‘ಜೇಹ್​’ಗೆ ಆರು ತಿಂಗಳ ಸಂಭ್ರಮ; ಹಾರೈಕೆಗಳ ಮಹಾಪೂರ ಹರಿಸಿದ ಕರೀನಾ

ಬಾಲಿವುಡ್​ನ ಖ್ಯಾತ ನಟಿ ಕರೀನಾ ಕಪೂರ್ ತಮ್ಮ ಎರಡನೇ ಮಗನಿಗೆ ಆರು ತಿಂಗಳ ಶುಭಾಶಯವನ್ನು ಕೋರಿದ್ದಾರೆ. ಈ ಕುರಿತು ಅವರು ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ.

‘ಜೇಹ್​’ಗೆ ಆರು ತಿಂಗಳ ಸಂಭ್ರಮ; ಹಾರೈಕೆಗಳ ಮಹಾಪೂರ ಹರಿಸಿದ ಕರೀನಾ
ಕರೀನಾ ಕಪೂರ್ ಮತ್ತು ಜೇಹ್ (ಕೃಪೆ: ಕರೀನಾ ಕಪೂರ್/ ಇನ್ಸ್ಟಾಗ್ರಾಂ)
Follow us
TV9 Web
| Updated By: shivaprasad.hs

Updated on: Aug 21, 2021 | 2:28 PM

ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಪತಿ ಸೈಫ್ ಅಲಿ ಖಾನ್ ಹಾಗೂ ಮಕ್ಕಳೊಂದಿಗೆ ಮಾಲ್ಡೀವ್ಸ್​ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಪತಿ ಸೈಫ್ ಅಲಿ ಖಾನ್​ರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದ ಕುಟುಂಬ, ಇದೀಗ ಎರಡನೇ ಮಗ ಜೇಹ್​ಗೆ ಆರು ತಿಂಗಳು ತುಂಬಿದ ಸಂಭ್ರಮದಲ್ಲಿದೆ. ಈ ಕುರಿತು ಕರೀನಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಮಗನಿಗೆ ಶುಭಹಾರೈಸಿದ್ದಾರೆ. ‘ಪ್ರೀತಿ, ಖುಷಿ ಮತ್ತು ಧೈರ್ಯ ಎಂದೆಂದಿಗೂ ನಿನ್ನಲ್ಲಿರಲಿ, ನನ್ನ ಜೀವಕ್ಕೆ 6 ತಿಂಗಳ ಶುಭಾಶಯಗಳು’ ಎಂದು ಅವರು ಬರೆದುಕೊಂಡಿದ್ದಾರೆ. ಇದರೊಂದಿಗೆ ಮಗನನ್ನು ಕರೆದುಕೊಂಡಿರುವ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.

ಮಾಲ್ಡೀವ್ಸ್​ಗೆ ತೆರಳಿರುವ ಕರೀನಾ ಅಲ್ಲಿನ ಚಿತ್ರಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಸೆಲ್ಫಿ ಸೀರೀಸ್ ಎಂದು ಅವರು ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಇದೀಗ ಜೇಹ್​ನೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಮೊದಲು ಕರೀನಾ ತಿಳಿಸಿದ್ದಂತೆ, ಜೇಹ್​ನ ಮುಖವನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವ ಕುರಿತು ತಾನಿನ್ನೂ ಯೋಚಿಸುತ್ತಿದ್ದೇನೆ ಎಂದಿದ್ದರು. ಆದರೆ ಅವರು ಬರೆದಿರುವ ‘ಪ್ರೆಗ್ನೆನ್ಸಿ ಬೈಬಲ್’ ಪುಸ್ತಕ ಬಿಡುಗಡೆಯ ನಂತರ ಅವರು ಜೇಹ್​ನ ಭಾವಚಿತ್ರವನ್ನು ಹಂಚಿಕೊಂಡಿದ್ದರು.

ಕರೀನಾ ಕಪೂರ್ ಹಂಚಿಕೊಂಡಿರುವ ಚಿತ್ರ:

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ಈರ್ವರು ಮಕ್ಕಳಿದ್ದು, ಮೊದಲನೆಯವನಿಗೆ ತೈಮೂರು ಅಲಿ ಖಾನ್ ಎಂದು ನಾಮಕರಣ ಮಾಡಿದ್ದಾರೆ. ಎರಡನೇ ಮಗುವಿಗೆ ಜಹಾಂಗೀರ್ ಅಲಿ ಖಾನ್ ಎಂದು ನಾಮಕರಣ ಮಾಡಲಾಗಿದೆ. ಮಕ್ಕಳಿಗೆ ಈ ಹೆಸರನ್ನಿಟ್ಟಿರುವುದಕ್ಕೆ ದಂಪತಿಗಳು ವಿರೋಧ ಎದುರಿಸಿದ್ದರೂ ಕೂಡಾ ಕರೀನಾ ಇದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಈ ವಿಷಯದಲ್ಲಿ ತಾನು ಸಾಧ್ಯವಾದಷ್ಟು ಧನಾತ್ಮಕವಾಗಿರುತ್ತೇನೆ. ಒಳ್ಳೆಯದಿರುವಲ್ಲಿ ಕೆಟ್ಟದ್ದೂ ಇರುತ್ತದೆ ಎಂದು ಕರೀನಾ ಸಂದರ್ಶನವೊಂದರಲ್ಲಿ ಹೇಳಿದ್ದರು.

ಚಿತ್ರಗಳ ವಿಷಯಕ್ಕೆ ಬಂದರೆ ಕರೀನಾ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಪತಿ ಸೈಫ್ ಅಲಿ ಖಾನ್ ಬತ್ತಳಿಕೆಯಲ್ಲೂ ಹಲವಾರು ಚಿತ್ರಗಳಿದ್ದು, ಅವರು ವೆಬ್ ಸಿರೀಸ್, ಚಿತ್ರಗಳು ಸೇರಿದಂತೆ ಹಲವಾರು ಪ್ರಾಜೆಕ್ಟ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

‘ನಮ್ಮ ಕಾಲದ ಈ 3 ಹೀರೋಯಿನ್ಸ್​ ನಂಗಿಷ್ಟ’: ಸಿಎಂ ಬಸವರಾಜ ಬೊಮ್ಮಾಯಿ ಹಂಚಿಕೊಂಡ ಫಿಲ್ಮೀ ಮಾತುಗಳು

ಕುತೂಹಲ ಮೂಡಿಸಿದ ‘ಮೇಡ್ ಇನ್ ಬೆಂಗಳೂರು’ ಟೀಸರ್; ಹೊಸಬರ ಪ್ರಯತ್ನಕ್ಕೆ ಅನಂತ್‌ನಾಗ್, ಸಾಯಿಕುಮಾರ್ ಸಾಥ್

(Kareena Kapoor wishes her son Jeh on his 6 months celebration)

ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ