇನ್ನೂ ಮದುವೆ ಆಗಿರಲಿಲ್ಲ. ಹಾಗಾಗಿ ಎಷ್ಟೇ ಗಾಸಿಪ್​ಗಳು ಹರಿದಾಡಿದರೂ ನಾನು ಯಾರಿಗೂ ಉತ್ತರ ನೀಡಬೇಕಿರಲಿಲ್ಲ. ಆದರೆ ವಿವಾಹಿತನಾಗಿದ್ದ ಸುನೀಲ್​ ಶೆಟ್ಟಿ ಅವರಿಗೆ ಎಷ್ಟು ತೊಂದರೆ ಆಗಿರಬಹುದು ಅಂತ ನಾನು ಯೋಚಿಸುತ್ತಿದ್ದೆ. ಅದರ ಬಗ್ಗೆ ನಾನು ಅವರ ಜೊತೆ ಚರ್ಚೆ ಕೂಡ ಮಾಡಲಿಲ್ಲ’ ಎಂದು ಸೊನಾಲಿ ಬೇಂದ್ರೆ ಹೇಳಿದ್ದಾರೆ.

ಸೊನಾಲಿ ಬೇಂದ್ರೆ ಸಂಬಂಧಿಕರು ಸಹ ಮನೆಗೆ ಬಂದು ಅಸಂಬದ್ಧ ಮಾತುಗಳನ್ನು ಆಡುತ್ತಿದ್ದರು. ‘ಈಗ ನಿಮಗೆ ಬೇಕಾದಷ್ಟು ಹಣ ಸಿಗುತ್ತಿದೆ. ನಿಮ್ಮ ಮಗಳು ಯಾವ ಹೀರೋ ಜೊತೆ ಏನೇ ಮಾಡಿದರೂ ನಿಮಗೆ ಚಿಂತೆ ಇಲ್ಲ’ ಎಂದು ಸಂಬಂಧಿಕರು ನೇರವಾಗಿ ಮಾತನಾಡಿಕೊಂಡಿದ್ದು ಸೊನಾಲಿ ಬೇರೆ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು. 2004ರ ಬಳಿಕ ಸೊನಾಲಿ ಬೇಂದ್ರ ಮುಖ್ಯಪಾತ್ರಗಳಲ್ಲಿ ನಟಿಸಲೇ ಇಲ್ಲ. 2018ರಲ್ಲಿ ಅವರು ಕ್ಯಾನ್ಸರ್​ನಿಂದ ಬಳಲುತ್ತಿರುವುದು ತಿಳಿದುಬಂತು. 2016ರವರೆಗೂ ಅವರು ಟಿವಿ ಶೋಗಳಿಗೆ ನಿರ್ಣಾಯಕಿಯಾಗಿ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಣ್ಣದ ಲೋಕದಿಂದ ಅಂತರ ಕಾಪಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಬಾಯ್​ಫ್ರೆಂಡ್​ ರಾಹುಲ್​ ಜತೆ ಫೋಟೋ ಹಂಚಿಕೊಂಡ ಆಥಿಯಾ; ಇದು ನಿಜ ಎಂದ ಸುನೀಲ್​ ಶೆಟ್ಟಿ

‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು

Follow us on

Related Stories

Most Read Stories

Click on your DTH Provider to Add TV9 Kannada