ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೋನ ಮಲೈಕಾ ವೈರಲ್ ಮಾಡಿದ ಪ್ರಕರಣ; ತಿರುಗೇಟು ಕೊಟ್ಟ ನಟ

ವಯಸ್ಸಿನ ಅಂತರದ ವಿಚಾರದಲ್ಲೇ ಇಬ್ಬರನ್ನೂ ಟ್ರೋಲ್ ಮಾಡಲಾಗುತ್ತದೆ. ಕೆಲವೊಮ್ಮೆ ಅರ್ಜುನ್ ಕಪೂರ್ ಅವರು ಟೀಕೆಗಳಿಗೆ ಉತ್ತರಿಸುವ ಕೆಲಸ ಮಾಡುತ್ತಾರೆ.

ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೋನ ಮಲೈಕಾ ವೈರಲ್ ಮಾಡಿದ ಪ್ರಕರಣ; ತಿರುಗೇಟು ಕೊಟ್ಟ ನಟ
ಅರ್ಜುನ್ ಕಪೂರ್-ಮಲೈಕಾ

Updated on: May 30, 2023 | 7:52 AM

ನಟ ಅರ್ಜುನ್ ಕಪೂರ್ (Arjun Kapoor) ಅವರು ಇತ್ತೀಚೆಗೆ ನಟನೆ ಮೂಲಕ, ಸಿನಿಮಾ ಮೂಲಕ ಸುದ್ದಿ ಆಗುತ್ತಿಲ್ಲ. ಅವರೇನಿದ್ದರೂ ನಟಿ ಮಲೈಕಾ ಅರೋರಾ ವಿಚಾರದಲ್ಲೇ ಚರ್ಚೆ ಆಗುತ್ತಿರುತ್ತಾರೆ. ಸದಾ ಮಲೈಕಾ ಹಿಂದೆ ಸುತ್ತಾಡುತ್ತಾ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇವರಿಬ್ಬರೂ ಮದುವೆ ಆಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಫ್ಯಾನ್ಸ್ ಊಹಿಸಿದ ರೀತಿ ಆಗಿಲ್ಲ. ಈ ಜೋಡಿಯನ್ನು ಆಗಾಗ ಟ್ರೋಲ್ ಮಾಡಲಾಗುತ್ತದೆ. ಇತ್ತೀಚೆಗೆ ಅರ್ಜುನ್ ಕಪೂರ್ ಅವರ ಅರೆಬೆತ್ತಲೆ ಫೋಟೋ ಹಾಕಿ ಮಲೈಕಾ ಅರೋರಾ (Malaika Arora) ಟ್ರೋಲ್ ಆಗಿದ್ದರು. ಇದಕ್ಕೆ ನಟನ ಕಡೆಯಿಂದ ಪ್ರತಿಕ್ರಿಯೆ ಬಂದಿದೆ.

ಮಲೈಕಾ ಅರೋರಾಗಿಂತ ಅರ್ಜುನ್ ಕಪೂರ್ 12 ವರ್ಷ ಸಣ್ಣವರು. ಇವರ ಮಧ್ಯೆ ದೊಡ್ಡ ವಯಸ್ಸಿನ ಅಂತರ ಇದೆ. ಆದರೆ, ಇದು ಎಂದಿಗೂ ಅವರ ಪ್ರೀತಿಗೆ ಅಡ್ಡಿ ಆಗಲೇ ಇಲ್ಲ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ವಯಸ್ಸಿನ ಅಂತರದ ವಿಚಾರದಲ್ಲೇ ಇಬ್ಬರನ್ನೂ ಟ್ರೋಲ್ ಮಾಡಲಾಗುತ್ತದೆ. ಆದರೆ, ಇದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳುವವರೇ ಅಲ್ಲ. ಆದಾಗ್ಯೂ ಕೆಲವೊಮ್ಮೆ ಅರ್ಜುನ್ ಕಪೂರ್ ಅವರು ಟೀಕೆಗಳಿಗೆ ಉತ್ತರಿಸುವ ಕೆಲಸ ಮಾಡುತ್ತಾರೆ.

ಮಲೈಕಾ ಅವರು ಇತ್ತೀಚೆಗೆ ಫೋಟೋ ಒಂದನ್ನು ಇನ್​ಸ್ಟಾಗ್ರಾಮ್ ಸ್ಟೇಟಸ್​​ನಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋದಲ್ಲಿ ಅರ್ಜುನ್ ಕಪೂರ್ ಅವರ ಖಾಸಗಿ ಭಾಗವನ್ನು ದಿಂಬಿನಿಂದ ಮುಚ್ಚಲಾಗಿತ್ತು. ಉಳಿದಂತೆ ಯಾವುದೇ ಬಟ್ಟೆ ಇರಲಿಲ್ಲ. ಈ ರೀತಿಯ ಅರೆಬೆತ್ತಲೆ ಫೋಟೋ ಪೋಸ್ಟ್ ಮಾಡುವ ಅಗತ್ಯ ಏನಿತ್ತು ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಮಲೈಕಾ ಬಗ್ಗೆ ಸಾಕಷ್ಟು ಮಂದಿ ಟೀಕೆ ಮಾಡಿದ್ದರು. ನಾಚಿಕೆ ಮಾನಾ ಮರ್ಯಾದೆ ಇಲ್ಲವೇ ಎಂದು ನಟಿಯನ್ನು ಅನೇಕರು ಪ್ರಶ್ನಿಸಿದ್ದರು.

ಇದನ್ನೂ ಓದಿ: ಮಾಜಿ ಗಂಡನನ್ನು ತಬ್ಬಿಕೊಂಡ ಮಲೈಕಾ ಅರೋರಾ; ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ನೆಟ್ಟಿಗರು

ಮಲೈಕಾ ಬಗ್ಗೆ ಮಾತನಾಡಿದ್ದನ್ನು ಅರ್ಜುನ್ ಕಪೂರ್ ಬಳಿ ಸಹಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ. ಅವರು ಗೂಡಾರ್ಥದಲ್ಲಿ ಸ್ಟೇಟಸ್​ ಒಂದನ್ನು ಹಾಕಿದ್ದಾರೆ. ‘ಅಟೆಂಕ್ಷನ್​ಗಿಂತ ಶಾಂತಿಯನ್ನು ಆರಿಸಿ; ಮೌನವಾಗಿ ವಿಜೃಂಭಿಸಿ’ ಎಂದಿದ್ದಾರೆ. ಈ ಮೂಲಕ ಈ ರೀತಿಯ ಟ್ರೋಲ್ ಬಗ್ಗೆ ಗಮನ ನೀಡುವುದಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ ಎಂದು ಅನೇಕರು ಊಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:04 am, Tue, 30 May 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us